ಭಕ್ತಿ ಭಾವವುಕ್ಕಿಸಿದ ನೃತ್ಯ ಮಂಥನ


Team Udayavani, Apr 26, 2019, 5:55 AM IST

10

ನೃತ್ಯರೂಪಕ ತೀವ್ರಗತಿಯಲ್ಲಿದರೂ ಸ್ವರಗಳ ಏರಿಳಿತಕ್ಕೆ ರಂಗಮಂಚ ತುಂಬಿಕೊಂಡಿರುವಂತೆ ಮೂಡಿದ ಸಂಯೋಜಕರ ಪರಿಕಲ್ಪನೆ ಪ್ರೇಕ್ಷಕರನ್ನು ಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ನರ್ತಕಿಯರ ಲಾಸ್ಯನೃತ್ಯಗಳ ಸಂಯೋಜನೆ ಉತ್ತಮವಾಗಿತ್ತು,

ಯಾವುದೇ ಒಂದು ಕಲಾ ಪ್ರಕಾರದ ಕಲಾತ್ಮಕ ಹೊಸ ಪ್ರಯೋಗ ಆ ಕಲಾಪ್ರಕಾರದ ಸ್ಥಾವರವಾಗದೇ ಜಂಗಮವಾಗಿ ಮುನ್ನಡೆಯುವಂತೆ ಮೂಡುವುದಲ್ಲದೆ ಸಮಾಜಕ್ಕೆ ಪುರಾಣ ಕಥೆಗಳ ತಿಳುವಳಿಕೆ ಮೂಡಿಸಿ ಅವರಲ್ಲಿ ಕಲಾಭಿರುಚಿಯನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಕಲ್ಯಾಣಪುರದಲ್ಲಿ ಅಮ್ಮುಂಜೆಯ

ಶ್ರೀ ಬ್ರಾಮರಿ ನಾಟ್ಯಾಲಯದ “ನೃತ್ಯ ಮಂಥನ-5′ ಇದರ ಗುರುಗಳಾದ ವಿ| ಕೆ. ಭವಾನಿಶಂಕರ್‌ ಇವರ ನಿರ್ದೇಶನದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಂಡ ನೃತ್ಯೋತ್ಸವ ಕಾರ್ಯಕ್ರಮ ಜನಮನ ಗೆದ್ದಿತು. ನಾಟರಾಗ ಆದಿತಾಳ “ಎಂಚಿತ್ತಿ ಮಗನ ಪಡೆಯೊಳ್‌ ಪಾರ್ವತಿ’ ಎನ್ನುವ ತುಳು ಸಾಹಿತ್ಯದ ಗಣೇಶ ಸ್ತುತಿಯೊಂದಿಗೆ ವಿದ್ಯಾರ್ಥಿಗಳು ಕೈಗಳಲ್ಲಿ ಪುಷ್ಪಗಳನ್ನು ಹಿಡಿದು ರಂಗ ಪ್ರವೇಶಿಸಿದರು. ರಂಗಾದಿ ದೇವತೆಗಳಿಗೆ, ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ ಎಲ್ಲರಿಗೆ ವಂದಿಸಿದರು.

