ಈ ಬಾರಿ ಪ್ರಧಾನಿ ಮೋದಿ ಅವರ ಆದಾಯ ಎಷ್ಟಾಗಿದೆ? ವಿವರ ಬಹಿರಂಗ
Team Udayavani, Apr 26, 2019, 5:53 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಜೊತೆಗೆ ಅಫಿಡವಿಟ್ ನಲ್ಲಿ ತಮ್ಮ ಆದಾಯದ ವಿವರವನ್ನು ಘೋಷಿಸಿಕೊಂಡಿದ್ದಾರೆ.
ಮೋದಿ ಅವರ ಆದಾಯ ಎಷ್ಟಾಗಿದೆ?
*ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 1.27 ಕೋಟಿ ರೂ. ಠೇವಣಿ ಇದೆ.
*ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 2.51 ಕೋಟಿ ರೂಪಾಯಿ.
*ಒಟ್ಟು ಚರಾಸ್ತಿ ಮೌಲ್ಯ 1,41,36,119 (1.41 ಕೋಟಿ ರೂಪಾಯಿ)
*ಸ್ಥರಾಸ್ತಿ ಒಟ್ಟು ಮೌಲ್ಯ 1.10 ಕೋಟಿ ರೂಪಾಯಿ
*ಬಾಂಡ್ಸ್ 20,000, ಎಲ್ ಐಸಿ ಮತ್ತು ಎನ್ ಎಸ್ ಸಿ 9,51,813 ರೂಪಾಯಿ.
* 4 ಚಿನ್ನದ ಉಂಗುರದ ಬೆಲೆ 1,13,800 ರೂಪಾಯಿ.
ಪ್ರಧಾನಿ ಮೋದಿ ಆದಾಯ ಮೂಲ ಯಾವುದು?
ಅಫಿಡವಿಟ್ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಆದಾಯ ಮೂಲ ಸರ್ಕಾರದ ಸಂಬಳ ಹಾಗೂ ಅವರ ಉಳಿತಾಯದ ಮೇಲಿನ ಬಡ್ಡಿ. 2019ರ ಲೋಕಸಭಾ ಚುನಾವಣೆಯ ಅಫಿಡವಿಟ್ ನಂತೆ, ಮೋದಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪಗಳಿಲ್ಲ.
2019ರ ಮಾರ್ಚ್ 31ರವರೆಗೆ ಪ್ರಧಾನಿ ಮೋದಿ ಅವರ ಕೈಯಲ್ಲಿ 38, 750 ರೂಪಾಯಿ ನಗದು ಹಣ. ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ 4,143 ರೂಪಾಯಿ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1.27 ಕೋಟಿ ಠೇವಣಿ ಇಟ್ಟಿದ್ದಾರೆ. 2014ರಲ್ಲಿ ತಮ್ಮ ಕೈಯಲ್ಲಿ 32,700 ರೂಪಾಯಿ ನಗದು ಹಾಗೂ ಬ್ಯಾಂಕ್ ಬ್ಯಾಲೆನ್ಸ್ 26.05 ಲಕ್ಷ ರೂಪಾಯಿ ಹೊಂದಿದ್ದು, 32.48 ಲಕ್ಷ ರೂಪಾಯಿ ನಿರಖು ಠೇವಣಿ ಇಟ್ಟಿರುವುದಾಗಿ ಘೋಷಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.