ಕರಾವಳಿ ತೀರದಲ್ಲಿ ಚಿಗುರೊಡೆದಿದೆ ಪರಿಸರ ರಕ್ಷಕ ಕಾಂಡ್ಲ ಕಾಡು
ಗುಂಡ್ಮಿ-ಪಾರಂಪಳ್ಳಿಯ 15ಹೆಕ್ಟೇರ್ ಪ್ರದೇಶದಲ್ಲಿ ಯಶಸ್ವಿ ಕೃಷಿ
Team Udayavani, Apr 27, 2019, 10:34 AM IST
••ರಾಜೇಶ ಗಾಣಿಗ ಅಚ್ಲಾಡಿ
ಕೋಟ, ಎ. 26: ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾಂಡ್ಲ ಕಾಡು ಇದೀಗ ನಶಿಸುತ್ತಿದೆ. ಇದರ ರಕ್ಷಣೆ ಮತ್ತು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸ್ಥಳೀಯರ ಮೂಲಕ ಕಾಂಡ್ಲ ವನಗಳ ನಿರ್ಮಾಣಕ್ಕೆ ಮುಂದಾಗಿದೆ. ವರ್ಷದ ಹಿಂದೆ ಗುಂಡ್ಮಿ, ಪಾರಂಪಳ್ಳಿ ಹೊಳೆಯ ಸುಮಾರು 15 ಹೆಕ್ಟೇರ್ ಪ್ರದೇಶದ ಹಿನ್ನೀರಿನಲ್ಲಿ ನಾಟಿ ಮಾಡಿದ ಕಾಂಡ್ಲ ಸಸಿಗಳಲ್ಲಿ ಶೇ.80ರಿಂದ ಶೇ.90ರಷ್ಟು ಬೆಳೆದು ನಿಂತಿದೆ.
4 ತಿಂಗಳು ನಾಟಿ:
ಅರಣ್ಯ ಇಲಾಖೆ ಸಹಕಾರದಲ್ಲಿ ಒಂದು ವರ್ಷದ ಹಿಂದೆ ಸಾಸ್ತಾನ ಸಮೀಪ ಕೋಡಿಕನ್ಯಾಣ ಸೇತುವೆಯಿಂದ ಉತ್ತರಕ್ಕೆ ಗುಂಡ್ಮಿ ಬಡಾಅಲಿತೋಟ ಮೂಲಕ ಪಾರಂಪಳ್ಳಿ ಸೇತುವೆ ತನಕ ಸ್ಥಳೀಯರು 4ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿ 15ಹೆಕ್ಟೇರ್ ಪ್ರದೇಶದ ಹೊಳೆಯಲ್ಲಿ ಕಾಂಡ್ಲ ಗಿಡಗಳನ್ನು ನಾಟಿ ಮಾಡಿದ್ದರು.
ಪರಿಸರ ಸಂರಕ್ಷಕ:
ಕಾಂಡ್ಲದಲ್ಲಿ ಸುಮಾರು 25ಕ್ಕೆ ಹೆಚ್ಚಿನ ಪ್ರಭೇದಗಳಿವೆ. ಇದರ ಬೇರುಗಳು ತೀರಪ್ರದೇಶದ ಮಣ್ಣನ್ನು ಬಿಗಿಯಾಗಿ ಹಿಡಿಯುವುದರಿಂದ ಸಮುದ್ರ ಹಾಗೂ ಭೂ ಕೊರೆತಕ್ಕೆ ತಡೆಯಾಗುತ್ತದೆ. ಮರಗಳು ತಡೆಗೋಡೆಯಂತೆ ಬೆಳೆದು ನಿಲ್ಲುವುದರಿಂದ ಬಿರುಗಾಳಿ, ಚಂಡಮಾರುತ, ಪ್ರವಾಹ, ಕಡಲ್ಕೊರೆತ, ಸುನಾಮಿಯಂಥ ಪ್ರಕೃತಿ ವಿಕೋಪದ ಜತೆಗೆ ಸಮುದ್ರದ ತೀರದಲ್ಲಿ ಉಂಟಾಗುವ ವಿನಾಶವನ್ನು ತಡೆಯುತ್ತದೆ. ಇದರ ದಪ್ಪ ಹಸುರು ಎಲೆಗಳು ಅಧಿಕ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ನದಿಗಳಿಂದ ಬರುವ ಸಾರಾಂಶವನ್ನು ಹಿಡಿದಿಟ್ಟು ಆ ಪ್ರದೇಶವನ್ನು ಸಮೃದ್ಧಗೊಳಿಸಲು ಇವು ಸಹಕಾರಿ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳಾದ ಮೀನು, ಏಡಿ, ಕಪ್ಪೆ ಇತ್ಯಾದಿಗಳು ಮರಿಮೊಟ್ಟೆಗಳ ಸಂತಾನಾಭಿವೃದ್ಧಿ ಆಹಾರಕ್ಕಾಗಿ ಇದನ್ನು ಆಶ್ರಯಿಸುತ್ತವೆ.
ಕಾಂಡ್ಲ ವನ ನಿರ್ಮಾಣ ಹೇಗೆ ?
ಕಾಂಡ್ಲದ ಕಾಯಿ, ಕೋಡುಗಳೇ ಈ ಸಸ್ಯದ ಪರಂಪರೆಯ ಕೊಂಡಿ. ಮರದಿಂದ ಬೇರ್ಪಟ್ಟು, ನೀರಿನ ತಳದ ಕೆಸರಿಗೆ ಅಡಿಮುಖವಾಗಿ ಇಳಿಯುವ ಕೋಡುಗಳು, ಗಿಡಗಳಾಗಿ ರೂಪ ಪಡೆಯುತ್ತವೆ. ಇಂತಹ ಲಕ್ಷಾಂತರ ಕೋಡುಗಳನ್ನು ಸಂಗ್ರಹಿಸಿ ನಾಟಿ ಮಾಡಿ ಕಾಂಡ್ಲಾ ವನ ನಿರ್ಮಿಸಲಾಗುತ್ತದೆ.
ಕಾಂಡ್ಲ ವನ ರಕ್ಷಣೆಯಲ್ಲಿ ಕೈಜೋಡಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.