ಸಂಧಿಕಾಲ: ದಿವ್ಯ ಅನುಪಾತ


Team Udayavani, Apr 28, 2019, 6:00 AM IST

5

ಒಂದು ವಸ್ತುವನ್ನು ನೋಡಿದಾಗ “ಚಂದ’ ಎಂದು ಅನಿಸಿ ಆಕರ್ಷಿಸಿ ಬಿಟ್ಟರೆ ಅದರಿಂದ ಕಣ್ಣು ತೆಗೆಯುವುದು ಸುಲಭವಲ್ಲ!’ ಈ ವಾಕ್ಯವನ್ನು ಓದಿದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಚಂದ, ಆಕರ್ಷಣೆಗೆ ಸಂಬಂಧಿಸಿದ ಸಾವಿರಾರು ವಿಷಯಗಳು ಬಂದಿರಬಹುದು, ಬರಲಿ ಸ್ವಾಭಾವಿಕವೇ! ಹಾಗೆಯೇ ಈ ವಾಕ್ಯವನ್ನೂ ಕೇಳಿರುತ್ತೀರಿ. “ಚಂದವೇನಿದ್ದರೂ ನೋಡುವವನ ಕಣ್ಣಲ್ಲಿ ಇದೆ’ ಎಂದು. ವೈಯಕ್ತಿಕವಾಗಿ ಈ ವಾಕ್ಯವನ್ನು ಕೇಳಿ ನಾನು ಸುಸ್ತಾಗಿದ್ದೇನೆ! ಹಾಗೆಂದು ಇದು ಸರ್ವಥಾ ತಪ್ಪೆಂದು ನಾನು ಅಲ್ಲಗಳೆಯುತ್ತಿಲ್ಲ. ನೀವೂ ಗಮನಿಸಿರಬೇಕು. ಯಾರಾದರೂ ಈ ವಾಕ್ಯವನ್ನು ಉಚ್ಚರಿಸಿದ ನಂತರ ಅದೇ ವಿಷಯದಲ್ಲಿ ಮಾತನ್ನು ಮುಂದುವರಿಸಿದ್ದನ್ನು ಕಂಡಿದ್ದೀರಾ? ಮುಂದುವರಿಸುವುದು ಕಷ್ಟವೂ ಕೂಡಾ!

ಇರಲಿ, ಈ ಪ್ರಸ್ತಾವನೆಯ ಉದ್ದೇಶ ವ್ಯಕ್ತಿತಾರತಮ್ಯ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಆಕರ್ಷಣೆಯದಲ್ಲ. ಇದು ಆಕಾರಕ್ಕೆ (ಫಾರ್ಮ್) ಸಂಬಂಧಪಟ್ಟಿದ್ದು. ಪ್ರಕೃತಿಯಲ್ಲಿ ಯಾವ ಆಕಾರಕ್ಕೆ ಹೆಚ್ಚು ಆಕರ್ಷಣೆ ಇದೆ, ಯಾವ ಆಕಾರ ಕಲಾತ್ಮಕವಾಗಿ (ಸೌಂದರ್ಯದ ಕಲ್ಪನೆಯ ಅಡಿಯಲ್ಲಿ)ಆಕರ್ಷಿಸಲ್ಪಡಬಹುದು ಮತ್ತು ಈ ಆಕಾರವು ಪ್ರಾಡಕ್ಟಿನ ವಿನ್ಯಾಸದಲ್ಲಿ ಹೇಗೆ ಬಳಕೆಯಾಗುತ್ತದೆ ಎನ್ನುವುದು. ಚಂದವೆನ್ನುವುದು ನೋಡುವವನ ಕಣ್ಣಲ್ಲಿದೆ ಎಂಬುದನ್ನು ಅನುಸರಿಸಿ, ಪ್ರತಿ ವ್ಯಕ್ತಿಗೆ ಅನುಗುಣವಾಗಿ, ದೇಶದಲ್ಲಿ ಜನಸಂಖ್ಯೆ ಎಷ್ಟಿದೆಯೋ ಅಷ್ಟು ಬಗೆಯ ಫ್ಯಾನು, ಫ್ರಿಜ್‌, ಮಿಕ್ಸರ್‌ಗಳನ್ನು (ಕೇವಲ ಆಕಾರಕ್ಕೆ ಸಂಬಂಧಪಟ್ಟು) ತಯಾರು ಮಾಡಲಾದೀತೆ? ಅಂದರೆ ಇದು ಪ್ರಾಯೋಗಿಕವಾಗಿ ಅಸಾಧ್ಯ, ಇದರ ಜೊತೆ ನಿಮ್ಮ ಮುಂದೆ ಇನ್ನೊಂದು ವಾದವನ್ನು ಮಂಡಿಸುತ್ತೇನೆ. ಅದು ಏನೆಂದರೆ, ಇಂದಿನ ಮಾರುಕಟ್ಟೆಯನ್ನು ಇಟ್ಟುಕೊಂಡು ವಿಚಾರ ಮಾಡಿದರೆ ಬಹಳಷ್ಟು ಜನರಿಗೆ ಅಥವಾ ಜಗತ್ತಿನ ಒಂದು ದೊಡ್ಡ ಗುಂಪಿಗೆ, ವಸ್ತುವಿನ ಯಾವುದೋ ಒಂದು ನಿರ್ದಿಷ್ಟ ಆಕಾರದ ಮೇಲೆ ಹೆಚ್ಚಿನ ಆಕರ್ಷಣೆ ಇದೆ ಎಂದು ಅಂದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಐಫ‚ೊàನ್‌, ಆಡಿ, ಮರ್ಸಿಡಿಸ್‌ ಕಾರ್‌, ಜಗತ್ತಿನ ಅದ್ಭುತ ತಾಜ್‌ಮಹಲ್ಲಿನ ಆಕಾರ (ಫ‚ಾರ್ಮ್) ಅತ್ಯಂತ ದೊಡ್ಡ ಗುಂಪಿಗೆ ಇಷ್ಟವಾಗುತ್ತದೆ. ಮೇಲಿನ ಮಾತನ್ನು ಮುಂದುವರಿಸುವುದಾದರೆ ವ್ಯಕ್ತಿಯ ಯಾವುದೋ ಒಂದು ನಿರ್ದಿಷ್ಟ ಆಕಾರವು ಕೂಡ ಬಹಳಷ್ಟು ಜನರನ್ನು ಆಕರ್ಷಿಸುತ್ತದೆ ಎಂದಾಯಿತು. (ಗಣಿತದ ನಾರ್ಮಲೈಸಿಂಗ್‌ ಕರ್ವ್‌ ಅಥವಾ ಬೆಲ್‌ಕರ್ವ್‌ನ್ನು ಈ ವಿಷಯಕ್ಕೆ ಸಮೀಕರಿಸಿದರೂ ಉತ್ತರ ಅದೇ ಬರುತ್ತದೆ). ಹಾಗಾದರೆ ಯಾವ ಅನುಪಾತದಿಂದ ಒಂದು ಆಕಾರವು ಜನರನ್ನು ಹೆಚ್ಚು ಆಕರ್ಷಿಸುತ್ತದೆ?

