ಮಧ್ವ ಸರೋವರ: ಹೂಳೆತ್ತುವಿಕೆ ಆರಂಭ
Team Udayavani, Apr 25, 2019, 6:34 AM IST
ಮಧ್ವಸರೋವರದ ಹೂಳೆತ್ತುವಿಕೆಗೆ ಮುನ್ನ ನೀರು ಖಾಲಿ ಮಾಡಲಾಗುತ್ತಿದೆ.
ಉಡುಪಿ: ಶ್ರೀಕೃಷ್ಣ ಮಠದ ಮಧ್ವ ಸರೋವರದ ಹೂಳೆತ್ತುವಿಕೆ ಕೆಲಸ ಬುಧವಾರ ಆರಂಭವಾಗಿದೆ. ಮೊದಲು ನೀರನ್ನು ರಾಜಾಂಗಣದಲ್ಲಿರುವ ಬಾವಿಗೆ ಪಂಪಿಂಗ್ ಮಾಡಲಾಗುತ್ತಿದೆ. ಈ ನೀರನ್ನು ಕೈತೊಳೆಯುವುದೇ ಮೊದಲಾದ ಕೆಲಸಕ್ಕೆ ಬಳಸಲಾಗುವುದು. ಮಧ್ವ ಸರೋವರದ ಒಳಗೆ ಒಂದು ಸಣ್ಣ ಸರೋವರವಿದ್ದು, ಇದರ ನೀರನ್ನು ಸದ್ಯ ಅಗತ್ಯದ ಸ್ನಾನಾದಿ ಕೆಲಸಕ್ಕೆ ಬಳಸಲಾಗುವುದು. ಉಳಿದೆಡೆ ನೀರು ಖಾಲಿ ಮಾಡಿದ ಬಳಿಕ ಹೂಳೆತ್ತುವಿಕೆ ಆರಂಭಿಸಲಾಗುವುದು. ಮೂರು ಯಂತ್ರಗಳು ಈಗಾಗಲೇ ಬಂದಿದ್ದು, ನೀರೆತ್ತಲಾಗುತ್ತಿದೆ. ಬುಧವಾರ ರಾತ್ರಿ ಅಥವಾ ಗುರುವಾರ, ಶುಕ್ರವಾರ ಈ ಕೆಲಸ ನಡೆಸಲಾಗುವುದು ಎಂದು ಕೃಷ್ಣಮಠದ ಮೂಲಗಳು ತಿಳಿಸಿವೆ.
16 ವರ್ಷಗಳ ಹಿಂದೆ (2002-03) ಪಲಿಮಾರು ಸ್ವಾಮೀಜಿಯವರು ಪರ್ಯಾಯ ಅವಧಿಯಲ್ಲಿ ಮಧ್ವಸರೋವರದ ಹೂಳೆತ್ತುವ ಕೆಲಸವನ್ನು ನಡೆಸಿದ್ದರು. ಆಗ ಮಾನವ ಶ್ರಮದಿಂದ ಮತ್ತು ಶ್ರಮದಾನದಿಂದ ನಡೆಸಿದ್ದರೆ, ಈ ಬಾರಿ ಯಂತ್ರಗಳಿಂದ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.