ತುಮಕೂರು: ಶ್ರೀಲಂಕಾದಲ್ಲಿ ಭಾನು ವಾರ ನಡೆದ ಬಾಂಬ್ ಸ್ಫೋಟದಲ್ಲಿ ತುಮಕೂರಿನ ಸ್ವರಸ್ಪತಿ ಪುರಂನ ಉದ್ಯಮಿ ಎಲ್.ರಮೇಶ್‌ಗೌಡ ರವರ ಪಾರ್ಥಿವ ಶರೀರ ನಗರದ ಅವರ ನಿವಾಸಕ್ಕೆ ತರುತ್ತಲೇ ಅವರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಮೇಶ್‌ಗೌಡರ ಮೃತದೇಹ ಬುಧವಾರ ಸಂಜೆ ಅವರ ತುಮಕೂರಿನ ಸರಸ್ವತಿಪುರಂ ಮನೆಗೆ ಆಗಮಿಸಿತು. ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿ, ರಮೇಶ್‌ಗೌಡ ಮೃತದೇಹವನ್ನು ಎಕ್ಸ್‌ಕಾರ್ಟ್ ಮೂಲಕ ನೆಲಮಂಗಲ ಮಾರ್ಗವಾಗಿ ತುಮಕೂರಿಗೆ ಸಂಜೆ 5-30ರ ವೇಳೆಗೆ ತಲುಪಿತು.ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ ವತಿಯಿಂದ ತಹಶೀಲ್ದಾರ್ ನಾಗರಾಜ್, ಶಿರಸ್ತೇದಾರ ಜಯ ಪ್ರಕಾಶ್, ಡಾ. ಎಸ್.ಶರತ್‌ಚಂದ್ರ ಅವರು ತುಮಕೂರು ಸರಸ್ವತಿ ಪುರಂ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ತಾಯಿ ರತ್ನಮ್ಮ, ಪತ್ನಿ ಮಂಜುಳಾ, ಮಗಳು ದೀಕ್ಷಾ, ಮಗ ಶೋಭಿತ್, ಸಹೋದರ ಪ್ರಕಾಶ್ ಸೇರಿ ದಂತೆ ಅವರ ಕುಟುಂಬದವರು, ಸ್ನೇಹಿ ತರು ಸೇರಿದಂತೆ ಅವರ ಬಂಧುಗಳ ರೋದನೆ ಹೆಚ್ಚಾಗಿತ್ತು.