ಮಳೆಗಾಗಿ ಪುತ್ತೂರು ಮಹಾಲಿಂಗೇಶ್ವರ ದೇವರ ಮೊರೆ


Team Udayavani, Apr 25, 2019, 5:50 AM IST

17

ದೇವಾಲಯದ ಮುತ್ತು ಬೆಳೆದ ಕೆರೆ.

ನಗರ: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವರುಣನ ಕೃಪೆಗೆ ಪ್ರಾರ್ಥಿಸಿ ಎ. 27ರಂದು ಸೀಯಾಳಾಭಿಷೇಕ ನಡೆಯಲಿದೆ. ಪುತ್ತೂರು ಸೀಮೆಯ ಜನರು ಯಾವುದೇ ಸಾಮೂಹಿಕ ಕಷ್ಟ ಬಂದಾಗ ಮೊದಲು ಶರಣಾಗುವುದು ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರಿಗೆ. ಎಲ್ಲ ಕಷ್ಟಗಳನ್ನೂ ನಿವಾರಿಸುವ, ಊರಿಗೆ ಸುಭೀಕ್ಷೆ ನೀಡುವ ಪುತ್ತೂರª ಉಳ್ಳಾಯ ಎನ್ನುವ ಭಕ್ತಿ, ನಂಬಿಕೆ ಭಕ್ತರಲ್ಲಿದೆ.

ಪುತ್ತೂರು ವ್ಯಾಪ್ತಿಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಿದೆ. ಕಳೆದ ಬಾರಿ ಯುಗಾದಿಯ ಸಂದರ್ಭ ಅಂದರೆ ಮಾರ್ಚ್‌ ಮಧ್ಯಭಾಗದಲ್ಲಿ ಆರಂಭಗೊಂಡ ಮಳೆ ವಾರಕ್ಕೆ ಒಂದೆರಡರಂತೆ ನಿರಂತರ ವಾಗಿ ಸುರಿದಿತ್ತು. ಈ ಕಾರಣದಿಂದ ನೀರಿಗೆ ಸಂಬಂಧಿಸಿದ ಸಮಸ್ಯೆಯೂ ಕಡಿಮೆಯಾ ಗಿತ್ತು. ಆದರೆ ಈ ಬಾರಿ ಒಂದೆರಡು ಸಣ್ಣ ಪ್ರಮಾಣದ ಮಳೆ ಮಾತ್ರ ಸುರಿದಿದೆ.

ಮಹಾಲಿಂಗೇಶ್ವರ ದೇವಾಲಯದ ಹೊರಾಂಗಣದ ಬಳಿ ಇರುವ ಕೆರೆಯಲ್ಲಿ ನೀರು ತುಂಬಿದ ಕುರಿತು ಕಥೆಯೂ ಜನಜನಿತವಾಗಿದೆ. ಶತಮಾನಗಳ ಹಿಂದೆ ಕೆರೆ ತೋಡಿದಾಗ ಕೆರೆಯಲ್ಲಿ ನೀರು ಸಿಗಲಿಲ್ಲ. ಹೀಗೆ ವರುಣ ದೇವನ ಪ್ರೀತಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೀರು ಸಿಗದ ಕೆರೆಯ ದಂಡೆಯಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಆಗ ಕೆರೆಯ ತಳ ಭಾಗ ಒಡೆದು ನೀರು ಉಕ್ಕಿ ಬಂತು. ಎಲೆಯಲ್ಲಿ ಬಡಿಸಿದ್ದ ಅನ್ನದ ಅಗಳುಗಳು ಮುತ್ತುಗಳಾಗಿ ಪರಿವರ್ತನೆ ಯಾದವು. ಆದ ಕಾರಣ ಪುತ್ತೂರಿನ ಕೆರೆಗೆ ಮುತ್ತು ಬೆಳೆದ ಕೆರೆ ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಚರಿತ್ರೆಯಲ್ಲಿ ಕೆರೆಯ ಕಥೆಯೂ ಉಲ್ಲೇಖವಾಗಿದೆ.