ಗೋಲ್ಡನ್‌ ರೇಶಿಯೊ
ನಾನು ಎರಡು ಮುಖ್ಯ ವಿಚಾರಗಳನ್ನು ಚರ್ಚಿಸಬೇಕೆಂದಿದ್ದೇನೆ. ಮೊದಲನೆಯದು, ನಾವು ನಮ್ಮ ಫೋಟೊ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋದಾಗ, ಫೊಟೊ ಕ್ಲಿಕ್ಕಿಸಿದ ನಂತರ ಆತ “ಯಾವ ಸೈಜು’ ಎಂದು ಕೇಳುತ್ತಿರುವಂತೇ “5/8′ ಎಂದು ಹೇಳಿರುತ್ತೇವೆ. ನಮ್ಮ ಮುಖದಲ್ಲಿ ನಮ್ಮ ಕಣ್ಣಿನ ಸ್ಥಾನ ಎಲ್ಲಿದೆ?, ಐಫೋನ್‌ ಸ್ಕ್ರೀನಿನ ಅಳತೆ ಏನು? ಟಿವಿಯಲ್ಲಿ ಸಂದರ್ಶನ/ನ್ಯೂಸ್‌ಓದುವಾಗ ಅವರು ಯಾಕೆ ಟಿವಿ ಫ್ರೆಮಿನ ಮಧ್ಯ ಕೂತುಕೊಳ್ಳದೇ ಸ್ವಲ್ಪ ಬಲಕ್ಕೋ ಎಡಕ್ಕೋ ಕುಳಿತುಕೊಳ್ಳುತ್ತಾರೆ? ಕಾರಿನ ಒಟ್ಟೂ ಎತ್ತರದಲ್ಲಿ ಬಾಡಿ ಮತ್ತು ಗ್ಲಾಸಿನ ಅನುಪಾತವೇನು? ಬಸವನ ಹುಳದ ಶಂಖದ ಆಕಾರ? ಈ ಉದಾಹರಣೆಗಳಲ್ಲಿ ಕೆಲವನ್ನಾದರೂ ನೀವು ಗಮನಿಸಿರಬಹುದು.

