ಕೊರಲೆಗೂ ಬಂತು ಬಂಪರ್ ಬೆಲೆ
Team Udayavani, Apr 25, 2019, 12:27 PM IST
ಹುಬ್ಬಳ್ಳಿ: ಒಣ ಭೂಮಿಯಲ್ಲಿ ಬೆಳೆಯುವ, ಅತ್ಯಲ್ಪ ದರಕ್ಕೆ ಮಾರಾಟ ಮಾಡುವ ಸಿರಿಧಾನ್ಯವೆಂದೇ ಪರಿಗಣಿಸಲ್ಪಟ್ಟ ಕೊರಲೆಗೆ ಇದೀಗ ಬಂಪರ್ ಬೆಲೆ ಬಂದಿದೆ. ಕಡಿಮೆ ವೆಚ್ಚದಲ್ಲಿ ಬೆಳೆದ ಕೊರಲೆ ಉತ್ತಮ ಫಸಲು ಬಂದಿದ್ದು, ಕೈ ತುಂಬ ಹಣ ತಂದುಕೊಡುವ ಬೆಳೆಯಾಗಿರುವುದು ರೈತರ ಸಂತಸ ಹೆಚ್ಚುವಂತೆ ಮಾಡಿದೆ.
ಸಿರಿಧಾನ್ಯಗಳಲ್ಲಿ ಒಂದಾಗಿರುವ ಕೊರಲೆ ಬೆಳೆ ಸಿರಿಧಾನ್ಯಗಳಲ್ಲೇ ನಿರ್ಲಕ್ಷಿತ ಹಾಗೂ ಕಡಿಮೆ ಬಳಕೆಯದ್ದಾಗಿತ್ತು. ಕೊರಲೆಯಲ್ಲಿನ ಪೋಷಕಾಂಶಗಳ ಮಹತ್ವದ ಮೇಲೆ ನಾಸಾ ಸಂಶೋಧನೆ ನಡೆಸಿರುವುದು ಇದರ ಮಹತ್ವ ಹೆಚ್ಚುವಂತೆ ಮಾಡಿದೆ. ಕೊರಲೆ ಬರ ನಿರೋಧಕ ತಳಿಯಾಗಿದ್ದು, ಮರದ ನೆರಳಿನಲ್ಲಿಯೂ ಬೆಳೆಯುತ್ತದೆ. ಕೊರಲೆ ಬಿತ್ತನೆ ಹಾಗೂ ಕೊರಲೆಗೆ ಬೆಲೆಯೂ ಅತ್ಯಂತ ಕಡಿಮೆ ಇತ್ತು. ಒಂದು ಕ್ವಿಂಟಲ್ ಕೊರಲೆ 2000-3000 ರೂ.ಗೆ ಮಾರಾಟವಾದರೆ ಹೆಚ್ಚು ಎನ್ನುವಂತಿತ್ತು. ಇದೀಗ ಕೊರಲೆ ಕ್ವಿಂಟಲ್ಗೆ 7000-7,200 ರೂ. ವರೆಗೆ ಮಾರಾಟವಾಗುತ್ತಿರುವುದು ರೈತರ ಸಂತಸ ಹೆಚ್ಚಿಸಿದೆ.
90 ದಿನಗಳ ಬೆಳೆ ಇದಾಗಿದೆ. ಅತ್ಯುತ್ತಮ ಪೋಷಕಾಂಶದ ಆಹಾರಧಾನ್ಯದ ಜತೆಗೆ ಜಾನುವಾರುಗಳಿಗೆ ಮೇವು ನೀಡುತ್ತದೆ. ಒಂದು ಕೆಜಿಗೆ 70ರಿಂದ 72 ರೂ.ವರೆಗೆ ಕೊರಲೆ ಮಾರಾಟವಾದರೆ, ಕೊರಲೆ ಸಂಸ್ಕರಿಸಿದರೆ, ಒಂದು ಕೆಜಿ ಕೊರಲೆ ಅಕ್ಕಿ 250-300 ರೂ.ಗೆ ಮಾರಾಟವಾಗುತ್ತಿದೆ. ಹಣ ತರುವ ಬೆಳೆಗಳ ಪಟ್ಟಿಯಲ್ಲಿ ಕೊರಲೆ ಸ್ಥಾನವೇ ಪಡೆದಿರಲಿಲ್ಲ. ಇದೀಗ ಕೊರಲೆ ಉತ್ತಮ ಲಾಭದಾಯಕ ಬೆಳೆಯಾಗಿ ರೈತರನ್ನು ಕೈ ಹಿಡಿಯತೊಡಗಿದೆ. ಅಮೆರಿಕದಲ್ಲಿ ಪಕ್ಷಿಗಳಿಗೆ ಕೊರಲೆ ಬಳಸಲಾಗತ್ತದೆ. ಕೊರಲೆ ಮೇಲೆ ನಾಸಾ ಮಹತ್ವದ ಸಂಶೋಧನೆ ನಡೆಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಸಹಜ ಸಮೃದ್ಧಿ ಬಳಗ ಸಿರಿಧಾನ್ಯ ಮೇಳ ಹಾಗೂ ಕೊರಲೆ ಬೆಳೆ ಜಾಗೃತಿ ಕಾರ್ಯ ಮಾಡಿವೆ.
