ಕುಡಿಯುವ ನೀರಿನ ನಿರ್ವಹಣೆಯೇ ಸವಾಲು
ಪಡುಪಣಂಬೂರು ಗ್ರಾ. ಪಂ.
Team Udayavani, Apr 27, 2019, 5:54 PM IST
ಪಡುಪಣಂಬೂರು, ಎ. 26: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಪಣಂಬೂರು ಗ್ರಾಮದಲ್ಲಿ ಕುಡಿಯುವ ನೀರಿನ ನಿರ್ವಹಣೆಯೇ ಸವಾಲಾಗಿದ್ದು, ನೀರಿನ ಸಂಪರ್ಕ ಪಡೆದವನ್ನು ಸುಧಾರಿಸಲು ಪಂಚಾಯತ್‌ನ ನೀರಿನ ಸಮಿತಿ ಹರಸಾಹಸವನ್ನೇ ಮಾಡುತ್ತಿದೆ.
ಪಡುಪಣಂಬೂರು ಕುಡಿಯುವ ನೀರು ನಿರ್ವಹಣೆ ಸಮಿತಿಯಲ್ಲಿ 204 ಗ್ರಾಹಕರು ಸಂಪರ್ಕ ಪಡೆದಿದ್ದಾರೆ. ಕಲ್ಲಾಪು ಹಾಗೂ ಪಡುಪಣಂಬೂರು ಪ್ರದೇಶದಲ್ಲಿ ಒಟ್ಟು ಮೂರು ಕೊಳವೆ ಬಾವಿಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಹೊಂದಾಣಿಕೆಯಲ್ಲಿ ನೀರು ನೀಡುತ್ತಿರುವುದರಿಂದ ಗ್ರಾಹಕರ ಒತ್ತಡ ಅಷ್ಟೇನು ಇಲ್ಲವಾಗಿದೆ. ಇನ್ನು ಮೇ, ಜೂನ್ ತಿಂಗಳಿನಲ್ಲಿ ನೀರಿನ ಸಾಮರ್ಥ್ಯ ಕ್ಷಿಣಿಸುವಾಗ ಸಮಸ್ಯೆ ಇನ್ನಷ್ಟು ಕಾಡುವ ಸಾಧ್ಯತೆ ಇದ್ದರೂ ಸಹ ಸಮಿತಿ ಹಾಗೂ ಪಂಚಾಯತ್ ಜವಾಬ್ದಾರಿಯುತವಾಗಿ ನಿರ್ವಹಿಸಲಿದೆ ಎನ್ನುವ ವಿಶ್ವಾಸ ಗ್ರಾಮಸ್ಥರದ್ದು.
ಆಮೆಗತಿಯ ಕಾಮಗಾರಿ:
ವರ್ಷದ ಹಿಂದೆ ಹೆದ್ದಾರಿಗಾಗಿ ಎರಡು ಉಪಯುಕ್ತ ಟ್ಯಾಂಕ್‌ಗಳನ್ನೇ ಕೆಡವಿದ್ದರಿಂದ ಕಳೆದ ಒಂದು ವರ್ಷದಿಂದ ನೀರನ್ನು ನೇರವಾಗಿ ಕೊಳವೆ ಪಂಪ್‌ನಿಂದಲೇ ನಿರ್ವಹಿಸಲಾಗುತ್ತಿದೆ. ಎಂಆರ್‌ಪಿಎಲ್ನ ನೆರವಿನಿಂದ ಟ್ಯಾಂಕ್ ನಿರ್ಮಾಣಗೊಳ್ಳುತ್ತಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಲ್ಲಾಪು ಪ್ರದೇಶದಲ್ಲಿರುವ ಒಂದು ಕೊಳವೆ ಬಾವಿಯಲ್ಲಿ ಈಗಾಗಲೇ ಉಪ್ಪಿನ ಅಂಶ ಕಂಡು ಬಂದಿದ್ದು, ಇಲ್ಲಿಗೆ ನೇರವಾಗಿ ಪಡುಪಣಂಬೂರು ಪ್ರದೇಶದ ಕೊಳವೆ ಬಾವಿಯಿಂದಲೇ ಸಂಪರ್ಕ ನೀಡಲಾಗಿದೆ.
ಪಡುಪಣಂಬೂರು ಪ್ರದೇಶದಲ್ಲಿನ ಬಾಂದ ಕೆರೆ, ಶಾಲೆ ಕೆರೆ, ದಡ್ಡಿ ಕೆರೆಗಳಿದ್ದು ಇದನ್ನು ಅಭಿವೃದ್ಧಿ ಪಡಿಸಿದಲ್ಲಿ ನೀರಿನ ಒಳ ಹರಿವು ಹೆಚ್ಚಾಗಬಹುದು. ಈ ಬಗ್ಗೆ ಪಂಚಾಯತ್‌ನ ಆಡಳಿತವು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಗ್ರಾಮಸ್ಥರಿಗೆ ಮಳೆ ಕೊಯ್ಲು ಬಗ್ಗೆ ಪಂಚಾಯತ್ ಇನ್ನಷ್ಟು ಹೆಚ್ಚು ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದೆ.
ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯ ಬಗ್ಗೆ ವರದಿ ಮಾಡಿ ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ‘ಉದಯವಾಣಿ-ಸುದಿನ’ ಮುಂದಾಗಿದ್ದು ಇದಕ್ಕೆ ಅನುಗುಣವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ನೀರಿನ ಬವಣೆಗಳನ್ನು ತಿಳಿಸುವ ಒಂದು ಪ್ರಯತ್ನ.
•ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.