ಬಾಲಕಲಾವಿದರು ಬಿಲಹರಿ ರಾಗದ ಸ್ವರ‌ ಜತಿ, ಪಿಳ್ಳಂಗೋವಿಯ ಹಾಗೂ ಜಾನಪದ ಶೈಲಿಯ ಕೊರವಂಜಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಪುಟಾಣಿಗಳ ಮುಂದಿನ ಉತ್ತಮ ಭವಿಷ್ಯವನ್ನು ಪ್ರತಿಬಿಂಬಿಸುವಂತಿತ್ತು. ಅನಂತರ ಮೂಡಿಬಂದ ಆದಿಶಂಕರಾಚಾರ್ಯರು ರಚಿಸಿದ “ಕಾಲಭೈರವ ಅಷ್ಟಕ’ದಲ್ಲಿ ಶಿವನ ರೌದ್ರತೆ ಮಕ್ಕಳ ಚಲನವಲನಗಳಲ್ಲಿ ಎದ್ದು ಕಂಡಿತು. ನಾರಾಯಣ ತೀರ್ಥರ ಪ್ರಸಿದ್ಧ ರಚನೆಯಾದ “ನೀಲ ಮೇಘ ಶರೀರ’ “ಕೂಚುಪುಡಿ ತರಂಗ’. ಇಲ್ಲಿ ತಲೆಯ ಮೇಲೆ ನೀರು ತುಂಬಿದ ಹಿತ್ತಾಳೆ ತಂಬಿಗೆ ಇಟ್ಟು ಹಿತ್ತಾಳೆ ತಟ್ಟೆಯ ಅಂಚಿನ ಮೇಲೆ ನಿಂತು ಲಯಬದ್ಧವಾಗಿ ನರ್ತಿಸಿದ್ದು, ಇದರಲ್ಲಿ ಅದಿತಿ ಜಿ. ಮಂಡೀಚ ಎನ್ನುವ ವಿದ್ಯಾರ್ಥಿನಿ ತಲೆಯ ಮೇಲೆ ಎರಡು ತಂಬಿಗೆ ಅಲ್ಲದೆ, ಒಂದೂವರೆ ಅಡಿ ಎತ್ತರದ ಮಣ್ಣಿನ ಮಡಕೆಯ ಮೇಲೆ ಸುಮಾರು ಹತ್ತು ನಿಮಿಷಗಳ ಕಾಲದ ನರ್ತನ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಅನಂತರ”ರಾಧಾ ಸಮೇತ ಕೃಷ್ಣ’ ಎನ್ನುವ ಕೃಷ್ಣನ ಕೊಳಲ ನಾದಕ್ಕೆ ಮರುಳಾಗುವುದು, ಕೃಷ್ಣ-ರಾಧೆಯರ ರಾಸಲೀಲೆಯ ಮಧುರ ಕ್ಷಣಗಳನ್ನು ಭಕ್ತಿ-ಭಾವದಿಂದ ಪ್ರದರ್ಶಿಸಿದರು. “ಅಪಾರ ಕೀರ್ತಿ’ ಎನ್ನುವ ಹಾಡಿಗೆ ಸಂಸ್ಕೃತಿಯ ಸೊಬಗನ್ನು, ಶಿಲ್ಪಕಲೆಯನ್ನು ವಿಶಿಷ್ಟ ರೀತಿಯಲ್ಲಿ ನೃತ್ಯದ ಮೂಲಕ ವರ್ಣಿಸಿದರು.ನೃತ್ಯದಲ್ಲಿ ಅಂಗಶುದ್ಧಿ, ಹೊಸ ಪರಿಕಲ್ಪನೆಗಳು, ಗತಿಗಳು, ರಂಗಾಕ್ರಮಣದ ಚೆಲುವು, ಲಯದ ಗಟ್ಟಿತನ ಎದ್ದು ತೋರುತ್ತಿತ್ತು.

