ವೋಟರ್‌ ಸ್ಲಿಪ್‌ ಗೊಂದಲ: ಅಲೆದಾಡಿದ ಮತದಾರ

ಜಿಲ್ಲಾಧಿಕಾರಿಗಳ ಶೇ. 100 ಮತದಾನ ಪ್ರಯತ್ನಕ್ಕೆ ಹಿನ್ನಡೆ

Team Udayavani, Apr 27, 2019, 3:10 PM IST

27-April-23

ಸಾಗರ: ಮತದಾನ ಮುಗಿದು ನಾಲ್ಕು ಮೂರು ದಿನಗಳಾದರೂ ಮತದಾರರ ಪಟ್ಟಿಯಲ್ಲಿ ಉಂಟಾದ ಗೊಂದಲದ ಸದ್ದು ನಿಂತಿಲ್ಲ. ಮತದಾನದ ದಿನ ಮತದಾರರ ಪಟ್ಟಿಯಲ್ಲಿನ ವ್ಯತ್ಯಯದಿಂದ ಅಲ್ಲಲ್ಲಿ ಮತದಾರರಿಗೆ ತೊಂದರೆಯಾದ ಸುದ್ದಿ ಕೇಳುತ್ತಲೇ ಇದೆ. ಜಿಲ್ಲೆಯಲ್ಲಿ ಶೇ. 100ರ ಮತದಾನ ಆಗಬೇಕೆಂದು ಬೃಹತ್‌ ಪ್ರಮಾಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರ ಪ್ರಯತ್ನಗಳಿಗೆ ಮೆಚ್ಚುಗೆ ಸಿಗುತ್ತಿರುವ ಕಾಲದಲ್ಲಿಯೇ ಮತದಾರರ ಚೀಟಿ ಹಾಗೂ ಗುರುತಿನ ದಾಖಲೆ ಕುರಿತಂತೆ ಗೊಂದಲ ಉಂಟಾಗಿ ಮತದಾನಕ್ಕೆ ತೊಂದರೆಯಾದ ಘಟನೆಗಳು ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬಯಲಿಗೆ ಬರುತ್ತಿದೆ.

ಸಾಗರ ವಿಧಾನಸಭಾ ಕ್ಷೇತ್ರದ ಸೊರಬ ರಸ್ತೆಯ ಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ ನಂಬರ್‌ 50ರಲ್ಲಿನ ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಹಾಗೂ ಆಯೋಗ ನೀಡಿದ ಎಪಿಕ್‌ ಕಾರ್ಡ್‌ಗಳನ್ನು ಮತದಾರ ಸಂದರ್ಭದಲ್ಲೂ ಎಪಿಕ್‌ ಕಾರ್ಡಿನಲ್ಲಿನ ಸಂಖ್ಯೆ ವ್ಯತ್ಯಾಸವಿದೆ ಎಂದು ಕಾರಣವೊಡ್ಡಿ ಮತದಾನಕ್ಕೆ ನಿರಾಕರಿಸಿದ ಘಟನೆ ನಡೆದಿತ್ತು. ಬೂತ್‌ ನಿರ್ವಾಹಕ ಅಧಿಕಾರಿಗಳು ಗುರುತಿನ ಚೀಟಿಯಲ್ಲಿನ ಮತದಾರರ ಎಪಿಕ್‌ ಸಂಖ್ಯೆ ಹಾಗೂ ಮತದಾರರ ಪಟ್ಟಿಯಲ್ಲಿದ್ದ ಸಂಖ್ಯೆ ವ್ಯತ್ಯಾಸವಿರುವ ಕಾರಣ ಗುರುತಿನ ದಾಖಲೆಯಾಗಿ ಪರಿಗಣಿಸಲಾಗದು. ಚುನಾವಣಾ ಆಯೋಗ ಸೂಚಿಸಿದ ಬೇರೆ ದಾಖಲೆ ತನ್ನಿ ಎಂದು ಮತದಾರರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದಿದೆ. ಹಲವರು ಮತದಾನ ಮಾಡದೆ ಮರಳಿದವರು ಮತ್ತೆ ಮತದಾನ ಕೇಂದ್ರಕ್ಕೆ ಬೇರೆ ದಾಖಲೆ ತೆಗೆದುಕೊಂಡು ಬಂದು ಮತದಾನ ಮಾಡುವ ಗೋಜಿಗೇ ಹೋಗಿಲ್ಲ.

