ಹಲವು ದಶಕಗಳಿಂದ ಇಲ್ಲಿನ ಮನೆಗಳಿಗೆ ರಸ್ತೆಯೇ ಇಲ್ಲ

ಮೂಲ ಸೌಕರ್ಯ ವಂಚಿತ ಕರ್ಲಪ್ಪಾಡಿ ನಿವಾಸಿಗಳು

Team Udayavani, Apr 25, 2019, 5:55 AM IST

22

ಅಜ್ಜಾವರ: ಗ್ರಾಮಗಳಲ್ಲಿ ರಸ್ತೆಗಳು ಅಭಿವೃದ್ಧಿ ಕಾಣುತ್ತಿರುವ ಹೊಸ್ತಿ ಲಲ್ಲಿಯೆ ಕೆಲವು ಕಡೆ ಸಂಚರಿಸಲು ಸರಿಯಾದ ದಾರಿಯಿಲ್ಲದೆ ಜನರು ಪರಿತಪಿ ಸುವಂತಾಗಿದೆ. ಕರ್ಲಪ್ಪಾಡಿ ನಿವಾಸಿಗಳು ಮೂಲ ಸೌಕರ್ಯವಿಲ್ಲದೆ ಜೀವನ ನಿರ್ವಹಣೆಗೆ ಅಡಿಯಾಗಿದ್ದು, ಮನೆಗಳಿಗೆ ಮಾರ್ಗವಿಲ್ಲದೆ ಕಷ್ಟಪಡುವಂತಾಗಿದೆ.

ಅಜ್ಜಾವರ ಗ್ರಾಮದ ಕರ್ಲಪ್ಪಾಡಿಯ ಪಡ್ಡಂಬೈಲು ಪ್ರದೇಶದ ನಾಲ್ಕು ಮನೆಗಳಿಗೆ ರಸ್ತೆ ನಿರ್ಮಾಣ ಆಗದೆ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸುಮಾರು 200ರಿಂದ 250 ಮೀಟರ್‌ ದೂರ ರಸ್ತೆಯಿಲ್ಲದೆ ಯಾವುದೇ ವಾಹನಗಳು ಓಡಾಡುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ.

ಗೋಳು ಕೇಳುವವರಿಲ್ಲ
ಅಜ್ಜಾವರ ಪಂಚಾಯತ್‌ ರಸ್ತೆಯಿಂದ ಪಡ್ಡಂಬೈಲಿನ ನಾಲ್ಕು ಮನೆಗಳ ಕಡೆಗೆ ಹೋಗಲು ಯಾವುದೇ ರಸ್ತೆ ವ್ಯವಸ್ಥೆಗಳಿಲ್ಲದೆ ಹಲವು ದಶಕಗಳು ಕಳೆದಿವೆ. ಇಬ್ಬರ ಜಾಗದ ನಡುವೆ ಕಾಲು ದಾರಿಯಿದ್ದು, ರಸ್ತೆಯ ಕನಸು ಮರೀಚಿಕೆಯಾಗಿಯೇ ಉಳಿದಿದೆ. ರಸ್ತೆ ನಿರ್ಮಾಣವಾಗದೆ, ವಾಹನಗಳು ಕೂಡ ಸಂಚರಿಸುವುದಿಲ್ಲ. ತಮ್ಮ ಸ್ವಂತ ವಾಹನಗಳನ್ನು ಇತರರ ಮನೆಯಲ್ಲಿ ಇಟ್ಟು ಹೋಗಬೇಕಾದ ಪರಿಸ್ಥಿತಿಯಿದೆ. ಕಾಲು ದಾರಿಯಲ್ಲೇ ತಮ್ಮ ಮನೆಗೆ ತೆರಳುತ್ತಿ¨ªಾರೆ. ಈ ಭಾಗದಲ್ಲಿ ಅಸೌಖ್ಯದಿಂದ ಬಳಲುತ್ತಿರುವವರನ್ನು ಕೊಂಡೊಯ್ಯುವುದೇ ಒಂದು ಸವಾಲು. ಒಂದೆರಡು ಜನ ಸಹಾಯಕ್ಕಿಲ್ಲದೆ ಎತ್ತಿಕೊಂಡು ಹೋಗಲೂ ಸಾಧ್ಯ ವಿಲ್ಲ. ಅನಾರೋಗ್ಯವಾದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಹಲವು ವರ್ಷ ಗಳಿಂದ ಸಂಬಂಧಪಟ್ಟ ಅಧಿಕಾರಿ ಗಳಿಗೆ ಹೇಳಿದ್ದರೂ, ಯಾವುದೇ ಪರಿಹಾರವಾಗಿಲ್ಲ. ದಿನನಿತ್ಯ ಕಾರ್ಯ ಗಳಿಗೆ ಕಾಲ್ನಡಿಯಲ್ಲೇ ಓಡಾಡ ಬೇಕಿದೆ. ನೆಮ್ಮದಿಯೇ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು.

