ಬರಡು ಭೂಮಿಯಲ್ಲಿ ಕೋಟಿ ನಾಟಿ
Team Udayavani, Apr 26, 2019, 11:59 AM IST
ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದ್ದು, ಪರಿಸರ ಮಾಲಿನ್ಯ ಹಾಗೂ ಬಿಸಿಲ ಧಗೆಯಿಂದಾಗಿ ಜೀವ ಸಂಕುಲಗಳ ಬದುಕಿಗೆ ಕುತ್ತು ಬಂದಿದೆ. ಪರಿಸರಕ್ಕೆ ಆಪತ್ತು ಬಂದ ಹಿನ್ನೆಲೆಯಲ್ಲಿ ಕಾಡಿನ ದೃಷ್ಟಿ ಚುಕ್ಕೆಗಳಾದ ಜಿಂಕೆ, ಆನೆ, ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಕೆಲವು ಕಡೆ ನೀರಿಲ್ಲದೆ ಪ್ರಾಣಿ ಸಂಕುಲ ಪ್ರಾಣ ತೆತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್ 3190, ‘ಕೋಟಿ ನಾಟಿ’ ಹೆಸರಿನಲ್ಲಿ ಬರಡು ಭೂಮಿಯಲ್ಲಿ ಸಸಿಗಳನ್ನು ನೆಡುವ ಯೋಜನೆ ರೂಪಿಸಿದೆ. 5 ವರ್ಷಗಳಲ್ಲಿ ಸುಮಾರು 1 ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ಇದಾಗಿದೆ.
ಇದಕ್ಕಾಗಿಯೇ ರಾಜ್ಯದಲ್ಲಿರುವ ಬರಡು ಭೂಮಿ ಬಗ್ಗೆ ವೈಜ್ಞಾನಿಕ ಸರ್ವೇ ಮಾಡಲಾಗಿದ್ದು, ಶೀಘ್ರದಲ್ಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇದಾದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ವಿಸ್ತರಿಸುವ ಆಲೋಚನೆ ಹೊಂದಲಾಗಿದೆ.
ಬತ್ತಿ ಹೋಗಿವೆ ಜೀವ ಸೆಲೆಗಳು: ಬಿಸಿಲ ಧಗೆಯಿಂದಾಗಿ ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಏಳು ನದಿಗಳ ಮೂಲ ಸೆಲೆ ಬತ್ತಿ ಹೋಗಿದ್ದು, ಆ ಭಾಗದಲ್ಲಿ ವಾಸವಾಗಿರುವ ಜೀವ ಸಂಕುಲಗಳು ಆಪತ್ತಿನಲ್ಲಿವೆ. ಒಂದು ಕಡೆ ಬಿಸಿಲ ಝಳ, ಮತ್ತೂಂದು ಕಡೆ ನೀರಿಲ್ಲದೆ ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕಿವೆ. ಈ ಎಲ್ಲಾ ಘಟನೆ ಕೇಂದ್ರಿಕರಿಸಿಯೇ ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್ 3190, ‘ಕೋಟಿ ನಾಟಿ’ ಪರಿಕಲ್ಪನೆಗೆ ಜೀವ ನೀಡಿದೆ.
ಮಣ್ಣಿನ ವೈಜ್ಞಾನಿಕ ಪರೀಕ್ಷೆ: ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅಮರ್ ನಾರಾಯಣ್ ಅವರ ಕನಸಿನ ಕೂಸು ಕೋಟಿ ನಾಟಿ ಯೋಜನೆಯಾಗಿದೆ. ಬರಡು ನೆಲದಲ್ಲಿ ಮಳೆ ತರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಆ ಹಿನ್ನೆಲೆಯಲ್ಲಿ ಮಣ್ಣಿನ ವೈಜ್ಞಾನಿಕ ಪರೀಕ್ಷೆ ನಡೆಸಲಾಗಿದ್ದು, ಆ ಮಣ್ಣಿಗೆ ಯಾವ ಜಾತಿ ಸಸಿ ನೆಟ್ಟರೆ ಉತ್ತಮ ಎಂಬ ಬಗ್ಗೆಯೂ ವೈಜ್ಞಾನಿಕ ರೀತಿಯಲ್ಲೇ ಮಾಹಿತಿ ಕಲೆಹಾಕಲಾಗಿದೆ ಎಂದು ರೋಟರಿಯ ಹಿರಿಯ ಅಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
‘ಉದಯವಾಣಿ’ ಜತೆ ಮಾತನಾಡಿದ ಅವರು, ‘ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್ 3190, ಮಂಡ್ಯದಿಂದ ತಿರುಪತಿವರೆಗೂ ಸುಮಾರು 5600 ಸದಸ್ಯರನ್ನು ಹೊಂದಿದೆ. ಈ ಸದಸ್ಯರಿಗೆ ಗಿಡಗಳ ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಬೀಜಗಳನ್ನು ಎರಚಿ ಗಿಡ ಬೆಳೆಸುವ ಆಲೋಚನೆ ಇದೆ. ಸರ್ಕಾರಿ ಭೂಮಿ ಇದ್ದರೆ ಸಂಬಂಧಿಸಿದವರಿಂದ ಅನುಮತಿ ಪಡೆದು ಸಸಿಗಳನ್ನು ನೆಡಲಾಗುವುದು. ಯಾವ ಜಾತಿಯ ಗಿಡಗಳನ್ನು ನೆಡಬೇಕೆಂಬ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ,’ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.