ಈ ಬೂತ್‌ನಲ್ಲಿ ಒಟ್ಟು 904 ಮತಗಳಿದ್ದು, ಅದರಲ್ಲಿ 626 ಮತಗಳಷ್ಟೇ ಚಲಾವಣೆಯಾಗಿವೆ. ಕಾನೂನಿನ ಅಂಶಗಳಲ್ಲಿ ಚುನಾವಣಾ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಗಳಿಂದಾಗಿಯೇ ಮತದಾರರು ಕಿರುಕುಳಕ್ಕೊಳಗಾಗಿದ್ದು, ಶೇ. 69ರಷ್ಟೇ ಮತದಾನವಾಗಲು ಕಾರಣವಾಯಿತು ಎಂದು ಅಲ್ಲಿನ ಮತದಾರರು ದೂರಿದ್ದಾರೆ. ಈ ರೀತಿಯ ಗೊಂದಲ ತಾಲೂಕಿನ ವಿವಿಧ ಭಾಗಗಳಲ್ಲಿಯೂ ನಡೆದಿವೆ. ಚುನಾವಣಾ ಅಧಿಕಾರಿಗಳು ಎಪಿಕ್‌ ಕಾರ್ಡ್‌ ಹಳೆಯದು ಎಂಬ ಕಾರಣಕ್ಕೆ ಬೇರೆ ದಾಖಲೆಗೆ ಒತ್ತಾಯಿಸಿದ ಘಟನೆಗಳು ಸಂಭವಿಸಿವೆ. ಹಲವೆಡೆ ಬೂತ್‌ನ ಮುಖ್ಯ ನಿರ್ವಾಹಕ ಅಧಿಕಾರಿ ಅವರ ಸೂಚನೆ ಮೇರೆಗೆ ಹಳೆಯ ಚುನಾವಣಾ ಕಾರ್ಡ್‌ಗಳನ್ನು ಒಪ್ಪಿ ಮತದಾನಕ್ಕೆ ಅವಕಾಶ ಕೊಡಲಾಗಿದೆ.