ವಿನ್ಯಾಸದ ಸಾರ್ವತ್ರಿಕ ಸೂತ್ರದಡಿಯಲ್ಲಿ ವಾಸ್ತುಶಾಸ್ತ್ರ, ಸೌಂದರ್ಯ ಶಾಸ್ತ್ರಕ್ಕೆ ಸಂಬಂಧಿಸಿ ಗೋಲ್ಡನ್‌ ರೇಶಿಯೊ ಎನ್ನುವ ವಿಷಯವೊಂದಿದೆ. ಇದು ಎರಡು ಅಳತೆಯ ಅನುಪಾತ. ಉದಾಹರಣೆಗೆ ಒಂದು ಆಯತವನ್ನು ತೆಗೆದುಕೊಳ್ಳಿ. ಅದಕ್ಕೆ ಗೋಲ್ಡನ್‌ ರೇಶಿಯೊವನ್ನು ಸಮೀಕರಿಸಿದರೆ/ಅನ್ವಯಿಸಿದರೆ ಆ ಆಯತದ ಅಗಲ (ಬಿ)10 ಸೆಂ.ಮೀ. ಆದರೆ ಉದ್ದ (ಎ) 16.18 ಸೆಂಟಿ ಮೀಟರ್‌ ಆಗುತ್ತದೆ. (ಫಿ = (ಎ+ಬಿ)/ಎ = ಎ/ಬಿ). ಅಥವಾ ಒಂದು ಸರಳರೇಖೆಯನ್ನು ತೆಗೆದುಕೊಂಡು ಅದರಲ್ಲಿ ಎರಡು ಭಾಗವನ್ನು ಗುರುತಿಸಿದರೆ ದೊಡ್ಡ ಭಾಗ 10 ಸೆಂ. ಮೀ. ಆದರೆ, ಚಿಕ್ಕ ಭಾಗ 6.18 ಸೆಂಟಿ ಮೀಟರ್‌ ಆಗುತ್ತದೆ (1:1.6128). ಹಾಗೆಯೇ ಇನ್ನೊಂದು ಸಂಖ್ಯಾ ಸರಣಿಯನ್ನು ಗಮನಿಸಬೇಕು. 0+1+1+2+3+5+8+13+21+… (ಫಿ‚ಬೊನಸಿ ಸೀಕ್ವೆನ್ಸ್‌) ಸಂಖ್ಯೆಯ ಪ್ರಗತಿ ಅಥವಾ ಪ್ರೊಗ್ರೆಶನ್ನು. ಇಲ್ಲಿ ಯಾವುದೇ ಅಕ್ಕಪಕ್ಕದ ಎರಡು ಸಂಖ್ಯೆಯನ್ನು ಕೂಡಿಸಿದರೆ ಮೂರನೇ ಸಂಖ್ಯೆ ಬರುತ್ತದೆ. ಈ ಸಂಖ್ಯೆಯ ಪ್ರೊಗ್ರೆಶನ್ನೇ “ಗೋಲ್ಡನ್‌ ರೇಶಿಯೊ’ ಅಥವಾ ಅದರ ಅನುಪಾತವನ್ನು ಹೇಳುತ್ತದೆ. ಈ ಪ್ರೊಗ್ರೇಶನ್ನನ್ನು ಒಳಗೊಂಡ ಆಕೃತಿಯು ಕಣ್ಣಿಗೆ ಕಲಾತ್ಮಕವಾಗಿ ಆಕರ್ಷಿಸುವುದು ಸುಖಕೊಡುವುದು ಎನ್ನುವುದು ವಾದ. (ಈ ಅನುಪಾತವನ್ನು ತ್ರಿಭುಜ, ಸುರುಳಿ, ಪಂಚಭುಜಗಳಲ್ಲೂ ಕಾಣಬಹುದು). ಹೀಗೆ ಕಲಾತ್ಮಕವಾಗಿ ಸುಖಕೊಡುವ ಅಥವಾ ನಮ್ಮನ್ನು ಆಕರ್ಷಿಸುವ ಈ ಅನುಪಾತ ಅಥವಾ ಪ್ರಮಾಣ ನಮ್ಮ ಪ್ರಕೃತಿಯಲ್ಲಿ, ಕಲೆಯಲ್ಲಿ, ಗಣಿತದಲ್ಲಿ, ಮನುಷ್ಯನ ದೇಹ, ಅಂಗ ರಚನೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಅಂತೆಯೇ ಮಾನವ ನಿರ್ಮಿತ ವಸ್ತುಗಳಲ್ಲಿ ಕೂಡ. ನಾವು ಮೇಲಷ್ಟೇ ಉದಾಹರಿಸಿದ ಕೆಲವು ವಸ್ತುಗಳನ್ನು ನೋಡೋಣ. ಐಫೋನ್‌ಅಥವಾ ಲ್ಯಾಪ್‌ಟಾಪಿನ ಸ್ಕ್ರೀನು ಆಯತಾಕಾರವಿದ್ದು ಆ ಆಯತವು 1. 618ನ ಪ್ರಮಾಣದಲ್ಲೇ ಇದೆ. ನಾವು ತೆಗೆಸುವ ಫೊಟೊ, ಟಿವಿಯಲ್ಲಿ ಕುಳಿತ ಉದ್ಘೋಷಕಿಯೂ ಟಿವಿ ಎನ್ನುವ ಒಟ್ಟೂ ಉದ್ದದ ಗೋಲ್ಡನ್‌ ರೇಶಿಯೋದ ಬಿಂದುವಿನಲ್ಲೇ ಅಂದರೆ ಅರ್ಧಕ್ಕಿಂತ ಸ್ವಲ್ಪ ಆಚೆಗೆ ಕುಳಿತುಕೊಳ್ಳುತ್ತಾಳೆ. ಇವೆಲ್ಲವೂ ನಾವೇ ಮಾಡಿದ್ದು. ಆದರೆ, ಪ್ರಕೃತಿಯಲ್ಲಿನ ಐದು ಪಕಳೆಯ ಹೂವು, ನಮ್ಮ ಮುಖ, ಬಸವನ ಹುಳದ ಶಂಖ ಅಂತೆಯೇ ಇನ್ನೂ ಹಲವು ಸ್ವಾಭಾವಿಕ ಮಾದರಿಗಳನ್ನು ಗಮನಿಸುತ್ತಿದ್ದಂತೇ ಅಲ್ಲೂ ಗೋಲ್ಡನ್‌ ರೇಶಿಯೊ ಸ್ವಷ್ಟವಾಗುತ್ತ ಹೋಗುತ್ತದೆ.

