ಅಂಗವಿಕಲ ಮತದಾರರಿಗೆ ಸಹಾಯಹಸ್ತ
ಎನ್ನೆಸ್ಸೆಸ್ ಸ್ವಯಂಸೇವಕರು, ಅಂಗನವಾಡಿ ಸಿಬಂದಿಗೆ ಶ್ಲಾಘನೆ
Team Udayavani, Apr 25, 2019, 6:10 AM IST
ಕಾಸರಗೋಡು: ಲೋಕಸಭೆ ಚುನಾವಣೆ ಮಂಗಳವಾರ ನಡೆದ ವೇಳೆ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳ ಅಂಗವಿಕಲ ಮತದಾರರನ್ನು ಮತಗಟ್ಟೆಗಳಿಗೆ ತಲುಪಿಸುವಲ್ಲಿ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಅಂಗನವಾಡಿ ಸಿಬಂದಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಜಿಲ್ಲೆಯ 19 ಶಾಲೆಗಳ ಸುಮಾರು ನೂರು ಮಂದಿ ಪ್ಲಸ್ ವನ್ ವಿದ್ಯಾರ್ಥಿಗಳಾಗಿರುವ ಎನ್.ಎಸ್.ಎಸ್. ಸ್ವಯಂಸೇವಕರು, 850 ಮಂದಿ ಅಂಗನವಾಡಿ ಸ್ವಯಂಸೇವಕರು ಅಂಗವಿಕಲ ಮತದಾರರನ್ನು ಮತಗಟ್ಟೆಗಳಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗವಿಕಲರ ನೋಡಲ್ ಅಧಿ ಕಾರಿ ಪಿ. ಬಿಜು ಅವರ ನೇತೃತ್ವದಲ್ಲಿ ಜಿಲ್ಲೆಯ 5 ವಿಧಾನಸಭೆಗಳ 12 ಸಂಚಾಲಕರು ಈ ಚಟುವಟಿಕೆಗಳ ಏಕೀಕರಣ ನಡೆಸಿದರು.
ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾಲಕರು ಎ.ಆರ್.ಒ.ಗಳ ನಿಯಂತ್ರಣ ಕೊಠಡಿಗಳ ಮೂಲಕ ಚಟುವಟಿಕೆಗಳ ನೇತೃತ್ವ ವಹಿಸಿದ್ದರು. ಇವರ ವ್ಯಾಪ್ತಿಯಲ್ಲಿರುವ 84 ಸೆಕ್ಟರ್ ಸಂಚಾಲಕರು ಗ್ರಾಮ ವ್ಯಾಪ್ತಿಯಲ್ಲಿ ಚಟುವಟಿಕೆಗಳನ್ನು ಏಕೀಕರಿಸಿದ್ದರು. ಅಂಗನವಾಡಿ ಸಿಬಂದಿ, ಎನ್.ಎಸ್.ಎಸ್. ಸ್ವಯಂಸೇವಕರು ಮನೆಗಳಿಗೆ ಆಗಮಿಸಿ ಅಂಗವಿಕಲ ಮತದಾರರನ್ನು ಆ್ಯಂಬುಲೆನ್ಸ್ ಮೂಲಕ ಆಯಾ ಕೇಂದ್ರಗಳಿಗೆ ತಲಪಿಸಿದ್ದರು. ಅಲ್ಲಿಂದ ಮತ್ತೂಂದು ಆ್ಯಂಬುಲೆನ್ಸ್ ಮೂಲಕ ಮತಗಟ್ಟೆಗಳಿಗೆ ತಲಪಿಸಿದ್ದರು.
ಅಂಗವಿಕಲ ಮತದಾರರನ್ನು ಮತಗಟ್ಟೆ ಗಳಿಗೆ ತಲುಪಿಸುವ ಉದೇಶದಿಂದ ಜಿಲ್ಲೆಯಲ್ಲಿ 25 ಆ್ಯಂಬುಲೆನ್ಸ್‌ಗಳ ಸೇವೆ ಒದಗಿಸಲಾಗಿತ್ತು. ಬಹುತೇಕ ಅಂಗವಿಕಲರನ್ನು ಮನೆಗಳಿಂದ ಎರಡೂ ಕೈಗಳಿಂದ ಎತ್ತಿಕೊಂಡು ಆ್ಯಂಬುಲೆನ್ಸ್‌ಗೆ ತಲುಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.