ಸಾಧಿಸುವ ಛಲವಿದ್ದರೆ ಸಾಧನೆ ಹಾದಿ ಸುಲಭ

ವಿದ್ಯಾರ್ಥಿಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ,ವಿವೇಕ್‌ ಕಲ್ಪೋತ್ಸವದಲ್ಲಿ ಬಣ್ಣಬಣ್ಣದ ಸೀರೆ, ಪಂಚೆ, ಶಲ್ಯಗಳದ್ದೇ ಕಾರುಬಾರು

Team Udayavani, Apr 26, 2019, 4:53 PM IST

tumkur-3-tdy..

ತಿಪಟೂರು: ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ ಎಂದು ತಾಲೂಕಿನ ಯುಪಿಎಸ್‌ಸಿ ಟಾಪರ್‌ ಎಚ್. ಬಿ.ವಿವೇಕ್‌ ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ 3ದಿನಗಳ ಕಾಲ ಹಮ್ಮಿಕೊಂಡಿರುವ ಕಲ್ಪೋತ್ಸವ-2019 ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಆವರು ಮಾತನಾಡಿದರು.

ಸಲಹೆ ಸೂಚನೆ ನೀಡುತ್ತೇನೆ: ಮಧ್ಯಮ ಕುಟುಂಬ ದಿಂದ ಬಂದ ನನಗೆ ವಿದ್ಯಾಭ್ಯಾಸದ ಅವಧಿಯಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆಗಳುಂಟಾದವು. ಅವುಗಳನ್ನೆಲ್ಲ ಧೈರ್ಯವಾಗಿ ಎದುರಿಸಿ ಕುಟುಂಬದ ಸಹಾಯದೊಂದಿಗೆ ಯುಪಿಎಸ್‌ ಪರೀಕ್ಷೆಯಲ್ಲಿ 257ನೇ ರ್‍ಯಾಂಕ್‌ ಪಡೆದುಕೊಂಡೆ. ಕಷ್ಟಗಳು ಬಂದಾಗ ಮಾತ್ರ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಳ್ಳಲಿದ್ದೇವೆ. ಸತತ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ, ಸಾಧಿಸುವ ಛಲ ಇದ್ದರೆ ಯಾರೂ ಬೇಕಾದರೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹು ದಾಗಿದೆ ಎಂದ ಅವರು, ವಿದ್ಯಾರ್ಥಿಗಳು ಯುಪಿಎಸ್‌ ಪರೀಕ್ಷೆಗೆ ಹೇಗೆ ತಯಾರಾಗಬೇಕು. ಯಾವ ರೀತಿ ಪರೀಕ್ಷೆ ಎದುರಿಸಬೇಕೆಂಬ ಬಗ್ಗೆ ನನ್ನನ್ನು ಸಂಪರ್ಕಿಸಿ ಭೇಟಿ ಮಾಡಿದರೆ ಸಲಹೆ ಸೂಚನೆ ಕೊಡುವುದಾಗಿ ತಿಳಿಸಿದರು.

ಟಾಪರ್‌ ಆಗಬಹುದು: ನಗರದಲ್ಲಿ ಓದಿರುವರು ಮತ್ತು ಹಣವಿದ್ದವರು, ಇಂಗ್ಲಿಷ್‌ನಲ್ಲೂ ಆಳವಾದ ಜ್ಞಾನವಿದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಳ್ಳಬಹುದು ಎಂಬ ನಂಬಿಕೆ ಕೈಬಿಡಬೇಕು. ಬಡವರು, ಮಧ್ಯಮ ವರ್ಗದವರು ಇಂಥ ಪರೀಕ್ಷೆ ಗಳನ್ನು ತೆಗೆದುಕೊಂಡು ಟಾಪರ್‌ ಆಗಬಹುದು. ನನಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಬಹುದು. ಹಾಗಾಗಿ ಯಾವುದೇ ವಿಶೇಷ ತರಬೇತಿಗಳ ಅವಶ್ಯಕತೆ ಬೇಕಾಗಿಲ್ಲ. ಪ್ರತಿಭೆ, ಗುರಿಮುಟ್ಟುವ ಛಲ, ತಾಳ್ಮೆ, ಸಹನೆಗಳಿಂದ ಪರಿಶ್ರಮದಲ್ಲಿ ಓದುವ ಯಾರಾದರೂ ಪರೀಕ್ಷೆಗಳನ್ನು ತೆಗೆದುಕೊಂಡು ಟಾಪರ್‌ ಆಗಬಹುದು ಎಂದು ತಿಳಿಸಿದರು.

