ಬರಡಾಗಿದ್ದ ಪಯಸ್ವಿನಿಯಲ್ಲಿ ನೀರಿನ ಹರಿವು
Team Udayavani, Apr 26, 2019, 5:50 AM IST
ಕಲ್ಲುಮುಟ್ಲು ಬಳಿ ನಿರ್ಮಿಸಿದ ಮರಳಕಟ್ಟ ತುಂಬಿ ನೀರು ನದಿಯ ಕೆಳಭಾಗಕ್ಕೆ ಹರಿದಿದೆ.
ಸುಳ್ಯ: ಬತ್ತಿ ಬರಡಾಗಿದ್ದ ಪಯಸ್ವಿನಿ ನದಿಯಲ್ಲಿ ನೀರ ಸೆಲೆ ಕಾಣಿಸಿಕೊಂಡಿದೆ. ಭಾಗಮಂಡಲ ಮೊದಲಾದೆಡೆ ಉತ್ತಮ ಮಳೆಯಾದ ಕಾರಣ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಕಂಡಿದ್ದು, ನಗರವು ನೀರಿನ ಬರದಿಂದ ಕೊಂಚ ಮಟ್ಟಿಗೆ ಪಾರಾಗಿದೆ!
ಕಳೆದ ಒಂದು ವಾರದಿಂದ ಮಡಿಕೇರಿ ತಾಲೂಕಿನ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಆಳ ಪ್ರದೇಶ ತುಂಬುತ್ತಾ ಸಾಗಿ, ನಗರದ ನೀರಿನ ಪೂರೈಕೆಗಾಗಿ ಕಲ್ಲುಮುಟ್ಲು ಬಳಿ ನಿರ್ಮಿಸಿದ ಮರಳಿಕಟ್ಟ ತುಂಬಿ ಹೆಚ್ಚುವರಿ ನೀರು ನದಿ ಕೆಳಭಾಗಕ್ಕೆ ಹರಿದಿದೆ. ಹೀಗಾಗಿ ಓಡಾಬಾೖ ಮೊದಲಾದೆಡೆ ಬರಡು ನೆಲವಾಗಿ ಬದಲಾಗಿದ್ದ ಪಯಸ್ವಿನಿಯಲ್ಲಿ ನೀರು ಹರಿದಿದೆ. ಆಳ ಪ್ರದೇಶ ತುಂಬಿದೆ. ಕೆಲ ದಿನಗಳ ಕಾಲ ನಿರಂತರ ಮಳೆ ಸುರಿದರೆ, ನಗರದ ನೀರಿನ ಬವಣೆಗೆ ಪರಿಹಾರ ದೊರೆಯಬಹುದು.
ಶುದ್ಧೀಕರಣದ ಸಮಸ್ಯೆ
ಚೆಂಬು, ಅರಂತೋಡು ಮೊದಲಾದೆಡೆ ನದಿಯಲ್ಲಿ ಕೆಂಬಣ್ಣದ ನೀರು ಹರಿಯು ತ್ತಿದ್ದು, ಕ್ರಮೇಣ ಮರಳಿನ ಕಟ್ಟದಲ್ಲಿ ಸಂಗ್ರಹಗೊಂಡಿರುವ ನೀರಿಗೆ ಸೇರಲಿದೆ. ಇಲಿಂದ್ಲ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಕೆ ಘಟಕ ಇದ್ದರೂ, ಅಲ್ಲಿನ ಶುದ್ಧೀಕರಣ ಯಂತ್ರ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಕೆಂಬಣ್ಣದ ನೀರೇ ನಳ್ಳಿ ಮೂಲಕ ಮನೆಗಳಿಗೆ ಹರಿಯಲಿದೆ. ಇಂತಹ ಸಮಸ್ಯೆ ಈ ಹಿಂದೆಯೂ ಆಗಿದೆ. ಮಳೆ ಬಂದು ನದಿಯಲ್ಲಿ ನೀರು ತುಂಬಿದ್ದರೂ, ಜನರ ಪಾಲಿಗೆ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ಹಾಗಾಗಿ ನದಿಯಲ್ಲಿ ನೀರಿದ್ದರೂ, ಇಲ್ಲದಿದ್ದರೂ ಸಮಸ್ಯೆ ತಪ್ಪದು ಎನ್ನುತ್ತಾರೆ ನಗರದ ನಿವಾಸಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ED: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಫ್ಲ್ಯಾಟ್ ಇ.ಡಿ.ವಶಕ್ಕೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.