ಬೇಸಿಗೆ ಬೇಗೆ ಬೆನ್ನಲ್ಲೇ ಜಲದಾಹ
ಪುಟಪಾಕ ಗ್ರಾಮಸ್ಥರ ಪ್ರತಿನಿತ್ಯ ಪರದಾಟ
Team Udayavani, Apr 26, 2019, 10:57 AM IST
ಗುರುಮಠಕಲ್: ರಾಜ್ಯದ ಕೊನೆ ಗ್ರಾಮವಾದ ಪುಟಪಾಕನಲ್ಲಿ ನೀರಿಗಾಗಿ ನಿತ್ಯವೂ ಪರದಾಡುವ ಪರಿಸ್ಥಿತಿ ಎದುರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತೆಲಂಗಾಣ ರಾಜ್ಯದ ವಾಣಿಜ್ಯ ಪಟ್ಟಣ ನಾರಾಯಪೇಟ್‌ಗೆ ಹೋಗುವ ಹೆದ್ದಾರಿಯಲ್ಲಿರುವ ಪುಟಪಾಕ್ ಗ್ರಾಮದಲ್ಲಿ ಸುಮಾರು 8200 ಜನಸಂಖ್ಯೆ ಇದೆ. ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಪರಿಹಾರವಾಗುತ್ತಿಲ್ಲ.
ಸುಮಾರು 5 ಕೊಳವೆಬಾವಿಗಳಿಂದ ಗ್ರಾಮದ ನೀರಿನ ಟ್ಯಾಂಕ್‌ಗೆ ಸಂಪರ್ಕವಿದೆಯಾದರೂ ಜನರಿಗೆ ಮಾತ್ರ ನೀರು ಸಾಲುತ್ತಿಲ್ಲ. ಒಂದೆಡೆ ವಿದ್ಯುತ್ ಕಡಿತದ ಸಮಸ್ಯೆಯಾದರೆ, ಇನ್ನೊಂದೆಡೆ ಕೊಳವೆಬಾವಿಗಳು ಕೈಕೊಡುವುದು ಅಥವಾ ನೀರು ಬತ್ತುವುದು ಹೀಗೆ ಸಮಸ್ಯೆ ಮಾತ್ರ ನಿರಂತರವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿನ ಎಲ್ಲ ಕೈಪಂಪ್‌ಗ್ಳಿಗೆ ಸಿಂಗಲ್ ಫೇಸ್ ಮೋಟಾರ್ ಅಳವಡಿಸಿದ್ದೇವೆ. ವಿದ್ಯುತ್ ಸರಬಾರಾಜು ಇದ್ದಾಗ ಅಲ್ಲಿಯೇ ನೀರು ಪಡೆಯಬಹುದು. ಇನ್ನು ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. ಇದರಿಂದ ಕೊಳವೆಬಾವಿಯಿಂದ ನೀರು ಬರುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ಸಂಗೀತಾ.
ಒಟ್ಟಾರೆಯಾಗಿ ಮಳೆಗಾಲವೋ, ಚಳಿಗಾಲವೋ ಎನ್ನುವ ಬೇಧವಿಲ್ಲದೆ ಗ್ರಾಮಸ್ಥರಿಗೆ ನೀರಿನ ಚಿಂತೆಯಂತೂ ಸದಾ ಕಾಡುತ್ತದೆ. ಇನ್ನೂ ಬೇಸಿಗೆ ಸಮಯ ಎಂದರೆ ಗ್ರಾಮಸ್ಥರ ಗೋಳು ದೇವರೇ ಬಲ್ಲ ಎನ್ನುವುದು ಪುಟಪಾಕ ಗ್ರಾಮಸ್ಥರ ಅಳಲು.
ಸಾಬ್ರೆ ಕರೆಂಟ್ ಇದ್ರೆ ಬೋರ್‌ದಾಗ ನೀರು ಬರ್ತವ. ಕೈನಿಂದ ಎಷ್ಟು ಒಡುದ್ರೂ ನೀರು ಬರವಲ್ತು. ನಮ್ ಕಷ್ಟ ಯಾರೂ ತೀರ್ಸವಲ್ರು. ಬೇಸಿಗಿ ಬರೋದ್ರೊಳಗ ಯಾದಗಿರಿ ಭೀಮಾ ನೀರು ಬರ್ತವ ಅಂತ ಹೇಳ್ತಿದ್ರು. ಅದೂ ಬರಂಗ ಕಾಣವಲ್ತು. ಈ ಬೇಸಿಗಿದಾಗ ನೀರಿಗಾಗಿನೇ ನಮ್ ಹೆಣ ಬೀಳ್ತದ. ಸುಮನ್ನೆ ಕುಂತರೆ ನೀರೆ ಸಿಗಲ್ಲ. ನಮ್ದಂತು ಬಿಡ್ರಿ ದನಗಳಿಗಿ ಕುಡಿಲಕ್ಕೆ ಕಾಡಲ್ಲಿ ನೀರೆ ಸಿಗವಲ್ದು. ಅವುಕ್ಕೆ ಏನ್ಮಾಡ್ಬೇಕೋ ಗೊತ್ತಾಗುತ್ತ ಇಲ್ಲ.
•ಹಣ್ಮಮ್ಮ, ಗ್ರಾಮಸ್ಥರು.
ಖಾಸಗಿ ಬೋರ್‌ಗಳನ್ನಾದರೂ ಬಾಡಿಗೆಗೆ ಪಡೆಯೋಣ ಎಂದರೆ ಅಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇನ್ನು ಖಾಸಗಿ ಬೋರುಗಳಿಂದ ಗ್ರಾಮಕ್ಕೆ ಸರಬರಾಜು ಮಾಡಲು ಪೈಪ್ ಲೈನ್ ಮಾಡಿದ ನಂತರ ನೀರು ಎರಡೆ ದಿನಕ್ಕೆ ಖಾಲಿಯಾಗುವ ಸಂಭವವೇ ಹೆಚ್ಚಿಗಿದೆ.
•ವೆಂಕಟ್ರಾಮುಲು ಕಲಾಲ,
ಎಪಿಎಂಸಿ ಉಪಾಧ್ಯಕ್ಷ ಪುಟಪಾಕ
ಏ ಏನ್ಮಾಡ್ಬೇಕು, ಬಿಸಿಲಾದ ಅಂತ ಬಿಟ್ರೆ ಕುಡ್ಯಾಕ್ ನೀರು ಸಿಗವಲ್ದು. ನಮ್ ಹಣೇಬರ ನೀರು ಯಾವಾಗ್ ಸಿಗ್ತದೋ ಅಂತ ಕಾಯ್ತಾ ಕೂಡ್ಬೇಕು. ಇಲ್ಲಂದ್ರೆ ಕುಡ್ಯಾಕೂ ಇಲ್ಲ. ತೊಳ್ಯಾಕೂ ಇಲ್ಲ ಅಂದಂಗಾದ ನಮ್ ಪರಿಸ್ಥಿತಿ.
• ಬಾಲಮ್ಮ, ಗ್ರಾಮಸ್ಥೆ
ಚನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.