ಅಚ್ಚಡ – ಚೊಕ್ಕಾಡಿ : ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ
ಸುಮಾರು 29 ಕ್ಕೂ ಅಧಿಕ ಕುಟುಂಬಗಳಿಗೆ ಪ್ರಯೋಜನ
Team Udayavani, Apr 27, 2019, 10:09 AM IST
••ವಿಜಯ ಆಚಾರ್ಯ, ಉಚ್ಚಿಲ
ಕಟಪಾಡಿ,ಎ.26: ಅಚ್ಚಡ – ಚೊಕ್ಕಾಡಿ ಭಾಗದಲ್ಲಿ ನೀರು ಪೂರೈಕೆಗೆ ಇದ್ದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ ಇದೀಗ ಕುಡಿಯುವ ನೀರು ಮನೆಮನೆಗೆ ಸರಬರಾಜು ಆಗುತ್ತಿದೆ. ಇದರಿಂದ 29 ಕುಟುಂಬಗಳಿಗೆ ಪ್ರಯೋಜನವಾಗಿದೆ.
ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೊಕ್ಕಾಡಿ ಭಾಗದ ಸುಮಾರು 19 ಮನೆಗಳಿಗೆ ಮತ್ತು ಅಚ್ಚಡ ಕ್ರಾಸ್ ಬಳಿಯ ಸುಮಾರು 10 ಮನೆಗಳಿಗೆ ಪೈಪು ಲೈನ್ ಮೂಲಕ ನೀರಿನ ಟ್ಯಾಂಕ್ ಅಳವಡಿಸಿ ಕುಡಿಯುವ ನೀರನ್ನು ಕೊಡಲಾಗುತ್ತಿದೆ.
ಬಾಕಿಯಾದ ಯೋಜನೆ:
ಚೊಕ್ಕಾಡಿ ಬಳಿ ಕಳೆದ 5 ವರ್ಷಗಳ ಹಿಂದೆಯೇ ಕುಡಿಯುವ ನೀರಿನ ಪೂರೈಕೆಗಾಗಿ ಅಂದಿನ ಜಿಲ್ಲಾ ಪಂಚಾಯತ್ ಆಡಳಿತಾವಧಿಯಲ್ಲಿ ಗೋಕುಲ್ ಕಂಪೌಂಡು ಬಳಿಯಲ್ಲಿ ಬೋರ್‌ವೆಲ್ ತೋಡಲಾಗಿತ್ತು. ಬೋರ್‌ವೆಲ್ ನೀರನ್ನು ಇತರೆಡೆಗಳಿಗೆ ಸರಬರಾಜು ಮಾಡಲು ಬಳಸುತ್ತಾರೆ ಎಂಬ ಬಗ್ಗೆ ಆ ಭಾಗದ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿದ್ದು, ಇದರಿಂದ ಕುಡಿಯುವ ನೀರಿನ ಯೋಜನೆಯು ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಈ ಭಾಗದ ಜನರ ಕುಡಿಯುವ ನೀರಿನ ಬೇಡಿಕೆಯು ಹೆಚ್ಚಾಗಿದ್ದು, ಆದ್ದರಿಂದ ಜನರನ್ನು ವಿಶ್ವಾಸಕ್ಕೆ ಪಡೆದು ಸಮಸ್ಯೆ ಪರಿಹಾರಕ್ಕೆ ಸ್ಥಳೀಯಾಡಳಿತ ಮುಂದಾಗಿದೆ.
ಅನಂತರದಲ್ಲಿ ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎನ್‌ಆರ್‌ಡಿ ಡಬ್ಲ್ಯೂಪಿ ಟಾಸ್ಕ್ ಫೋರ್ ಅಡಿ 2 ಲಕ್ಷ ರೂ. ಅನುದಾನ ಬಳಸಿಕೊಂಡು ಕೊಳವೆಬಾವಿ ಪಂಪು ಮತ್ತು ವಿದ್ಯುದೀಕರಣ ಮಾಡಿ ಪೈಪ್ ಲೈನ್ ಕಾಮಗಾರಿ ಮೂಲಕ ಚೊಕ್ಕಾಡಿ ಭಾಗದ ಜನತೆಗೆ ನೀರು ಪೂರೈಸಲಾಗಿದೆ. ಜತೆಗೆ ಕಟಪಾಡಿ ಗ್ರಾಮ ಪಂಚಾಯತ್‌ಮೂಲಕ 14ನೇ ಹಣಕಾಸು ಯೋಜನೆಯಡಿ 1 ಲಕ್ಷ ರೂ. ಅನುದಾನವನ್ನು ಬಳಸಿ ಪೈಪ್‌ಲೈನ್ ಮತ್ತು ನೀರಿನ ಟ್ಯಾಂಕ್‌ಗಳನ್ನು ಅಳವಡಿಸಿ ಸುಮಾರು 29 ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.