ಸರಿಯಾದ ಉಲ್ಲೇಖಗಳು ಸಿಗದಿದ್ದರೂ ಗೋಲ್ಡನ್‌ ರೇಶಿಯೋದ ಚರ್ಚೆ ಇಂದಿನದ್ದಲ್ಲ. ಸುಮಾರು 2400 ವರ್ಷ ಹಳೆಯದು. ಅಂದಿನಿಂದ ಇಂದಿನವರೆಗೆ ಗಮನಿಸಿದರೂ ಜಗತ್ತಿನ ಶ್ರೇಷ್ಠ ಗಣಿತಜ್ಞರೆಲ್ಲ ಈ ವಿಷಯದ ಬಗ್ಗೆ ಕೊನೆಯಿಲ್ಲದಂತೇ ಚರ್ಚಿಸಿದ್ದಾರೆ. ನಂತರ ಕೇವಲ ಅವರಷ್ಟೇ ಅಲ್ಲ. ಕಲೆ, ವಾಸ್ತುಶಿಲ್ಪ, ಅಂಗರಚನಾಶಾಸ್ತ್ರ , ವೈದ್ಯಕೀಯಶಾಸ್ತ್ರ , ಸಂಗೀತ ಶಾಸ್ತ್ರಕ್ಕೆ ಸಂಬಂಧಪಟ್ಟ ದಿಗ್ಗಜರೆಲ್ಲ ತಲೆ ಹಾಳುಮಾಡಿಕೊಂಡವರೇ! ಕಾರಣ ಇದರ ಆಕರ್ಷಣೆ, ಸೆಳೆತವೇ ಅಂತಹದ್ದು. ಆಯಾ ಕ್ಷೇತ್ರದವರು ಅವರವರ ಕ್ಷೇತ್ರದಲ್ಲಿ ಈ ಗಣಿತದ ಅನುಪಾತವನ್ನು ಕಾಣುತ್ತಾ ಹೋದರೆ, ಇನ್ನೂ ಕೆಲವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅದನ್ನು ಅನುಸರಿಸುತ್ತ ಹೋದರು. ಅದರಲ್ಲಿ ಪ್ರಮುಖರು ಲಿಯೊನಾರ್ಡೊ ಡಾವಿನಿc, ಸಾಲ್ವೋದರ್‌ಡಾಲಿ, ಬೀತೊವನ್‌.

