ಕುಂಜಾರುಗಿರಿ: ಕೈ ಕೊಟ್ಟ ಶುದ್ಧ ಕುಡಿಯುವ ನೀರಿನ ಘಟಕ


Team Udayavani, Apr 26, 2019, 6:25 AM IST

neerina-ghataka

ಕಟಪಾಡಿ ಕುರ್ಕಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂಜಾರುಗಿರಿ ಎಂಬಲ್ಲಿ ಹೊಸದಾಗಿ ತೆರೆದ ಶುದ್ಧ ಕುಡಿಯುವ ನೀರಿನ ಘಟಕವು ಕೈ ಕೊಟ್ಟಿದ್ದು ಕಳಪೆ ಗುಣಮಟ್ಟದ ಯಂತ್ರಗಳ ಬಳಕೆ, ಕಳಪೆ ಕಾಮಗಾರಿಯ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಹಾಳಾದ್ದನ್ನು ದುರಸ್ತಿ ಮಾಡಿಲ್ಲ
ರಾಜ್ಯ ಸರಕಾರದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಕುರ್ಕಾಲು ಪಂಚಾಯತ್‌ ವ್ಯಾಪ್ತಿಯ ಕುಂಜಾರುಗಿರಿ ಯಲ್ಲಿ ಉಡುಪಿಯ ಕೆ. ಆರ್‌. ಐ. ಡಿ. ಎಲ್‌. ಇಲಾಖೆ ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. 2 ರೂ. ನಾಣ್ಯವನ್ನು ಬಳಸಿ 20 ಲೀಟರ್‌ ಶುದ್ಧ ಕುಡಿಯುವ ನೀರನ್ನು ಪಡೆಯುವ ಈ ಯೋಜನೆಯನ್ನು ಹೊಂದಿರುವ ಘಟಕವು ಹೆಚ್ಚು ದಿನ ಕಾರ್ಯಾಚರಿಸಿಲ್ಲ. ಕೈಕೊಟ್ಟ ಅನಂತರ ಈವರೆಗೂ ದುರಸ್ತಿ ಕಂಡಿಲ್ಲ. ಹಾಳಾದ ಬಿಡಿ ಭಾಗವನ್ನು ಬದಲಾಯಿಸಿ ಘಟಕವನ್ನು ಸುಸಜ್ಜಿತಗೊಳಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಡುಬೇಸಗೆಯಲ್ಲೂ ಮೀನಮೇಷ
ಈ ಕಡು ಬೇಸಗೆಯ ಸಂದರ್ಭವೂ ನೀರಿನ ಘಟಕದ ಯಂತ್ರ ಸರಿಪಡಿಸುವ ಕೆಲಸ ಕಾರ್ಯಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆ. ಹಾಳಾದ ಬಿಡಿಭಾಗಕ್ಕೆ ಕಂಪೆನಿ ವಾರಂಟಿ ಅವಧಿಯೊಳಗೆ ಹೊಸದಾಗಿ ಬಿಡಿಭಾಗವನ್ನು ಅಳವಡಿ ಸುವುದಾದರೆ ಇಷ್ಟೊಂದು ಕಾಲಾವಕಾಶ ಬೇಕೆ ಎಂಬ ಪ್ರಶ್ನೆ ಬಳಕೆದಾರರದ್ದು, ಹಾಳಾದ ಬಿಡಿಭಾಗವನ್ನು ಅಲ್ಲಿಂದಲ್ಲಿಗೇ ದುರಸ್ತಿ ಮಾಡಿ ಅಳವಡಿಸುವ ಹುನ್ನಾರ ಗುತ್ತಿಗೆದಾರರಧ್ದೋ ಎಂಬ ಶಂಕೆ ಬಲವಾಗಿ ಮೂಡಿಬರುತ್ತಿದೆ ಎನ್ನುತ್ತಾರೆ ಸ್ಥಳೀಯ ಜನಪ್ರತಿನಿಧಿಗಳು.

ಕೂಡಲೇ ದುರಸ್ತಿ
ಘಟಕದಲ್ಲಿ ವೋಲ್ಟೆàಜ್‌ ಸಮಸ್ಯೆ ಇತ್ತು. ಆ ಕಾರಣದಿಂದ ಮೋಟಾರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಸರಿಪಡಿಸಲಾಗುತ್ತದೆ.
-ಧೀರಜ್‌, ಏರಿಯಾ ಎಂಜಿನಿಯರ್‌

ಗಮನಕ್ಕೆ ತರಲಾಗಿದೆ
ಘಟಕ ಹಾಳಾದ ಕೂಡಲೇ ಸಂಬಂಧಪಟ್ಟ ಎಂಜಿನಿಯರ್‌ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಸರಿಪಡಿಸುವ ಭರವಸೆ ನೀಡಿದ್ದಾರೆ.
– ಚಂದ್ರಕಲಾ, ಪಿ.ಡಿ.ಒ. ಕುರ್ಕಾಲು ಗ್ರಾ.ಪಂ.

ಕೂಡಲೇ ದುರಸ್ತಿಗೊಳಿಸಿ
ಸ್ಥಳೀಯ ಗ್ರಾ.ಪಂ. ಸದಸ್ಯ ನಾಗೇಂದ್ರ ಅವರು ಹೇಳುವಂತೆ 2019ರ ಫೆ.4 ರಂದು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗಿ ಕೇವಲ 15 ದಿನ ಕಾರ್ಯಾಚರಿಸಿದೆ. ಹಲವಾರು ಕುಟುಂಬಗಳಿಗೆ ಪ್ರಯೋಜನಕಾರಿಯಾದ ಈ ಶುದ್ಧ ಕುಡಿಯುವ ನೀರಿನ ಘಟಕ ಕೈ ಕೊಟ್ಟಿದೆ. ಕೂಡಲೇ ಸಂಬಂಧಿತ ಅಧಿಕಾರಿ ಎಚ್ಚೆತ್ತು ಈ ಯೋಜನೆಯು ಜನಪರವಾಗಿ ದೀರ್ಘ‌ಕಾಲ ಬಳಕೆಗೆ ಬರುವಂತೆ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಲಿ. ಚುನಾವಣಾ ಕರ್ತವ್ಯಕ್ಕೆ ಬಂದವರಿಗೂ ಶುದ್ಧ ಕುಡಿಯುವ ನೀರು ಲಭಿಸಿಲ್ಲ. ದುರಸ್ತಿಗೆ ಇಷ್ಟೊಂದು ಸಮಯ ಬೇಕೇ? ಎಂದು ಅವರು ಪ್ರಶ್ನಿಸುತ್ತಾರೆ.

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.