ಲಾಭ ಹೇಗೆ?: ಹಾವೇರಿ ಜಿಲ್ಲೆಯ ಹನುಮನಹಳ್ಳಿಯಲ್ಲಿ ಆನಂದಗೌಡ ಇನ್ನಿತರ ರೈತರು ಎಕರೆಗೆ 10 ಕ್ವಿಂಟಲ್ನಂತೆ ಕೊರಲೆ ಬೆಳೆದಿದ್ದು, ಆಂಧ್ರಪ್ರದೇಶದಿಂದ ಉತ್ತಮ ಬೇಡಿಕೆ ಬರತೊಡಗಿದೆ. ಒಂದು ಎಕರೆ ಕೊರಲೆ ಬೆಳೆಯಲು ನಾಲ್ಕು ಕೆಜಿ ಬೀಜ ಸೇರಿದಂತೆ ಬಿತ್ತನೆಯಿಂದ ಕೊಯ್ಲುವರೆಗೆ ಸರಾಸರಿ 5-6 ಸಾವಿರ ರೂ. ಗರಿಷ್ಠವೆಂದರೆ 8 ಸಾವಿರ ರೂ. ವೆಚ್ಚ ಬರುತ್ತದೆ. ಎಕರೆಗೆ 8-10 ಕ್ವಿಂಟಲ್ ಫಸಲು ಬರುತ್ತದೆ. 7000 ರೂ.ಗೆ ಕ್ವಿಂಟಲ್ನಂತೆ ಮಾರಾಟ ಮಾಡಿದರೂ 70 ಸಾವಿರ ರೂ. ಆದಾಯ, ವೆಚ್ಚ ತೆಗೆದರೆ 60 ಸಾವಿರ ರೂ. ಉಳಿಯುತ್ತದೆ. ಇದಲ್ಲದೆ 10-15 ಸಾವಿರ ರೂ.ಮೌಲ್ಯದ ಮೇವು ದೊರೆಯುತ್ತದೆ. ಇದೇ ಒಂದು ಎಕರೆಯಲ್ಲಿ ಬಿಟಿ ಹತ್ತಿ ಬಿತ್ತಿದರೆ ಒಟ್ಟಾರೆ 20 ಸಾವಿರ ರೂ.ವರೆಗೆ ವೆಚ್ಚ ಬರುತ್ತಿದ್ದು, ಎಕರೆಗೆ ಸರಾಸರಿ 7-8 ಕ್ವಿಂಟಲ್ ಹತ್ತಿ ಬರುತ್ತದೆ. ಒಂದು ಕ್ವಿಂಟಲ್ 4-5 ಸಾವಿರ ರೂ.ಗೆ ಮಾರಾಟವಾಗುತ್ತದೆ. ವೆಚ್ಚ ತೆಗೆದರೆ ರೈತನಿಗೆ 20 ಸಾವಿರ ರೂ. ಸಹ ಉಳಿಯದು, ಭೂಮಿ ಫಲವತ್ತತೆಯೂ ಹಾಳಾಗಲಿದೆ ಎಂಬುದು ಹನುಮನಳ್ಳಿಯ ಕೊರಲೆ ಬೆಳೆಗಾರ ಮುತ್ತುರಾಜ ರಾಮಜಿ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.