ಸಂಗೀತದಲ್ಲಿಯೂ ಗೋಲ್ಡನ್‌ ರೇಶಿಯೊ
ಪಾಶ್ಚಾತ್ಯ ಸಂಗೀತದಲ್ಲಿ ಬಹಳಷ್ಟು ಸಂಗೀತ ಸಂಯೋಜನೆಯು ಈ ಅನುಪಾತದಿಂದಲೇ ಆಗಿದೆ ಎನ್ನುವ ಉಲ್ಲೇಖ ದೊರೆಯುತ್ತದೆ.ಅದರ ಬಗ್ಗೆ ನನ್ನ ತಿಳುವಳಿಕೆಯು ಸೀಮಿತವಾದದ್ದು. ಆದರೆ, ಭಾರತೀಯ ಸಂಗೀತವನ್ನು ಗೋಲ್ಡನ್‌ ರೇಶಿಯೋದ ಚೌಕಟ್ಟಿನಲ್ಲಿ ಗಮನಿಸಿದರೆ ನನ್ನಲ್ಲಿ ಕೆಲವು ಕುತೂಹಲಗಳಿವೆ. ಸಪ್ತಸ್ವರದಲ್ಲಿ “ಪ’ ಐದನೇ ಸ್ವರ. “ಸ’ಗಿರುವ ಮಹತ್ವವೇ “ಪ’ಗೂ ಇದೆ. ಕಾರಣ ಕೇವಲ “ಸ’ ಮತ್ತು “ಪ’ ಸ್ವರಗಳು ಮಾತ್ರ ಸ್ಥಿರ ಸ್ವರಗಳು. ಉಳಿದ ಸ್ವರಗಳಿಗೆಲ್ಲ ಕೋಮಲ ಮತ್ತು ತೀವ್ರಗಳಿವೆ. ಸ್ವರಪದ ಜಾಗವೂ ಸಪ್ತ ಸ್ವರಗಳ ಅರ್ಧಭಾಗಕ್ಕಿಂತ ಸ್ವಲ್ಪ ಹೆಚ್ಚಿರುವುದು ಹಾಗೂ “ಪ’ ಸ್ವರಕ್ಕೆ “ಸ’ ಸ್ವರದಂತೇ ಅಚಲ ಸ್ಥಾನ ಕೊಟ್ಟಿದುದರಿಂದ “ಪ’ ಸ್ವರವೇ ಗೋಲ್ಡನ್‌ ರೇಶಿಯೋದಲ್ಲಿದೆಯೋ ಎನ್ನುವ ಕುತೂಹಲ ನನ್ನದು. ಈಗಷ್ಟೇ ನಾವು ಸಂಖ್ಯಾ ಸರಣಿಯ ಪ್ರೊಗ್ರೆಶನ್‌ ಅನ್ನು ಗಮನಿಸಿದ್ದೇವೆ. ಅದು 2, 3, 5, 8 ಹೀಗೆ. ಅದನ್ನೂ ನಾವು ಹಾರ್ಮೋನಿಯಂನ ಕಪ್ಪು$ ಮತ್ತು ಬಿಳಿ ಪಟ್ಟಿಗಳ ಗುಂಪಿನಲ್ಲೂ ಗಮನಿಸಬಹುದು.

ಒಂದು ವಸ್ತುವಿನ್ಯಾಸ ಮಾಡುತ್ತೇವೆ ಎಂದರೆ ಅದಕ್ಕೆ ಹೊಂದಿಕೊಂಡ ಬಹಳಷ್ಟು ವೇರಿಯೇಬಲ್‌ ಅಂಶಗಳಿರುತ್ತವೆ. ಹಾಗಾಗಿ, ಗೋಲ್ಡನ್‌ ರೇಶಿಯೋವನ್ನು ಎಲ್ಲ ಕಡೆ ಬಳಸಬೇಕೆನ್ನುವ ಕಡ್ಡಾಯವಿಲ್ಲ, ಎಲ್ಲದರಲ್ಲಿ ಬಳಸಲು ಸಾಧ್ಯವೂ ಇಲ್ಲ. ಇದರರ್ಥ ಅದಿಲ್ಲವೆಂದರೆ ಆ ಪ್ರಾಡಕ್ಟ್ಗಳ ಆಕರ್ಷಣೆ ಕಡಿಮೆ ಎಂದಲ್ಲ. ಬಳಸುವ ಅವಕಾಶವಿದ್ದರೆ ಬಳಸಬಹುದು. ಪ್ರಕೃತಿಯಲ್ಲಿ ಸಹಜವಾಗಿ ಈ ರೇಶಿಯೋ ಇರುವ ಬಹಳಷ್ಟು ವಸ್ತುಗಳು ಹೆಚ್ಚು ಆಕರ್ಷಣೀಯವಂತೂ ಹೌದು, ಹಾಗಾಗಿ ಇದನ್ನು ಪ್ರಾಡಕ್ಟ್ ವಿನ್ಯಾಸದಲ್ಲಿ ಬಳಸಿದರೆ ಜನಾಕರ್ಷಣೆಗೆ ಸಹಾಯವಾದೀತು ಮತ್ತು ಭವಿಷ್ಯದಲ್ಲೂ ಇದು ಮತ್ತೆ ಮತ್ತೆ ಕಾಡೀತು ಎನ್ನುವುದಂತೂ ಖಾತ್ರಿ.

