![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 27, 2019, 5:00 AM IST
ಬೆಳಗಾವಿ: ರಮೇಶ ಹಾಗೂ ಸತೀಶ ಜಾರಕಿಹೊಳಿ ಸಹೋದರರ ಭಿನ್ನಾಭಿಪ್ರಾಯ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಕುಟುಂಬದ ವಿಚಾರವನ್ನು ಮಾಧ್ಯಮದ ಮುಂದೆ ಚರ್ಚಿಸುವುದು ಬೇಡ ಎಂದು ಇಬ್ಬರಿಗೂ ಸಲಹೆ ನೀಡಿದ್ದಾರೆ.
ಗೋಕಾಕದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ರಮೇಶ ಹಾಗೂ ಸತೀಶ ಜತೆ ನಾನು ಮಾತುಕತೆ ನಡೆಸಿದ್ದೇನೆ. ಎಲ್ಲರೂ ತಪ್ಪು ಮಾಡೋದು ಸಹಜ. ಆದರೆ, ಅದನ್ನು ದೊಡ್ಡದಾಗಿ ಮಾಡದೆ ಪರಸ್ಪರ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
ಮಾಧ್ಯಮದವರ ಬಾಯಿಗೆ ಸಿಗೋದು ಬೇಡ ಎಂದು ಸಹೋದರರಿಗೆ ಮನವರಿಕೆ ಮಾಡಿರುವೆ’ ಎಂದರು. ಮೇ 23ರವರೆಗೆ ಯಾವುದೆ ರಾಜಕೀಯ ಹೇಳಿಕೆ ನೀಡದೆ ಸುಮ್ಮನಿರುವಂತೆ ಎಲ್ಲ ಪಕ್ಷದವರಿಗೆ ಮನವಿ ಮಾಡಿದ್ದೇನೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಎಲ್ಲವೂ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.
You seem to have an Ad Blocker on.
To continue reading, please turn it off or whitelist Udayavani.