ನೀರಿಗೂ ಕೊರತೆ
ಬೇಸಗೆಯ ಬಿಸಿ ಈ ಭಾಗದ ಜನರಿಗೆ ಸ್ವಲ್ಪ ಜಾಸ್ತಿಯೇ ತಟ್ಟಿದೆ. ಬಾವಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದೂ, ಬತ್ತಿ ಹೋಗಿದೆ. ತೋಟಗಳಿಗೆ ನೀರಿಲ್ಲದೆ, ಅಡಿಕೆ ಮರಗಳು ಒಣಗಿ ನಾಶದ ಅಂಚಿನಲ್ಲಿವೆ. ರಸ್ತೆಯಿಲ್ಲದೆ, ಕೃಷಿಗೆ ಉಪಯೋಗಿಸಲು ಕೊಳವೆ ಬಾವಿ ಕೊರೆಯಲು ಕೂಡ ಸಾಧ್ಯವಾಗುತ್ತಿಲ್ಲ. ಕುಡಿಯಲು ಪಂಚಾಯತ್‌ ನಿಂದ ನಳ್ಳಿ ನೀರು ಬರುತ್ತಿದೆ. ವಿದ್ಯುತ್‌ ಕೈಕೊಟ್ಟರೆ ಅದು ಕೂಡ ಇಲ್ಲ. ಒಟ್ಟಾರೆ ಜೀವನ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ.

ಹೊಸಮನೆಗಳನ್ನು ಕಟ್ಟುವುದು ಈ ಭಾಗದಲ್ಲಿ ತುಂಬಾ ಕಷ್ಟ. ಎಲ್ಲ ಸರಕು ಸಾಮಗ್ರಿಗಳನ್ನು ಮುಖ್ಯ ರಸ್ತೆಯಿಂದ ಹೊತ್ತುಕೊಂಡು ಬರಬೇಕು. ದುಬಾರಿ ವೆಚ್ಚವಾಗುತ್ತದೆ. ಹಣ ಭರಿಸಲು ಕಷ್ಟವಾಗುತ್ತಿದೆ. ಒಂದು ಮನೆ ಬೀಳುವ ಸ್ಥಿತಿಯಲ್ಲಿದೆ. ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಾಣಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