ಶ್ರೀ ದೇವಾಲಯದಲ್ಲಿ ಆಡಳಿತ ಸಮಿತಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷ ವರುಣನ ಕೃಪೆಗಾಗಿ ಸೀಯಾಳಾಭಿಷೇಕ ನಡೆಯುತ್ತದೆ. ಗಣೇಶೋತ್ಸವ ಸಮಿತಿ ಯಿಂದ 15 ವರ್ಷಗಳಿಂದ ಈ ಸಂಪ್ರದಾಯ ವನ್ನು ಅನುಸರಿಸಲಾಗುತ್ತಿದೆ. ಈ ಬಾರಿ ದಿನಾಂಕ ನಿಗದಿಯಾಗಬೇಕಷ್ಟೆ.

ಫ‌ಲ: ಅಚಲ ನಂಬಿಕೆ
ಶ್ರೀ ಮಹಾಲಿಂಗೇಶ್ವರ ದೇವರ ಸತ್ಯ -ಧರ್ಮ ನಡೆಯಲ್ಲಿ ಮಾಡಿದ ಪ್ರಾರ್ಥನೆಗೆ ದೇವರು ಫಲ ನೀಡದೆ ಇರುವುದಿಲ್ಲ ಎನ್ನುವ ಅಚಲವಾದ ನಂಬಿಕೆ ಜನರಲ್ಲಿದೆ. ಪ್ರತಿ ವರ್ಷ ಪುತ್ತೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಎಳನೀರಿನ ಅಭಿಷೇಕವನ್ನು ಮಾಡಲಾಗುತ್ತದೆ. ಎಳನೀರಿನ ಅಭಿಷೇಕದ ಪ್ರತಿಫಲವಾಗಿ ವರುಣನ ಕೃಪೆಯಾಗುತ್ತದೆ. ಮಳೆ ಬಂದೇ ಬರುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ನಂಬಿಕೆ ಎಂದೂ ಸುಳ್ಳಾಗಿಲ್ಲ.

ವರುಣದೇವನ ಮೂರ್ತಿ
ದೇವಸ್ಥಾನದ ಮುತ್ತು ಬೆಳೆದ ಐತಿಹಾಸಿಕ ಕೆರೆಯ ನಡು ಮಂಟಪದ ಕೆಳಗೆ ವರುಣದೇವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಯನ್ನು ಸ್ಥಾಪಿಸಿದ ಅನಂತರ ಪುತ್ತೂರಿನಲ್ಲಿ ಬರ ಪರಿಸ್ಥಿತಿ ಬಂದ ಮಾಹಿತಿಯಿಲ್ಲ. ಕೃಷಿ ಪ್ರಧಾನವಾದ ಪುತ್ತೂರಿನಲ್ಲಿ ಭಕ್ತರು ಸಂಕಷ್ಟ ಕಾಲದಲ್ಲಿ ಮಹಾಲಿಂಗೇಶ್ವರನ ಮೊರೆಹೊಕ್ಕಾಗ ಕ್ಷಿಪ್ರ ಪ್ರಸಾದವೆಂಬಂತೆ ಮಹಾದೇವ ಕಾಪಾಡಿದ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್‌.

ಎ. 27ಕ್ಕೆ ಸೀಯಾಳಾಭಿಷೇಕ; ಪ್ರಾರ್ಥನೆ
ಎ. 27 ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಎಳನೀರಿನ ಅಭಿಷೇಕ ಸೇವೆಯನ್ನು ಬೆಳಗ್ಗೆ 9 ರಿಂದ 11 ಗಂಟೆಯ ತನಕ ನಡೆಸಿ ಸತ್ಯ -ಧರ್ಮ ನಡೆಯಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ. ಸೇವಾ ರೂಪವಾಗಿ ಸೀಯಾಳ ತರುವ ಭಕ್ತರು ಅಂದು ಬೆಳಗ್ಗೆ 10 ಗಂಟೆ ಯೊಳಗೆ ತಂದೊಪ್ಪಿಸುವಂತೆ ದೇವಾಲಯದ ಪ್ರಕಟನೆ ವಿನಂತಿಸಿದೆ.

ಟಾಪ್ ನ್ಯೂಸ್

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.