ಮಲೇರಿಯಾ ಮುಕ್ತಿಗೆ ವೈಯಕ್ತಿಕ ಜವಾಬ್ದಾರಿ ಅಗತ್ಯ
ಇಂದು ವಿಶ್ವ ಮಲೇರಿಯಾ ಜಾಗೃತಿ ದಿನ
Team Udayavani, Apr 25, 2019, 6:00 AM IST
ಸಾಂಕ್ರಾಮಿಕ ರೋಗದ ಪಟ್ಟಿಯಲ್ಲಿರುವ ಮಲೇರಿಯಾವು ದೈಹಿಕ, ಮಾನಸಿಕವಾಗಿಯೂ ರೋಗಿಯನ್ನು ಕುಂದಿಸಿಬಿಡುತ್ತದೆ. ಮಲೇರಿಯಾ ಇದು ಅತಿ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ಆಫ್ರಿಕಾ, ಏಷ್ಯಾ ಖಂಡದಲ್ಲಿ ಇದಕ್ಕೆ ಬಲಿಯಾದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ವಿನಾ ವಿರಳವಾಗುತ್ತಿಲ್ಲ.
ವೈದ್ಯರ ಪ್ರಕಾರ ಮಲೇರಿಯಾ ರೋಗವು ಮಾರಣಾಂತಿಕ ರೋಗವಲ್ಲ ದಿದ್ದರೂ ರೋಗಿಯ ಸಂತೋಷ, ನೆಮ್ಮದಿಯನ್ನು ಕಿತ್ತುಕೊಂಡುಬಿಡುತ್ತದೆ ಎಂಬುದು ವಾದ. ಮಲೇರಿಯಾ ರೋಗ ಹರಡದೇ ಇರುವುದಕ್ಕೆ ಪರಿಸರವನ್ನು ಸ್ವತ್ಛವಾಗಿಟು ಕೊಂಡಿರಬೇಕು. ಈ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳುತ್ತಾರೆ.
ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸಲು, ಕಾಳಜಿಯನ್ನರಿತು ಎ. 25ರಂದು ವಿಶ್ವ ಮಲೇರಿಯಾ ಜಾಗೃತಿ ದಿನ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಮಲೇರಿಯಾ ರೋಗದಿಂದಾಗುವ ತೊಂದರೆಗಳು, ಸಮಸ್ಯೆಗಳ ಬಗ್ಗೆ ಜಾಗೃತಿಗಾಗಿ ವಿಚಾರ ಸಂಕಿರಣ, ಜಾಥಾ ಮತ್ತು ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತದೆ.
ಹಿನ್ನೆಲೆ
ವಿಶ್ವ ಆರೋಗ್ಯ ಸಂಸ್ಥೆಯೂ ವರ್ಷದಲ್ಲಿ ಮಲೇರಿಯಾ ರೋಗಕ್ಕೆ ಲಕ್ಷಾಂತರ ಮಂದಿ ತುತ್ತಾಗಿ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಆಪಾಯಕಾರಿ ವರದಿ ನೀಡಿತ್ತು. ಈ ವರದಿಯಂತೆ. 2012ರಲ್ಲಿ 6.5 ಲಕ್ಷ, 2013ರಲ್ಲಿ 5.8 ಲಕ್ಷ ಮತ್ತು 2017ರಲ್ಲಿ 219 ಮಿಲಿಯನ್ ಮಂದಿ ಮಲೇರಿಯಾಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಆಪಾರ ಸಾವಿನ ಪ್ರಮಾಣದಲ್ಲಿ ಶೇ. 90ರಷ್ಟು ಜನ ಆಫ್ರಿಕಾದವರು ಎಂಬುದು ನೋವಿನ ಸಂಗತಿ. ಈ ಬಗ್ಗೆ ಜಾಗತಿಕವಾಗಿ ಜಾಗೃತಿ ಅಗತ್ಯ ಎಂದು ಅರಿತ ವಿಶ್ವ ಆರೋಗ್ಯ ಸಂಸ್ಥೆಯೂ 2007ರಲ್ಲಿ ಜರಗಿದ ವಿಶ್ವ ಸಂಸ್ಥೆಯ 60ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕಾಳಜಿ ವಹಿಸಿ ಎ. 25ರಂದು ವಿಶ್ವ ಮಲೇರಿಯಾ ದಿನ ಆಚರಿಸಲು ಕರೆ ನೀಡಲಾಯಿತು.
