ನಗರದ ಮೂರು ಕಡೆ ನಿರಾಶ್ರಿತರ ಕೇಂದ್ರ
Team Udayavani, Apr 27, 2019, 4:59 AM IST
ಬೆಂಗಳೂರು: ನಗರದ ರಸ್ತೆ ಬದಿಯಲ್ಲಿ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಸೂರು ಕಲ್ಪಿಸಲು ಕೊನೆಗೂ ಬಿಬಿಎಂಪಿ ಮನಸು ಮಾಡಿದ್ದು, ನಗರದ ಮೂರು ಕಡೆ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್ ಕರೆದಿದೆ.
ನಗರದಲ್ಲಿನ ನಿರಾಶ್ರಿತರ ಪತ್ತೆಗಾಗಿ ಮತ್ತು ಅವರಿಗೆ ಸೂಕ್ತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ 250 ಸ್ವಯಂ ಸೇವಾ ಸಂಸ್ಥೆಗಳು ಇಂಪ್ಯಾಕ್ಟ್ ಇಂಡಿಯಾ ತಂಡ ರಚಿಸಿಕೊಂಡು ನಿರಾಶ್ರಿತರ ಸಮೀಕ್ಷೆ ನಡೆಸಿದ್ದವು. ಅದರಂತೆ 10 ತಂಡಗಳು, 8 ವಲಯಗಳಲ್ಲಿ ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಿದ್ದವು.
ಪ್ರಮುಖವಾಗಿ ರಾತ್ರಿ ರಾತ್ರಿ 10 ರಿಂದ ಬೆಳಗ್ಗೆ 3 ಗಂಟೆವರೆಗೆ ಕೆ.ಆರ್.ಮಾರುಕಟ್ಟೆ, ರೈಲು ನಿಲ್ದಾಣ ಸೇರಿ ಪ್ರಮುಖ ಕಡೆಗಳಲ್ಲಿ ಸಮೀಕ್ಷೆ ನಡೆಸಿ ನಗರದಲ್ಲಿ 6 ಸಾವಿರ ನಿರಾಶ್ರಿತರು ಇರುವುದು ಕಂಡುಬಂದಿತ್ತು. ಆದರಂತೆ ನಿರಾಶ್ರಿತರಿಗಾಗಿ ನಗರದಲ್ಲಿ ಕನಿಷ್ಠ 10 ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತಾದರೂ, ಅದನ್ನು ಅನುಷ್ಠಾನಗೊಳಿಸಲು ಮುಂದಾಗಿರಲಿಲ್ಲ.
“ಉದಯವಾಣಿ’ ಗಮನ ಸೆಳೆದಿತ್ತು: ನಗರದಲ್ಲಿರುವ ನಿರಾಶ್ರಿತರು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಬಿಬಿಎಂಪಿ ಅವರಿಗೆ ಸೂರು ಕಲ್ಪಿಸುವಲ್ಲಿ ವಿಫಲವಾಗಿರುವ ಕುರಿತಂತೆ “ಉದಯವಾಣಿ’ ಪತ್ರಿಕೆಯು ಏಪ್ರಿಲ್ 21ರಂದು “ನಿರಾಶ್ರಿತರ ಕೇಂದ್ರಗಳಿಗೇ ಇಲ್ಲ ಆಶ್ರಯ’ ಶೀರ್ಷಿಕೆಯಡಿ ವಿವರವಾದ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಪಾಲಿಕೆಯು ನಗರದ ವಿವಿಧ ಕಡೆಗಳಲ್ಲಿ ನಿರಾಶ್ರಿತರ ಆಶ್ರಯ ತಾಣ ನಿರ್ಮಿಸಲು ಟೆಂಡರ್ ಆಹ್ವಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.