ನಂತರ ಪ್ರದರ್ಶನಗೊಂಡಿದ್ದು ಕುಂಜೂರು ಗಣೇಶ ಆಚಾರ್ಯರ ರಚನೆ ಮತ್ತು ವಿ| ಕೆ. ಭವಾನಿಶಂಕರ್‌ ಅವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ನೃತ್ಯರೂಪಕ “ಶ್ರೀ ಕಾಳಿಕಾಂಬಾ’. ಕೈಲಾಸದಲ್ಲಿ ಸಂತೋಷದ ತಾಂಡವ. ಕೈಲಾಸದ ಚಿತ್ರಣ ಬಹಳ ಸೊಗಸಾಗಿತ್ತು. ಅಲ್ಲಿ ಶಿವ-ಪಾರ್ವತಿಯರಿಗೆ ಸೌಂದರ್ಯದಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎನ್ನುವ ಜಿಜ್ಞಾಸೆ. ಈ ಜಿಜ್ಞಾಸೆಯೊಂದಿಗೆ ನೃತ್ಯರೂಪಕ ಆರಂಭಗೊಂಡಿತು. ಶಿವ-ಪಾರ್ವತಿಯರ ಜಿಜ್ಞಾಸೆಗೆ ನಾರದರು ವಿಶ್ವಕರ್ಮರ ಮೂಲಕ ಉತ್ತರ ಹೇಳುವ ಪ್ರಯತ್ನ ಮಾಡಿದರು. ದೇವಶಿಲ್ಪಿ ಕೈಲಾಸ ಪ್ರವೇಶಿಸಿ “ರನ್ನ ಕನ್ನಡಿ’ಯನ್ನು ಶಿವ-ಪಾರ್ವತಿಗೆ ನೀಡಿದ. ಪಾರ್ವತಿ ತನ್ನ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಿ ಸಂತೋಷ ಭರಿತಳಾಗುವುದನ್ನು ಸಹಿಸದ ಶಿವ ತನ್ನ ಮೂರನೇ ಕಣ್ಣಿನ ಜ್ವಾಲೆಯಿಂದ ದೇವಶಿಲ್ಪಿಯನ್ನು ಸುಡಲು ಮುಂದಾದಾಗ ಇಡೀ ಕೈಲಾಸವೇ ಅಲ್ಲೋಲ ಕಲ್ಲೋಲ, ಮಾತ್ರವಲ್ಲದೆ ಪ್ರೇಕ್ಷಕರಿಗೂ ಒಮ್ಮೆ ದಿಗ್ಬ†ಮೆ ಮೂಡುವಂತಹ ರಂಗ ಸಂಯೋಜನೆ. ಮುಂದೆ ಶಿವೆ ತಾನೇ ಶಿವನ ಕಣ್ಣಿನ ಉರಿಯನ್ನು ಹೀರಿ ದೇವಶಿಲ್ಪಿಯನ್ನು ಕಾಪಾಡುತ್ತಾಳೆ. ಶಿವನ ಉರಿತಾಪಕ್ಕೆ “ಗೌರಿ’ಯಾಗಿದ್ದ ಪಾರ್ವತಿ ಕಪ್ಪಾಗಿ “ಕಾಳಿ’ಯಾಗಿ ಬದಲಾಗುತ್ತಾಳೆ. ಹೀಗೆ ತನ್ನನ್ನು ರಕ್ಷಿಸಿದ ಪಾರ್ವತಿಯನ್ನು ಮಾತೃಸ್ವರೂಪಿಣಿ ಎಂದೇ ದೇವಶಿಲ್ಪಿ ಕೊಂಡಾಡಿದ. ಮುಂದೆ ಅವಳನ್ನು ತನ್ನ ಕುಲದೇವಿಯಾಗಿ “ಕಾಳಿಕಾಂಬೆ’ಯಾಗಿ ಪೂಜಿಸುತ್ತೇನೆ ಎಂದು ನಿರ್ಧರಿಸಿದ.

ನೃತ್ಯರೂಪಕ ತೀವ್ರಗತಿಯಲ್ಲಿದರೂ ಸ್ವರಗಳ ಏರಿಳಿತಕ್ಕೆ ರಂಗಮಂಚ ತುಂಬಿಕೊಂಡಿರುವಂತೆ ಮೂಡಿದ ಸಂಯೋಜಕರ ಪರಿಕಲ್ಪನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ನರ್ತಕಿಯರ ಲಾಸ್ಯನೃತ್ಯಗಳ ಸಂಯೋಜನೆ ಉತ್ತಮವಾಗಿತ್ತು, ರೂಪಕದಲ್ಲಿ ಹಿನ್ನಲೆ ವಾಚಿಕ ಹೆಚ್ಚಿನ ಕಡೆ ಕಲಾವಿದರ ಅಭಿನಯಕ್ಕೆ ಅಡಿಗೆರೆ ಹಾಕುತ್ತಾ ಸಾಗುತ್ತಿತ್ತು. ಸಂಗೀತದ ನಂತರದ ಸಾಹಿತ್ಯ ಪದಗಳು ವೇದಿಕೆಯಲ್ಲಿ ಕಥಾ ದೃಶ್ಯಗಳಿಗೆ ಪೂರಕವಾಗಿತ್ತು. ಅಲ್ಲದೆ ಅತೀ ಸುಲಭವಾಗಿ ಅರ್ಥೈಸುವಂತಿತ್ತು. ಹಿಮ್ಮೇಳದಲ್ಲಿ ಹಿರಣ್ಮಯ, ಬಾಲಚಂದ್ರ ಭಾಗವತ್‌, ವೈಭವ್‌ ಪೈ, ಶುಭಂ, ಕೃಷ್ಣ ಕಾಮತ್‌ ಹಾಗೂ ರಂಗ ಪರಿಕಲ್ಪನೆ ರಾಜೇಶ್‌ ಬನ್ನಂಜೆ ಮತ್ತು ಮನೀಶ್‌ ಅಮ್ಮುಂಜೆ, ಸಹಕರಿಸಿದರು.

ಅನನ್ಯಾ, ಉಡುಪಿ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.