ಚುನಾವಣಾ ಆಯೋಗ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ಮತದಾನಕ್ಕಿಂತ 24 ಗಂಟೆ ಮೊದಲೇ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ. ಅದಕ್ಕಾಗಿಯೇ ಬ್ಲಾಕ್‌ ಲೆವೆಲ್ ಅಧಿಕಾರಿ ಬಿಎಲ್ಒ ಅವರನ್ನು ನೇಮಿಸಿದೆ. ಬಿಎಲ್ಒಗಳ ಕಾರ್ಯದ ಬಗ್ಗೆ ಆಕ್ಷೇಪಗಳಿವೆ. ಅವರು ಈ ವೋಟರ್‌ ಸ್ಲಿಪ್‌ಗ್ಳನ್ನು ಕೂಡ ಸಮರ್ಪಕವಾಗಿ ವಿತರಿಸಿಲ್ಲ ಎಂದು ಹೇಳಲಾಗಿದೆ. ಕಳೆದ ವರ್ಷಗಳಲ್ಲಿ ಈ ಮತದಾರರ ಚೀಟಿಯನ್ನು ಮಾತ್ರ ತೆಗೆದುಕೊಂಡು ಹೋದರೂ ಮತದಾನಕ್ಕೆ ಅವಕಾಶ ಕೊಡಬಹುದು ಎಂಬ ಮಾತಿದ್ದರೆ, ಈ ಬಾರಿ ಮತದಾನಕ್ಕೆ ಇದರ ಜೊತೆ ಇನ್ನೊಂದು ದಾಖಲೆ ಕಡ್ಡಾಯ ಎನ್ನಲಾಗಿತ್ತು. ಅದೇ ಮತದಾರರ ಚೀಟಿಯಲ್ಲಿ ಮತಗಟ್ಟೆಯಲ್ಲಿ ಮತದಾರರನ್ನು ಗುರುತಿಸುವ ಕಾರಣಕ್ಕಾಗಿ ಈ ಚೀಟಿಯನ್ನು ಒಪ್ಪಿಕೊಳ್ಳುವುದಿಲ್ಲ. ಮತದಾರರ ಎಪಿಕ್‌ ಕಾರ್ಡ್‌ ಅಥವಾ ಇತರ 11 ದಾಖಲೆಗಳನ್ನು ಮತದಾನದ ಸಂದರ್ಭದಲ್ಲಿ ಹಾಜರುಪಡಿಸಬೇಕು ಎಂದು ಮತದಾರರ ಗುರುತಿನ ಚೀಟಿಯಲ್ಲಿಯೇ ಸೂಚಿಸಲಾಗಿತ್ತು. ಸಿದ್ದೇಶ್ವರ ಶಾಲೆಯ ಬೂತ್‌ ನಂ. 50ರ ನಿರಾಕರಣೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಅಲ್ಲಿನ ಮತದಾರ ಬಿ.ಎಸ್‌. ಅಶೋಕ್‌, ನಾನು ವೋಟರ್‌ ಸ್ಲಿಪ್‌ನ್ನು ತೆಗೆದುಕೊಂಡು ಹೋಗಿದ್ದೇನೆ. ಈ ಸಂದರ್ಭದಲ್ಲಿ ಈ ಹಿಂದೆ ನನಗೆ ನೀಡಲಾದ ಎಪಿಕ್‌ ಕಾರ್ಡ್‌ ತೆಗೆದುಕೊಂಡು ಹೋಗಿದ್ದೇನೆ. ನಾನು ಹೆಸರು, ವಿಳಾಸ ಬದಲಿಸಿ ಹೊಸ ಎಪಿಕ್‌ ಕಾರ್ಡ್‌ ಪಡೆದಿಲ್ಲ. ಹೊಸದಾಗಿ ಬಂದಿದ್ದರೆ ಆ ಕಾರ್ಡ್‌ನ್ನು ಚುನಾವಣಾ ಆಯೋಗ ಬಿಎಲ್ಒ ಮೂಲಕ ತಲುಪಿಸಬೇಕಿತ್ತು. ಮತದಾರರ ಸ್ಲಿಪ್‌ ಹೊಂದಿದವರು ತಮ್ಮ ಗುರುತಿಗೆ ಹಳೆಯ ಎಪಿಕ್‌ ಕಾರ್ಡ್‌ ನೀಡಿದರೂ ಚುನಾವಣಾ ಅಧಿಕಾರಿಗಳು ಅದನ್ನು ನಿರಾಕರಿಸಲು ಕಾರಣಗಳಿಲ್ಲ ಎಂದು ತಿಳಿಸುತ್ತಾರೆ. ತಾಲೂಕಿನ ಬಹುಸಂಖ್ಯಾತರಲ್ಲಿ 1995ರಲ್ಲಿ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿಗಳೇ ಇವೆ. ಇವುಗಳಲ್ಲಿರುವ ಎಪಿಕ್‌ ಸಂಖ್ಯೆಗೂ ಈಗ ಮತದಾರರ ಪಟ್ಟಿಯಲ್ಲಿರುವ ಎಪಿಕ್‌ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಈ ಎಲ್ಲ ಹಳೆಯ ಮತದಾರರಿಗೆ ವ್ಯವಸ್ಥಿತವಾಗಿ ಹೊಸ ಎಪಿಕ್‌ ಕಾರ್ಡ್‌ ವಿತರಿಸುವ ಕೆಲಸವನ್ನು ಮತ್ತೂಂದು ಚುನಾವಣೆ ಬರುವುದರೊಳಗೆ ಚುನಾವಣಾ ಆಯೋಗ ಪೂರೈಸಬೇಕು. ಇಲ್ಲದಿದ್ದರೆ ಮತದಾನದ ಸಮಯದಲ್ಲಿ ಅಧಿಕಾರಿಗಳ ನಿರಾಕರಣೆ ಸಮಸ್ಯೆ ಒಡ್ಡಬಹುದು ಎಂದು ಅಣಲೆಕೊಪ್ಪದ ನಿವಾಸಿ ರಾಮಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ವೋಟರ್‌ ಸ್ಲಿಪ್‌ ಜೊತೆ ಗುರುತಿಸುವ ಕಾರಣಕ್ಕೆ ಹಳೆಯ ಚುನಾವಣಾ ಗುರುತಿನ ಚೀಟಿಯನ್ನು ನೀಡಿದರೂ ಮತದಾನ ಕೇಂದ್ರದ ಅಧಿಕಾರಿಗಳು ನಿರಾಕರಣೆ ಮಾಡಬಾರದು. ಈ ರೀತಿಯ ಸನ್ನಿವೇಶಗಳನ್ನು ಪರಿಗಣಿಸಿ ಆದಷ್ಟು ಕ್ಷಿಪ್ರವಾಗಿ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆ ಅಥವಾ ಸಾಗರದಲ್ಲಿಯೇ ಮುಂದೆ ನಡೆಯಲಿರುವ ನಗರಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತೆ ಗೊಂದಲಗಳಾಗಿ ಮತದಾರ ಕಿರುಕುಳಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಟಾಪ್ ನ್ಯೂಸ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.