ಗುರಿ ಇರಬೇಕು: ತಾಲೂಕಿನ ಮತ್ತೋರ್ವ ಯುಪಿಎಸ್‌ಸಿ ಟಾಪರ್‌ ಡಾ. ನಾಗಾರ್ಜುನ ಬಿ. ಗೌಡ ಮಾತನಾಡಿ, ಜೀವನದಲ್ಲಿ ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆಯ್ಕೆ ಮಾಡಿಕೊಂಡ ಗುರಿಯನ್ನು ಸಾಧಿಸುತ್ತೇನೆಂಬ ಹಠ ಮತ್ತು ಛಲ ಇದ್ದರೆ ಏನೇ ತೊಡಕುಗಳು ಬಂದರೂ ಸಾಧನೆ ಮಾಡಬಹುದು. ಸಾಧಿಸಿದ ಮೇಲೆ ಕೇವಲ ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ, ದೇಶಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು. ಯುವಕರು ಹೆಚ್ಚಿನ ಸಂಬಳಕ್ಕಾಗಿ ಬೇರೆ ಬೇರೆ ದೇಶಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಆದರೆ, ನಮ್ಮವರ ಪ್ರೀತಿ, ವಿಶ್ವಾಸದಿಂದ ದೂರವಾಗಿ ಎಷ್ಟೇ ಸಂಬಳ ಪಡೆದರೂ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಯುವಕರು ಆದಷ್ಟು ನಮ್ಮ ದೇಶ ಬಿಟ್ಟು ಹೋಗದೆ, ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು ಎಂದರು.

ಸಾಧನೆ ಮಾಡಿ: ಕೆವಿಎಸ್‌ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಯುಪಿಎಸ್‌ಸಿ ಟಾಪರ್‌ಗಳಾದ ಎಚ್. ಬಿ.ವಿವೇಕ್‌ ಮತ್ತು ಡಾ. ನಾಗಾರ್ಜುನ ಬಿ.ಗೌಡ ನಮ್ಮ ತಾಲೂಕಿನವರೇ ಆಗಿದ್ದು, ಕಠಿಣ ಪರಿಶ್ರಮದಿಂದ ಓದಿ ಪಾಸು ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನೀವು ಸಹ ಅವರಂತೆ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ಕೆವಿಎಸ್‌ ಖಜಾಂಚಿ ಟಿ.ಎಸ್‌.ಶಿವಪ್ರಸಾದ್‌ ಮಾತ ನಾಡಿ, ಯುವ ಪ್ರತಿಭೆಗಳು ನಿಮಗೆ ಆದರ್ಶವಾಗಿದ್ದು, ಅವರು ಕಷ್ಟಸುಖಗಳ ಹಾದಿಯಲ್ಲಿ ಬೆಳೆದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ತಿಪಟೂರಿ ನಲ್ಲಿಯೇ ಓದಿ ಬೆಳೆದ ಇವರುಗಳು ಸಮಾಜಕ್ಕೆ ಸೇವೆ ಸಲ್ಲಿಸಿ ಮತ್ತಷ್ಟು ಹೆಸರು ಗಳಿಸಲಿ ಎಂದು ಆಶಿಸಿದರು.

ಪ್ರತಿಭೆಗಾಗಿ ಕಲ್ಪೋತ್ಸವ: ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು ಕೇವಲ ಓದಿಗೆ ಸೀಮಿತವಾಗದೆ ಕಲೆ, ಸಾಹಿತ್ಯ, ಕ್ರೀಡೆ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಲೆ ಉಳಿಸಲು ಕಾಲೇಜಿ ನಲ್ಲಿ ಪ್ರತೀ ವರ್ಷವೂ ಅದ್ಧೂರಿಯಾಗಿ ಕಲ್ಪೋತ್ಸವ ನಡೆಸಿಕೊಂಡು ಬರುತ್ತಿದ್ದು, ಪ್ರತಿಭೆಯನ್ನು ಅಭಿವ್ಯಕ್ತ ಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಕೆವಿಎಸ್‌ ಕಾರ್ಯದರ್ಶಿ ಟಿ.ಯು. ಜಗದೀಶಮೂರ್ತಿ, ಸದಸ್ಯರಾದ ನಂಜುಂಡ ಸ್ವಾಮಿ, ಸ್ವರ್ಣಗೌರಿ, ಸುಮನ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.