ಬರಲಿದೆ ಹೊಸ 20 ರೂ. ನೋಟು
Team Udayavani, Apr 28, 2019, 6:15 AM IST
ಹೊಸದಿಲ್ಲಿ: ಈಗಾಗಲೇ ಬಹುತೇಕ ಎಲ್ಲ ನೋಟುಗಳನ್ನೂ ಹೊಸ ವಿನ್ಯಾಸದಲ್ಲಿ ಪರಿಚಯಿಸಿದ ಆರ್‌ಬಿಐ ಈಗ 20 ರೂ. ಮುಖ ಬೆಲೆಯ ನೋಟುಗಳಿಗೂ ಹೊಸ ರೂಪ ನೀಡಿದೆ. ಈ ನೋಟಿನಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ. ಹೊಸ 20 ರೂ. ನೋಟು ಹಸಿರು-ಹಳದಿ ಬಣ್ಣದಲ್ಲಿರಲಿದೆ. ಹಿಂಬದಿಯಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿರಲಿದ್ದು, ದೇಶದ ಐತಿಹಾಸಿಕ ಮಹತ್ವವನ್ನು ಸಾರಲಿದೆ. ನೋಟಿನ ಉದ್ದ 129 ಮಿ.ಮೀ. ಹಾಗೂ ಅಗಲ 63 ಮಿ.ಮೀ. ಇರಲಿದೆ. ಈಗಾಗಲೇ ಚಾಲ್ತಿಯಲ್ಲಿರುವ 20 ರೂ. ನೋಟು ಹಿಂದಿ ನಂತೆಯೇ ಚಾಲ್ತಿಯಲ್ಲಿರಲಿವೆ.
ನೋಟಿನ ವೈಶಿಷ್ಟ
ಮುಂಭಾಗದಲ್ಲಿ
– ದೇವನಾಗರಿ ಲಿಪಿಯಲ್ಲಿ 20 ಎಂದು ಬರೆಯಲಾಗಿದ್ದು, ಮಧ್ಯದಲ್ಲಿ ಮಹಾತ್ಮಾ ಗಾಂಧಿ ಚಿತ್ರವಿದೆ.
– ಸೂಕ್ಷ್ಮ ಅಕ್ಷರಗಳಲ್ಲಿ ಆರ್‌ಬಿಐ, ಭಾರತ್, ಇಂಡಿಯಾ ಹಾಗೂ 20 ಎಂದು ಬರೆಯಲಾಗಿದೆ.
– ಗವರ್ನರ್ ಸಹಿ, ಮಹಾತ್ಮಾ ಗಾಂಧಿ ಚಿತ್ರದ ಬಳಿ ಆರ್‌ಬಿಐ ಚಿಹ್ನೆ ಹಾಗೂ ಬಲ ಬದಿಯಲ್ಲಿ ಅಶೋಕ ಸ್ತಂಭ ಇದೆ.
– ಬಲ ಮೇಲ್ಬದಿ ಹಾಗೂ ಕೆಳಬದಿಯಲ್ಲಿ ಮಹಾತ್ಮಾ ಗಾಂಧಿ ಚಿತ್ರ ಹಾಗೂ ವಾಟರ್‌ಮಾರ್ಕ್‌ನಲ್ಲಿ 20 ಸಂಖ್ಯೆ ಹಾಗೂ ಅದರ ಕೆಳಗೆ ಅಕ್ಷರ ಗಾತ್ರ ಕ್ರಮವಾಗಿ ಏರುತ್ತಾ ನೋಟಿನ ಸೀರಿಯಲ್ ನಂಬರ್ ಬರೆಯಲಾಗಿರುತ್ತದೆ.
ಹಿಂಭಾಗ
– ಎಡ ಬದಿಯಲ್ಲಿ ಮುದ್ರಣದ ವರ್ಷ ಮತ್ತು ಸ್ವತ್ಛ ಭಾರತ ಲೋಗೋ, ಅದರ ಘೋಷವಾಕ್ಯ ಇದೆ.
– ವಿವಿಧ ಭಾಷೆಗಳಲ್ಲಿ ಅಕ್ಷರದಲ್ಲಿ ಇಪ್ಪತ್ತು ರೂಪಾಯಿ ಎಂದು ಬರೆದಿರುವ ಪ್ಯಾನೆಲ್ ಹಾಗೂ ಅದರ ಪಕ್ಕ ಎಲ್ಲೋರಾ ಗುಹೆಯ ಚಿತ್ರ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.