ಸಿಗಂಧೂರು ಶರಾವತಿ ಹಿನ್ನೀರಿನಲ್ಲಿ 2.5 ಕಿಮೀ ಈಜಿದ ಪೋರಿ ಮಿಥಿಲಾ!
Team Udayavani, Apr 26, 2019, 11:51 AM IST
ಶರಾವತಿ ಹಿನ್ನೀರಿನ ಸಿಗಂಧೂರು ದಡದಿಂದ 1.55 ಗಂಟೆಯಲ್ಲಿ ಈಜಿ ಗುರಿ ಕ್ರಮಿಸಿದ ಮಿಥಿಲಾ
ಸಾಗರ: ತಾಲೂಕಿನ ಅಂಬಾರಗೊಡ್ಲು ಸಮೀಪದ ಕಿಪ್ಪಡಿ ಗ್ರಾಮದ ಕೇವಲ ಮೂರು ವರ್ಷ ಒಂಬತ್ತು ತಿಂಗಳ ಪೋರಿ ಮಿಥಿಲಾ ಗಿರೀಶ್ ಹೊಳೆಬಾಗಿಲಿನ ಸಿಗಂಧೂರು ದಡದಿಂದ ಶರಾವತಿ ಹಿನ್ನೀರಿನಲ್ಲಿ 2.5 ಕಿಮೀ ದೂರವನ್ನು ಒಂದು ಗಂಟೆ 55 ನಿಮಿಷಗಳಲ್ಲಿ ಕ್ರಮಿಸಿದ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಭಾನುವಾರ ಹರೀಶ್ ದಾಮೋದರ ನವಾಥೆ ಅವರ ಜಲಯೋಗ ಸಂಸ್ಥೆಯ 26 ಈಜುಗಾರರ ತಂಡದ ಜೊತೆ ಈಜಿದ ಮಿಥಿಲಾ ಕಳೆದ ಮಾ. 24ರಂದು ಶರಾವತಿ ಹಿನ್ನೀರಿನ ಹಸಿರುಮಕ್ಕಿಯಲ್ಲಿ ಒಂದು ಕಿಮೀ ದೂರ ಒಂದು ಗಂಟೆಯಲ್ಲಿ ಪೂರೈಸಿದ ದಾಖಲೆಯನ್ನು ಸುಧಾರಿಸಿದರು. ಸಿಗಂಧೂರಿನಲ್ಲಿ ಹೆರಿಟೇಜ್ ಹೋಮ್‌ನ ಹಕ್ಕಲಳ್ಳಿ ಎನ್.ಸಿ. ಗಂಗಾಧರ್ ಅವರ ಬೆಂಬಲದೊಂದಿಗೆ ಮಿಥಿಲಾ ರಕ್ಷಕರಾದ ಪ್ರಸನ್ನ, ವಿನಯ, ಆದಿತ್ಯ, ಕೌಶಿಕ, ಸುನೀಲ, ಕಿರಣ ಅವರ ಸಮ್ಮುಖದಲ್ಲಿ ಈಜಿದರು.
ತನ್ನ 2.6 ವರ್ಷದಿಂದಲೇ ಈಜು ಕಲಿಕೆಗೆ ಶುರು ಮಾಡಿದ ಮಿಥಿಲಾಗೆ ಆರಂಭಿಕವಾಗಿ ತಂದೆ ಗಿರೀಶ್ ಹಾಗೂ ತಾಯಿ ವಿನುತಾ ಗುರುಗಳಾಗಿದ್ದು, ನಂತರದಲ್ಲಿ ಜಲಯೋಗ ಸಂಸ್ಥೆಯ ನವಾಥೆ ತರಬೇತಿ ನೀಡಿದ್ದರು. ಜಲಯೋಗ ಶಿಕ್ಷಣದಲ್ಲಿ ಈಜಿನ ಸುರಕ್ಷಿತ ಸಾಮಗ್ರಿಗಳನ್ನು ರೂಪಿಸಿ ಜನಸಾಮಾನ್ಯರೂ ಒಂದೂವರೆ ಗಂಟೆ ಭಯವಿಲ್ಲದೆ ಈಜಬಹುದು ಎಂಬುದನ್ನು ಪ್ರತಿಪಾದಿಸುವ ನವಾಥೆ ತಮ್ಮ ಪತ್ನಿ ಉಷಾ ಅವರನ್ನೂ ಒಳಗೊಂಡಂತೆ ಮಿಥಿಲಾ ಜೊತೆಯಲ್ಲಿ ಈಜುವ ಮೂಲಕ ಜಲಪರಿಸರದ ಉಳಿವಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕೇವಲ ಮೂರು ವರ್ಷ ಒಂಬತ್ತು ತಿಂಗಳ ಪೋರಿ ಮಿಥಿಲಾ ಗಿರೀಶ್ ಹೊಳೆಬಾಗಿಲಿನ ಸಿಗಂಧೂರು ದಡದಿಂದ ಶರಾವತಿ ಹಿನ್ನೀರಿನಲ್ಲಿ 2.5 ಕಿಮೀ ದೂರವನ್ನು ಒಂದು ಗಂಟೆ 55 ನಿಮಿಷಗಳಲ್ಲಿ ಕ್ರಮಿಸಿದ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.