![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Apr 25, 2019, 6:00 AM IST
ನವದೆಹಲಿ/ಕೊಲೊಂಬೋ: ಕೊಲೊಂಬೋ ಸರಣಿ ಬಾಂಬ್ ಸ್ಫೋಟ ಪ್ರಕರಣ, ಕಳೆದ ವರ್ಷ ಭಾರತದಲ್ಲಿ ಬೆಳಕಿಗೆ ಬಂದಿದ್ದ ‘ಕೊಯಮತ್ತೂರು ಐಸಿಸ್ ಬೆಂಬಲಿಗರ ಪ್ರಕರಣ’ದ ಜತೆಗೆ ತಳುಕು ಹಾಕಿಕೊಂಡಿದೆ.
ಶ್ರೀಲಂಕಾದ ಚರ್ಚ್‌ಗಳ ಮೇಲೆ ದಾಳಿ ನಡೆಸುವ ಉಗ್ರ ಸಂಚಿನ ಬಗ್ಗೆ 3-4 ತಿಂಗಳ ಹಿಂದೆಯೇ ಭಾರತಕ್ಕೆ ತಿಳಿದುಬಂದಿತ್ತು. ಕೂಡಲೇ ರಾಜತಾಂತ್ರಿಕ ಮಾರ್ಗದ ಮೂಲಕ ಎಚ್ಚರಿಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಉಗ್ರರು ಕೊಲೊಂಬೋದಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಮತ್ತು ದಕ್ಷಿಣ ಭಾರತದ ಪ್ರಮುಖ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುವ ಯೋಜನೆ ಹೊಂದಿದ್ದರು.
ಏನಿದು ಪ್ರಕರಣ?: ಕೊಯಮತ್ತೂರಿನ ಮೊಹಮ್ಮದ್ ಆಶಿಕ್, ಇಸ್ಮಾಯಿಲ್ ಎಸ್, ಶಂಶುದ್ದೀನ್, ಮೊಹಮ್ಮದ್ ಸಲಾಲುದ್ದೀನ್, ಜಾಫರ್ ಶಾದಿಕ್ ಅಲಿ ಮತ್ತು ಶಾಹುಲ್ ಹಮೀದ್ ಎಂಬವರು ತಂಡವೊಂದನ್ನು ರಚಿಸಿಕೊಂಡಿರುವ ಮಾಹಿತಿ ಮೇರೆಗೆ 2018ರ ಡಿಸೆಂಬರ್‌ನಲ್ಲಿ ಅವರ ಮನೆಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗಿನ ವಿಚಾರಣೆ ವೇಳೆ ಲಂಕಾದ ನ್ಯಾಷನಲ್ ತೌಹೀದ್ ಜಮಾತ್ (ಎನ್‌ಟಿಜೆ) ಸಂಘಟನೆಯ ಸಂಸ್ಥಾಪಕ ಝಹ್ರನ್ ಹಾಶೀಂ ಜತೆ ಇವರು ನೇರ ಸಂಪರ್ಕದಲ್ಲಿದ್ದಿದ್ದು ತಿಳಿದುಬಂದಿತ್ತು. ಆತ, ದಕ್ಷಿಣ ಭಾರತದಲ್ಲಿ ಇಸ್ಲಾಂ ರಾಜ್ಯಭಾರ ಸ್ಥಾಪಿಸುವಂತೆ ಈ ಯುವಕರನ್ನು ಪ್ರೇರೇಪಿಸಿದ್ದ, ಇದಕ್ಕೆ ಪೂರಕವಾಗಿ, ದಕ್ಷಿಣ ಭಾರತದ ಅಲ್ಲಲ್ಲಿ ಬಾಂಬ್ ಸ್ಫೋಟ ನಡೆಸುವಂತೆ ಹಾಗೂ ಹಿಂದೂ ನಾಯಕರ ಹತ್ಯೆ ಮಾಡುವಂತೆ ಸೂಚಿಸಿದ್ದ ಎಂಬುದು ತಿಳಿದುಬಂದಿತ್ತು.
ಇದೇ ಸಂದರ್ಭದಲ್ಲೇ, ಶ್ರೀಲಂಕಾದಲ್ಲೂ ಚರ್ಚುಗಳ ಮೇಲೆ ದಾಳಿ ನಡೆಸುವ ವಿಚಾರ ಬಹಿರಂಗಗೊಂಡಿತ್ತು. ತಕ್ಷಣವೇ ಈ ಮಾಹಿತಿಯನ್ನು ಎನ್‌ಐಎ, ಭಾರತೀಯ ಗುಪ್ತಚರ ಇಲಾಖೆಗೆ ಮುಟ್ಟಿಸಿತ್ತು. ಭಾರತೀಯ ಗುಪ್ತಚರ ಇಲಾಖೆ ಅದನ್ನು ಶ್ರೀಲಂಕಾದ ಗುಪ್ತಚರ ಇಲಾಖೆಗೆ ತಲುಪಿಸಿತ್ತು.
ಸ್ಫೋಟಕ ಪತ್ತೆ: ಈ ನಡುವೆ, ದಕ್ಷಿಣ ಕೊಲಂಬೋದ ವೆಲ್ಲವಟ್ಟಾದಲ್ಲಿರುವ ಸವೋಯ್ ಚಿತ್ರಮಂದಿರದ ಹೊರಗಡೆ ನಿಲ್ಲಿಸಲಾಗಿದ್ದ ಬೈಕೊಂದರಲ್ಲಿ ಬುಧವಾರ ನಿಯಂತ್ರಿತ ಸ್ಫೋಟಕವೊಂದು ಪತ್ತೆಯಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.