ನನ್ನ ಕೆಲಸ ಮೋದಿ ಗಮನಿಸುತ್ತಿದ್ದಾರೆ
Team Udayavani, Apr 25, 2019, 6:00 AM IST
ಹೊಸದಿಲ್ಲಿ: ಅಕ್ಷಯ್ ಕುಮಾರ್ ಮೇಲಿನ ಸಿಟ್ಟನ್ನು ಪತ್ನಿ ಟ್ವಿಂಕಲ್ ಖನ್ನಾ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಮೇಲೆ ತೀರಿಸಿಕೊಳ್ಳುತ್ತಿರುವುದರಿಂದ ಅಕ್ಷಯ್ಗೆ ಮನೆಯಲ್ಲಿ ಶಾಂತಿ ಇರಬಹುದು ಎಂದು ಸಂದರ್ಶನದಲ್ಲಿ ಹೇಳಿದ್ದ ಪ್ರಧಾನಿ ಮೋದಿಯವರಿಗೆ ಟ್ವಿಂಕಲ್ ಪ್ರತ್ಯುತ್ತರ ನೀಡಿದ್ದಾರೆ.
“ನಾನು ಈ ವಿಷಯವನ್ನು ಧನಾತ್ಮಕ ವಾಗಿ ನೋಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಗೆ ತಾವು ಮಾತ್ರ ಟ್ವೀಟ್ ಮಾಡುವುದಲ್ಲ ಎಂಬುದು ತಿಳಿದಿರುವುದಷ್ಟೇ ಅಲ್ಲ, ನಾನು ಮಾಡುವ ಕೆಲಸವನ್ನೂ ಅವರು ಗಮನಿಸುತ್ತಿದ್ದಾರೆ’ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ನೀವು ಟ್ವಿಟರ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತೀರಿ. ಆದರೆ ಟ್ವಿಟರ್ನಲ್ಲಿ ನಿಮ್ಮ ಬಗ್ಗೆ ಪ್ರತಿಕ್ರಿಯೆಗಳನ್ನು ನೋಡುತ್ತೀರಾ ಎಂದು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ನಾನು ನಿಮ್ಮ ಟ್ವೀಟ್ ನೋಡುತ್ತೇನೆ. ಅಷ್ಟೇ ಅಲ್ಲ, ನಿಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರ ಟ್ವೀಟ್ಗಳನ್ನೂ ನೋಡುತ್ತೇನೆ. ಅವರು ನನ್ನ ಮೇಲೆ ಟ್ವಿಟರ್ನಲ್ಲಿ ಸಿಟ್ಟು ಹೊರಹಾಕುತ್ತಾರೆ. ಅವರ ಎಲ್ಲ ಸಿಟ್ಟೂ ನನ್ನ ಮೇಲೆ ತಿರುಗುವುದರಿಂದ, ನಿಮಗೆ ಸ್ವಲ್ಪ ಆರಾಮ ಇರಬಹುದು. ಹೀಗಾಗಿ ಇದರಿಂದಾಗಿ ನಿಮ್ಮ ಮನೆಯಲ್ಲಿ ಶಾಂತಿಯ ವಾತಾವರಣ ಇರಬಹದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.