“ಕಸದ ಜವಾಬ್ದಾರಿಯುತ ನಿರ್ವಹಣೆ ನಾಗರಿಕರ ಕರ್ತವ್ಯ’
ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನ
Team Udayavani, Apr 28, 2019, 6:19 AM IST
ಸುರತ್ಕಲ್: ಕಸದ ಜವಾಬ್ದಾರಿ ಯುತ ನಿರ್ವಹಣೆ ಪ್ರತಿಯೋರ್ವ ನಾಗರಿಕರ ಕರ್ತವ್ಯ, ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೊ ಹಾಗೆಯೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದು ಸುರತ್ಕಲ್ ನ್ಪೋಟ್ಸ್ ಅಕಾಡೆಮಿಯ ಅಧ್ಯಕ್ಷ ಎಡ್ವಿನ್ ಚಾರ್ಲ್ಸ್ ಹೇಳಿದರು.
ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್, ವಿವಿಧ ಸಮಾನ ಮನಸ್ಕ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ನೆರವಿನೊಂದಿಗೆ ನಡೆಯುವ ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ 28ನೇ ವಾರದ ಶ್ರಮದಾನವನ್ನು ಶನಿವಾರ ಗೋವಿಂದದಾಸ ಕಾಲೇಜು ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರ ಸಹಕಾರದಿಂದ ಬದಲಾವಣೆ
ವಿದ್ಯಾರ್ಥಿಗಳು ಸಂಘ – ಸಂಸ್ಥೆಗಳು ಸ್ವತ್ಛತೆಗೆ ಸಹಕಾರಕೊಡುವುದರೊಂದಿಗೆ ಸ್ವಚ್ಛತಾ ಅರಿವು, ಶ್ರಮದಾನದಲ್ಲಿ ಭಾಗವಹಿಸಿದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎಂದರು.
ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ಜನರಲ್ಲಿ ಸ್ವಚ್ಛತೆಯ ಅರಿವು ಕಡಿಮೆ ಪ್ರಮಾಣ ದಲ್ಲಿದ್ದು, ಪ್ರತಿಯೋರ್ವರು ಸ್ವತ್ಛತೆ ತಮ್ಮ ಆದ್ಯ ಕರ್ತವ್ಯವೆಂದು ತಿಳಿದಲ್ಲಿ ಸ್ವಚ್ಛ ಸುಂದರ ಭಾರತದ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹ ಬೇಡ. ರಾಮಕೃಷ್ಣ ಮಿಷನ್ ಮಾರ್ಗ ದರ್ಶನದಲ್ಲಿ ಸ್ವಯಂ ಸೇವಕರು ಸ್ವಚ್ಛತೆ ನಡೆಸುವುದರಿಂದ ಪ್ರೇರಣೆ ಪಡೆದು ಬಹಳಷ್ಟು ಜನರು ಸ್ವಯಂ ಸ್ಫೂರ್ತಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಶ್ಲಾಘನೀಯ ಎಂದರು.
ಸುರತ್ಕಲ್ ನ್ಪೋಟ್ಸ್ ಅಕಾಡೆಮಿ, ಗೋವಿಂದ ದಾಸ ಕಾಲೇಜು ನೇತೃತ್ವದಲ್ಲಿ ನಡೆಯುತ್ತಿರುವ ವಾರ್ಷಿಕ ಕ್ರೀಡಾ ತರಬೇತಿ ಶಿಭಿರದ ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕ ರೊಂದಿಗೆ ಗೋವಿಂದ ದಾಸ ಕಾಲೇಜು ಮುಂಭಾಗ ಹಾಗೂ ಚರ್ಚ್ ರಸ್ತೆಗಳಲ್ಲಿ ಶ್ರಮದಾನ ನಡೆಸಿದರು.
ಕ್ರೀಡಾ ತರಬೇತುದಾರರಾದ ಸಂದೀಪ್ ಕಡಂಬೋಡಿ, ರಾಕೇಶ್ ಹೊಸಬೆಟ್ಟು, ಸಾದೀಕ್, ಉದಯ ಕುಮಾರ್, ವಿನೋದ್ ಕುಮಾರ್, ಸುಜಿತ್ ಕುಮಾರ್ ಜಮುನ ಸಿಂಗ್, ಮುಂತಾದವರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ನಾಲ್ಕು ಗುಂಪುಗಳಾಗಿ ಶ್ರಮದಾನದಲ್ಲಿ ಭಾಗವಹಿಸಿದರು.
ದೇಶ ಕಟ್ಟುವಲ್ಲಿ ಭಾಗವಹಿಸಿ
ನಾಗರಿಕ ಸಲಹಾ ಸಮಿತಿ ಸಂಚಾಲಕ ಡಾ|ಕೆ ರಾಜ್‌ಮೋಹನ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸಾಧಿ ಸುವ ಹಂಬಲ ತೀವ್ರವಾಗುತ್ತದೆ. ಅದರೊಂದಿಗೆ ಸ್ವಚ್ಛ ಸುರತ್ಕಲ್ ಅಭಿಯಾನವು ತಮ್ಮದೆಂದು ಭಾವಿಸಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಪ್ರತಿಯೋರ್ವರೂ ಭಾಗವಹಿಸ ಬೇಕಾದ ಅಗತ್ಯವನ್ನು ತಿಳಿಸಿದರು.
ಸ್ವಚ್ಛತಾ ಜಾಗೃತಿ ಅರಿವು
ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಕೃಷ್ಣಮೂರ್ತಿ, ಪ್ರೊ| ರಮೇಶ್ ಭಟ್, ಶಿಕ್ಷಕಿ ಸಾವಿತ್ರಿ ರಮೇಶ್ ಭಟ್, ಶೇಖರ ದೇವಾಡಿಗ ಮೊದಲಾದವರ ನೇತೃತ್ವದಲ್ಲಿ ವರ್ತಕರಿಗೆ ಪರಿಸರವಾಸಿಗಳಿಗೆ ಸ್ವತ್ಛತೆಯ ಅರಿವು ಮೂಡಿಸಲಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.