ಇನ್ನೊಂದು ಸೂತ್ರದ ಕಡೆಗೆ ಹೋಗೋಣ. ಇಲ್ಲಿಯ ಮೂಲ ಚರ್ಚೆಯೇ ಯಾವ ಆಕಾರವು (ಫ‚ಾರ್ಮ್) ಕಲಾತ್ಮಕವಾಗಿ ನಮ್ಮನ್ನು ಆಕರ್ಷಿಸುತ್ತದೆ ಎನ್ನುವುದಲ್ಲವೆ? ಹಾಗಾದರೆ ಆಕಾರಕ್ಕೆ ಸಂಬಂಧಪಟ್ಟುಗಂಡು ಹೆಣ್ಣಿನ ನಡುವಿನ ಆಕರ್ಷಣೆಯನ್ನು ಗಮನಿಸಿದರೆ ವೇಯ್ಸ$rಟು ಹಿಪ್‌ ರೇಶಿಯೋದ ಚರ್ಚೆ ಬಹಳ ಮುಖ್ಯವೆಂದುಕೊಳ್ಳುತ್ತೇನೆ. ಇದನ್ನು ಸೊಂಟ ಮತ್ತು ನಿತಂಬದ ಅನುಪಾತವೆಂದು ಕರೆಯಬಹುದು. ಅಂದರೆ ಸೊಂಟದ ಸುತ್ತಳತೆಗೂ ಮತ್ತು ನಿತಂಬದ ಸುತ್ತಳತೆಗಿರುವ ಅನುಪಾತ. ಗಂಡಿನಲ್ಲಿ ಈ ಅನುಪಾತ 0.85 ದಿಂದ 0.95 ಇದ್ದರೆ ಹೆಣ್ಣಿಗೆ ಆಕರ್ಷಿತವಾದರೆ, ಹೆಣ್ಣಿನಲ್ಲಿ ಈ ಅನುಪಾತ 0.67 ದಿಂದ 0.80 (ಉದಾಹರಣೆ: 24 ಇಂಚು ಸೊಂಟ : 36 ಇಂಚು ನಿತಂಬ)ಇದ್ದರೆ ಗಂಡು ಆಕರ್ಷಿತನಾಗುತ್ತಾನೆ. (ಈ ಅನುಪಾತವು ನೇರವಾಗಿ ದೇಹದಲ್ಲಿನ ಟೆಸ್ಟೋಸ್ಟಿರೊನ್‌ ಮತ್ತು ಈಸ್ಟ್ರೋಜನ್‌ ಹಾರ್ಮೋನಿನ ಹಂಚಿಕೆಯ ಮೇಲೆ ನಿಂತುಕೊಂಡಿದೆ. ಹೆಚ್ಚಿನ ಪ್ರಮಾಣದ ಈಸ್ಟ್ರೋಜನ್‌ ಹೆಣ್ಣಿಗೆ ಕಡಿಮೆ ಅನುಪಾತವನ್ನು ಕೊಟ್ಟರೆ ಹೆಚ್ಚಿನ ಪ್ರಮಾಣದ ಟೆಸ್ಟೋಸ್ಟಿರೊನ್‌ ಗಂಡಿಗೆ ಹೆಚ್ಚಿನ ಅನುಪಾತ ಅಂದರೆ ಸುತ್ತಳತೆಯಲ್ಲಿ ಕಡಿಮೆ ಅಂತರವನ್ನು ಕೊಡುತ್ತದೆ). ಹೆಚ್ಚಿನದಾಗಿ ಗಂಡು ಹೆಣ್ಣಿಗೆ ಆಕಾರಕ್ಕೆ ಸಂಬಂಧಿಸಿ ಆಕರ್ಷಿತವಾಗುವುದು ಮುಖ್ಯವಾಗಿ ಒಂದು ಅಂಶಕ್ಕೆ. ಅದು ಅವಳ ದೈಹಿಕ ಸೌಂದರ್ಯದಿಂದಾಗಿ. ಆದರೆ, ಹೆಣ್ಣು (ಪ್ರಕೃತಿ) ಗಂಡನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಎರಡು ಅಂಶವನ್ನು ಗಮನದಲ್ಲಿಡುತ್ತಾಳೆ. ಮೊದಲನೆಯದು, ಆಕಾರಕ್ಕೆ ಸಂಬಂಧಿಸಿದ ಸೊಂಟದ ಸುತ್ತಳತೆ ಮತ್ತು ನಿತಂಬದ ಸುತ್ತಳತೆಗಿರುವ ಅನುಪಾತ.ಇದನ್ನು ದೈಹಿಕ ಆಕರ್ಷಣೆಯ ಒಂದು ಭಾಗವೆಂದು ಗಮನಿಸೋಣ.ಎರಡನೆಯದು, ಬಹಳ ಮುಖ್ಯವಾಗಿ ಆತನ ಬದುಕಿನ ಸ್ಥಿರತೆ (ಹಣಕಾಸು/ಆರ್ಥಿಕ ಸ್ಥಿತಿ- ತನಗೆ ಮುಂದೆ ಹುಟ್ಟುವ ಮಕ್ಕಳ ಭದ್ರತೆ ಇತ್ಯಾದಿ). ಯಾಕೆ ನಾನು ಈ ಎರಡನೆಯ ಅಂಶವನ್ನು ಸೇರಿಸಿದೆ ಎನ್ನುವ ಕುತೂಹಲ ಸಹಜವೇ. ಈ ನಲವತ್ತು-ಐವತ್ತು ವರ್ಷಗಳಲ್ಲಿ ಸ್ತ್ರೀ ಹೆಚ್ಚು ಹೆಚ್ಚು ಸ್ವಾವಲಂಬಿಯಾಗುತ್ತಿದ್ದಂತೆ ಆಕೆ ಎರಡನೆಯ ಅಂಶವಾದ ಗಂಡಿನ ಸ್ಥಿರತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಈ ಅರ್ಧ ಶತಮಾನದಲ್ಲಿ ನಾವು ಮೇಲೆ ಚರ್ಚಿಸಿದ ಅನುಪಾತದಲ್ಲೇನೂ ವ್ಯತ್ಯಾಸವಾಗಿಲ್ಲ ಎನ್ನುವುದನ್ನೂ ನಾವು ಮುಖ್ಯವಾಗಿ ಗಮನಿಸಬೇಕು !