ಅನಾಫಿಲಿಸ್ ಸೊಳ್ಳೆಯಿಂದ ಸೋಂಕು
ಸಾಂಕ್ರಾಮಿಕ ರೋಗವಾಗಿರುವ ಮಲೇರಿಯಾವು ಇದು ಅತಿ ಹೆಚ್ಚು ಉಷ್ಣಾಂಶ ಮತ್ತು ನೈರ್ಮಲ್ಯ ಕೊರತೆ ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯ ಸೋಂಕಿನಿಂದ ರೋಗ ಹರಡುತ್ತದೆ. ಮೊದಲಿಗೆ ವಿಪರೀತ ಜ್ವರ, ವಾಂತಿ, ಚಳಿ, ತಲೆ ಸುತ್ತು ಸಹಿತ ರಕ್ತಹೀನತೆ ಕಾಣುವುದು ರೋಗದ ಲಕ್ಷಣಗಳಾಗಿವೆ.
ನೈರ್ಮಲ್ಯ ಕಾಪಾಡುವುದು ಮುಖ್ಯ
ಮಲೇರಿಯಾ ರೋಗದ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪ್ರಯತ್ನಪೂರ್ವಕ ಕಾರ್ಯನಿರ್ವಹಿಸುತ್ತಿದೆ ಎಂದರೂ ನಾವುಗಳು ವೈಯಕ್ತಿಕವಾದ ಕೆಲವೊಂದು ಜವಾಬ್ದಾರಿಗಳಿಂದ ಮಲೇರಿಯಾವನ್ನು ತಡೆಯಬಹುದು. ಮನೆಯ ಪರಿಸರದಲ್ಲಿ ನೈರ್ಮಲ್ಯವನ್ನು ಕಾಪಾಡ ಬೇಕು, ಸೊಳ್ಳೆಗಳ ಕೀಟ ನಾಶಕವನ್ನು ರಾತ್ರಿ ಹೊತ್ತು ಸಿಂಪಡಿಸಿ, ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಈ ಕ್ರಮದಿಂದ ಸಾಧ್ಯವಾದಷ್ಟು ಮಲೇರಿಯಾ ನಿಯಂತ್ರಿಸಬಹುದು. ಈ ಬಗ್ಗೆ ಜಾಗೃತಿ, ಅರಿವು ಅಗತ್ಯವಾಗಬೇಕಿದೆ.
ಮಲೇರಿಯಾ ಮುಕ್ತಿಗೆ ಪಣ
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 2019ರ ವಿಶ್ವ ಮಲೇರಿಯಾ ದಿನವನ್ನು “ಉತ್ತಮ ಆರೋಗ್ಯಕ್ಕಾಗಿ ಮಲೇರಿಯಾಗೆ ಮುಕ್ತಿ ಸಿಗಲಿ (ಎಂಡ್ ಮಲೇರಿಯಾ ಫಾರ್ ಗುಡ್)’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತದೆ. ಮಲೇ ರಿಯಾ ನಿರ್ಮೂ ಲ ನೆ ನನ್ನಿಂದ ಪ್ರಾರಂಭ ಎಂಬುದು ಧ್ಯೇಯ ವಾ ಗಿ ದೆ. ಇದು ಕೇವಲ ಆಚರಣೆಯಷ್ಟೇ ಅಲ ದೆ ಕಾರ್ಯವಾಗಿದೆ. ಇದಕ್ಕಾಗಿ ಜಾಗೃತಿ, ಕಾಳಜಿಯನ್ನು ವಹಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೂ 2030ರೊಳಗೆ ಮಲೇರಿಯಾ ಮುಕ್ತ ಸಮಾಜವನ್ನು ನಿರ್ಮಿಸುವ ಕಾರ್ಯಕ್ಕೆ ಪಣತೊಟ್ಟಿದೆ.
ಎ. 25 ರಂದು ವಿಶ್ವ ಮಲೇರಿಯಾ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಆಚರಿಸಲಾಗುತ್ತದೆ. ಸಾಂಕ್ರಾಮಿಕ ರೋಗ ಮಲೇರಿಯಾದ ಮುಕ್ತಿಗಾಗಿ ಈ ದಿನವನ್ನು ಮೀಸಲಿಡಲಾಗುತ್ತದೆ. ಎಂಡ್ ಮಲೇರಿಯಾ ಫಾರ್ ಗುಡ್ ಎಂಬುದು ಈ ವರ್ಷದ ಆಚರಣೆಯ ಸಂದೇಶವಾಗಿದ್ದು, 2030ರೊಳಗೆ ಮಲೇರಿಯಾ ಮುಕ್ತ ಸಮಾಜ ನಿರ್ಮಾಣಕ್ಕೆ ಡಬ್ಲ್ಯುಎಚ್‌ಒ ಪಣತೊಟ್ಟಿದೆ.
- ಶಿವ ಸ್ಥಾವರ ಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.