ಶೌಚಾಲಯ ನಿರ್ಮಾಣ
ರಸ್ತೆಯಿಲ್ಲದ ಕಾರಣ ಈ ಭಾಗದಲ್ಲಿ ಶೌಚಾಲಯ ಕೂಡ ಕಟ್ಟಿಸಿರಲಿಲ್ಲ. ಅಷ್ಟು ದೂರದಿಂದ ಕಲ್ಲು ಹೊತ್ತುಕೊಂಡು ಬರಲು ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಜನರು ಸಿಗುವುದು ಕೂಡ ಇಲ್ಲ ಎನ್ನುವುದು ಇಲ್ಲಿನ ಜನರ ಅಳಲು. ಆದರೆ ಗ್ರಾ.ಪಂ. ಹಾಗೂ ಸ್ಥಳೀಯರಾದ ಮಿಥುನ್‌ ಕರ್ಲಪ್ಪಾಡಿ ಸ್ವತ್ಛ ಗ್ರಾಮದಡಿ ಜನರ ಮನವೊಲಿಸಿ ಶೌಚಾಲಯ ಕಟ್ಟಿಸಿದ್ದಾರೆ. ಕೆಂಪು ಕಲ್ಲಿನ ಬದಲು ಹೋಲೋಬ್ಲಾಕ್‌ ಹಾಗೂ ಹೊಯಿಗೆ ತಂದು ಶೌಚಾಲಯ ನಿರ್ಮಿಸಿದ್ದಾರೆ.

ತಹಶಿಲ್ದಾರರಿಗೆ ಮನವಿ
ಪಡ್ಡಂಬೈಲು ಭಾಗದಲ್ಲಿ ರಸ್ತೆ ನಿರ್ಮಾಣವಾಗಬೇಕೆಂದು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಗ್ರಾ.ಪಂ. ಕೂಡ ಮನವಿ ಸಲ್ಲಿಸಲಾಗಿತ್ತು. ಇದೀಗ ತಹಶಿಲ್ದಾರರಿಗೆ ಮತ್ತೂಮ್ಮೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭ ಎಸ್‌. ಸಂಶುದ್ದೀನ್‌, ಸಿದ್ದಿಕ್‌ ಕೊಕ್ಕೊ, ಮಲೆನಾಡ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ರಿಯಾಝ್ ಕಟ್ಟೆಕಾರ್‌, ಪವನ್‌, ಮಿಥುನ್‌, ಸದಾನಂದ, ಮತ್ತಿತರರು ಉಪಸ್ಥಿತರಿದ್ದರು.

 ಮಾಹಿತಿ ಇಲ್ಲ
ಮನೆಗಳಿಗೆ ರಸ್ತೆ ಇಲ್ಲದ ಕುರಿತು ಮಾಹಿತಿಯಿಲ್ಲ. ನಮಗೆ ಯಾವುದೇ ಅರ್ಜಿ ಬಂದಿಲ್ಲ. ಮನವಿ ಬಂದರೆ ಗಮನ ಹರಿಸಲಾಗುವುದು.
 - ಜಯಮಾಲಾ ಪಿಡಿಒ ಅಜ್ಜಾವರ ಗ್ರಾ.ಪಂ.

 ಶೀಘ್ರ ನಿರ್ಮಾಣ ವಾಗಲಿ
ಚಿಕ್ಕಂದಿನಿಂದಲೂ ಇಲ್ಲಿನ ಮನೆಗಳಿಗೆ ರಸ್ತೆ ಇಲ್ಲ. ನಮ್ಮ ಸ್ವಂತ ಮನೆಗಳಿಗೆ ವಾಹನಗಳನ್ನು ತಗೆದುಕೊಂಡು ಹೋಗಲಾಗದೆ ಹತ್ತಿರದ ಮನೆಯಲ್ಲಿ ಬಿಟ್ಟು ಹೋಗುತ್ತೇವೆ. ದಿನನಿತ್ಯದ ಕೆಲಸಗಳಿಗೆ ಕಾಲ್ನಡಿಗೆಯಲ್ಲೇ ಓಡಾಡುವ ಪರಿಸ್ಥಿತಿಯಿದೆ. ಶೀಘ್ರದಲ್ಲಿ ರಸ್ತೆ ನಿರ್ಮಾಣ ಆಗಬೇಕು.
 - ಸದಾನಂದ ಕರ್ಲಪ್ಪಾಡಿ, ಸ್ಥಳೀಯರು

 ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

3

Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ

2(1

Belthangady: ಕೃಷಿ, ಕರಕುಶಲ ಕಲೆಗಳ ವೈಭವ

1(1

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.