ಒಂದು ವಿಷಯ ಜೀವಿಯ ಆಕರ್ಷಣೆಯ ಮೇಲೆ ಪ್ರಭಾವ ಬೀರುತ್ತದೆ ಎಂದಾದರೆ, ಅದನ್ನು ಒಂದು ವಸ್ತು ಅಥವಾ ಪ್ರಾಡಕ್ಟಿನ ವಿನ್ಯಾಸದಲ್ಲಿ ಬಳಸುವುದು ಸಹಜವೇ. ವಿನ್ಯಾಸ ಮಾಡಿದ ವಸ್ತುವೂ ಆಕರ್ಷಣೀಯವಾಗಿರಬೇಕಲ್ಲವೇ?

ಮೊದಲೇ ಹೇಳಿದಂತೇ ವಿನ್ಯಾಸದ ಮೊದಲ ಉದ್ದೇಶವೇ ಬಳಕೆದಾರನ ಗ್ರಹಿಕೆಯ ಮೇಲೆ ಪ್ರಭಾವ ಬೀರುವುದೇ ಆಗಿದೆ. ಪುರುಷರ ಪರ್‌ಫ್ಯೂಮಿನ ಬಾಟಲ್‌, ಪ್ಯಾಂಟಿನ ಬೆಲ್ಟ್, ವಾಚ್‌, ಶೂ, ಕೂದಲಿನ ಜೆಲ್‌ಅಥವಾ ಶ್ಯಾಂಪೂ ಬಾಟಲ್‌, ಬೈಕ್‌, ಪೆಟ್ರೋಲಿಯಂ ಉತ್ಪನ್ನಗಳ ಕ್ಯಾನ್‌ ಇತ್ಯಾದಿಗಳ ಆಕಾರಗಳಲ್ಲಿ (ಫ‚ಾರ್ಮ್) ಗಂಡಸಿನ ಅನುಪಾತ ಇಣುಕುತ್ತದೆ. ಅದೇ ರೀತಿ ಮಹಿಳೆಯರು ಬಳಸುವ ಉತ್ಪನ್ನಗಳಲ್ಲಿ ಅವರ ಅನುಪಾತವನ್ನು ಗಮನಿಸಬಹುದು. ಪುರುಷ ಮತ್ತು ಮಹಿಳೆಯರ ಪರ್‌ಫ್ಯೂಮ್‌ ಬಾಟಲಿಗಳನ್ನು ಒಟ್ಟೊಟ್ಟಿಗೆ ಇಟ್ಟು ನೋಡಿದರೆ ನಿಮಗೆ ಅರ್ಥವಾದೀತು. ಇಲ್ಲಿ ಮೂಲ ಉದ್ದೇಶ ತನ್ನ ಇಮೇಜ್‌/ಗುಣಲಕ್ಷಣವನ್ನು ಹೆಚ್ಚಿಸಿಕೊಳ್ಳುವುದಾದ್ದರಿಂದ ಆಯ್ಕೆಯೂ ಅದಕ್ಕೆ ತಕ್ಕುದಾಗೇ ಇರುತ್ತದೆ. ಕರ್ವ್‌ ಅಥವಾ ಬಳುಕು ರೇಖೆಯ ಉತ್ಪನ್ನವನ್ನು ಮಹಿಳೆ ಪಡೆದು ತನ್ನ ಇಮೇಜನ್ನು ಹೆಚ್ಚಿಸಿಕೊಳ್ಳುತ್ತಾಳೆ. ಅಂತೆಯೇ ಪುರುಷ ಮಸ್ಕಾಲೈನ್‌ ಉತ್ಪನ್ನಗಳನ್ನು ಖರೀದಿಸುತ್ತಾನೆ! ಅನುಪಾತದ ಬಳಕೆಯೆಂದರೆ ನೇರವಾಗಿ ಉತ್ಪನ್ನದ ಆಕಾರದಲ್ಲಿ ಕಾಪಿ ಮಾಡುವುದಲ್ಲ. ಈ ಅನುಪಾತವನ್ನು ಸಾಂಕೇತಿಕವಾಗಿ ಸೂಕ್ಷ್ಮವಾಗಿ ಅಭಿವ್ಯಕ್ತಿಸುವುದು.

