ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ : ಭಾರತಕ್ಕೆ ಒಲಿಯಿತು ಅವಳಿ ಚಿನ್ನ
Team Udayavani, Apr 26, 2019, 9:45 AM IST
ಬೀಜಿಂಗ್ (ಚೀನ): “ಐಎಸ್‌ಎಸ್‌ಎಫ್ ರೈಫಲ್/ ಪಿಸ್ತೂಲ್ ವಿಶ್ವಕಪ್’ ಕೂಟದಲ್ಲಿ ಭಾರತ ಎರಡು ಚಿನ್ನದ ಪದಕಗಳಿಗೆ ಗುರಿ ಇರಿಸಿದೆ.
ಗುರುವಾರದ 10 ಮೀ. ಏರ್ ಪಿಸ್ತೂಲ್ ಮತ್ತು 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಭಾರತ ಈ ಸಾಧನೆ ಮಾಡಿತು.
10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್‌ಗಳಾದ ಸೌರಭ್ ಚೌಧರಿ-ಮನು ಭಾಕರ್ ಜೋಡಿ ಸತತ ಎರಡನೇ ಚಿನ್ನದ ಪದಕ ಗೆದ್ದು ಸಂಭ್ರಮಿಸಿತು. ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದ “ಐಎಸ್‌ಎಸ್‌ಎಫ್ ವಿಶ್ವಕಪ್’ ಕೂಟದಲ್ಲೂ ಈ ಜೋಡಿ ಚಿನ್ನ ಜಯಿಸಿತ್ತು.
10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಅಂಜುಮ್ ಮೌದ್ಗಿಲ್-ದಿವ್ಯಾಂಶ್ ಸಿಂಗ್ ಪನ್ವಾರ್ ಚೀನದ ರುಕ್ಸಾನ್ ಲಿಯು-ಹಾರನ್ ಯಾಂಗ್ ಜೋಡಿಯನ್ನು ಹಿಂದಿಕ್ಕಿ ಬಂಗಾರ ಗೆದ್ದರು. ಫೈನಲ್‌ನಲ್ಲಿ ಭಾರತ ಮತ್ತು ಚೀನದ ಸ್ಕೋರ್ 15-15ರಿಂದ ಟೈ ಆಗಿತ್ತು. ಕೊನೆಯ ಶೂಟ್‌ನಲ್ಲಿ 20.6 ಅಂಕ ಗಳಿಸಿದ ಭಾರತದ ಜೋಡಿ ಅಗ್ರಸ್ಥಾನಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.