![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 27, 2019, 3:52 PM IST
ಬೆಂಗಳೂರು: ನಟ ದರ್ಶನ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದು, ರೈತರಿಗೆ ನ್ಯಾಯವಾದ ಬೆಲೆ ನೀಡಿದರೆ ಸಾಕು ಸಾಲ ಮನ್ನಾ ಮಾಡಬೇಕೆಂದಿಲ್ಲ ಎಂದಿದ್ದಾರೆ.
ಶನಿವಾರ ಬಿಐಟಿ ಕಾಲೇಜಿನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ದರ್ಶನ್ , ನಾವು ಇಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳಲು ಗಡಿಯಲ್ಲಿರುವ ಸೈನಿಕರು ಕಾರಣ ಎಂದರು.
ರೈತರು ದೇಶದ ಬೆನ್ನೆಲುಬು. ತುಂಬಾ ಕಡೆ ಹೇಳಬೇಕೆಂದಿದ್ದೆ, ಸಾಲ ಮನ್ನಾ , ಸಾಲಾಮನ್ನಾ ಎಂದು ಹೇಳುತ್ತಾರೆ. ರೈತರ ಸಾಲಮನ್ನಾ ಮಾಡಬೇಕೆಂದಿಲ್ಲ. ಅವರಿಗೆ ನ್ಯಾಯವಾದ ಬೆಲೆ ನೀಡಿದರೆ ಸಾಕು. ಅವರೆ ಸಾಲ ಕಟ್ಟುತ್ತಾರೆ ಎಂದರು. ಈ ವೇಳೆ ವಿದ್ಯಾರ್ಥಿಗಳು ಹೋ..ಎಂದು ಜೈ ಕಾರ ಹಾಕಿದರು.
You seem to have an Ad Blocker on.
To continue reading, please turn it off or whitelist Udayavani.