ಒಂದು ಸೂತ್ರ ಅಥವಾ ವ್ಯಾಖ್ಯಾನವಾಗುವುದು ಹೇಗೆ?- ಮೊದಲು ಒಂದು ವಿಷಯ ಅನುಭವವಾಗಿ, ನಂತರ ಅದು ಪುನಃ ಪುನಃ ಸಂಭವಿಸಿ ಒಂದು ಪ್ಯಾಟರ್ನ್ ಅಥವಾ ಮಾದರಿ ತೋರುತ್ತದೆ. ಆಗ ಅದು ಮುಂದೆ ಸೂತ್ರವಾಗುವುದು. ಪ್ರಕೃತಿ, ಗಣಿತದಿಂದ ಹಿಡಿದು ಕಲೆ, ಜೀವಶಾಸ್ತ್ರದವರೆಗೆ ಪ್ರಬಲವಾಗಿ ಕಾಣಿಸಿಕೊಳ್ಳುವ, ಸಾವಿರಾರು ವರ್ಷಗಳಿಂದ ಜಗತ್ತಿನ ಶ್ರೇಷ್ಠರು ನಿರಂತರವಾಗಿ ಚರ್ಚೆ ನಡೆಸುತ್ತಿರುವ ಈ ಗೋಲ್ಡನ್‌ ರೇಶಿಯೊ ಹೇಗಾಯಿತು ಎನ್ನುವುದೂ ಆಶ್ಚರ್ಯವೇ. ಪ್ರಕೃತಿಯ ಮೂಲೆ ಮೂಲೆಯಲ್ಲಿ ತೋರುವ ಈ ಅನುಪಾತವು ಸೃಷ್ಟಿ ಸಹಜವಿರಬೇಕು. ಪ್ರಕೃತಿಯ ಭಾಗವೇ ಆಗಿರುವ ನಮ್ಮಿಂದ ನಮಗೇ ಗೊತ್ತಿರದಂತೇ ಇದು ಹೀಗೆ ಎಂದು ವ್ಯಾಖ್ಯಾನಿಸುವ ಮೊದಲೇ ಈ ಅನುಪಾತ ನಮ್ಮ ಉಪಪ್ರಜ್ಞೆಯಿಂದ ಹೊರ ಹೊಮ್ಮಿರಬೇಕು.ಆಕಾರದ ಯಾವ ಅನುಪಾತ ಹೆಚ್ಚು ಆಕರ್ಷಿಸಲ್ಪಡುತ್ತದೆ ಎನ್ನುವ ಸೂತ್ರ ಪ್ರಕೃತಿಯಲ್ಲೇ ಇದೆ, ಅದನ್ನು ನಾವು ಹುಡುಕಿಕೊಂಡಿದ್ದೇವೆ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಕಾಲದಲ್ಲಿ ಮತ್ತೆ ಮತ್ತೆ ನಮ್ಮೆದುರಿಗೆ ಪ್ರತ್ಯಕ್ಷವಾಗಿ ನಮಗೆ ಆಶ್ಚರ್ಯವೊಡ್ಡುತ್ತದೆ. ಕಂಡುಕೊಂಡ ನಾವು ಮತ್ತೆಮತ್ತೆ ನಮ್ಮ ನಮ್ಮ ಕ್ಷೇತ್ರದಲ್ಲಿ ಬಳಸುತ್ತ ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತೇವೆ. ಈ ಅನುಪಾತ ಮತ್ತೆಮತ್ತೆ ಮೂಡುತ್ತಿದ್ದಂತೇ ನಮ್ಮ ಸುತ್ತ ಇನ್ನೂ ಸುಂದರವಾಯಿತೆಂದು ಅಂದುಕೊಳ್ಳುತ್ತೇವೆ. ಈ ಅನುಪಾತದಿಂದ ಹೊಸದೊಂದನ್ನು ಸೃಷ್ಟಿಮಾಡಿದರೆ ಅದು ಕೇವಲ ಗೋಲ್ಡನ್‌ ರೇಶಿಯೊದ ಇರುವಿಕೆಯ ಅನುಭೂತಿ ಅಷ್ಟೇ. ಹಾಗಾಗಿ, ಇದಕ್ಕೆ ಇನ್ನೊಂದು ಹೆಸರಿದೆ: ಅದು ಡಿವೈನ್‌ ಪ್ರಪೊರ್ಶನ್‌ ಅಥವಾ ದಿವ್ಯಅನುಪಾತ.

ಸಚ್ಚಿದಾನಂದ ಹೆಗಡೆ

ಟಾಪ್ ನ್ಯೂಸ್

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.