ಲಂಕಾ ಸ್ಫೋಟ: ಕರಾವಳಿಯಲ್ಲಿ ಹೈ-ಅಲರ್ಟ್ ಮುಂದುವರಿಕೆ
Team Udayavani, Apr 28, 2019, 6:11 AM IST
ಮಂಗಳೂರು: ಶ್ರೀಲಂಕಾದಲ್ಲಿ ಕಳೆದ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೇಶದ ಕರಾವಳಿ ತೀರದಲ್ಲಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಕರಾವಳಿ ತೀರದಲ್ಲಿ ಘೋಷಿಸಲಾಗಿರುವ ಹೈ-ಅಲರ್ಟ್ ಮುಂದುವರಿದಿದೆ.
ಕರ್ನಾಟಕ, ಕೇರಳ, ಗೋವಾ ರಾಜ್ಯಗಳ ಸಮುದ್ರ ತೀರ ಪ್ರದೇಶದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ (ಸಿಎಸ್ಪಿ) ಅಧಿಕಾರಿ ಮತ್ತು ಸಿಬಂದಿ ಕಟ್ಟೆಚ್ಚರ ವಹಿಸಿ ಕಣ್ಗಾವಲು ಇರಿಸಿದ್ದಾರೆ.
ರಾಜ್ಯದಲ್ಲಿ ಮಂಗಳೂರಿನಿಂದ ಕಾರವಾರ ತನಕ ಕರಾವಳಿ ಕಾವಲು ಪೊಲೀಸ್ ಪಡೆಯ 9 ಠಾಣೆಗಳಿದ್ದು, ಉಡುಪಿಯ ಮಲ್ಪೆಯಲ್ಲಿ ಕೇಂದ್ರ ಕಚೇರಿ ಇದೆ. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಸಿಎಸ್ಪಿ ಅಧಿಕಾರಿಗಳು ಮತ್ತು ಸಿಬಂದಿ ಸುಸಜ್ಜಿತ ಬೋಟ್ ಮೂಲಕ ಕರಾವಳಿ ಉದ್ದಕ್ಕೂ ಗಸ್ತು ನಡೆಸುತ್ತಿ ದ್ದಾರೆ. ಸಮುದ್ರ ತೀರದ ಲ್ಯಾಂಡಿಂಗ್ ಪಾಯಿಂಟ್ಗಳಲ್ಲಿ ಮತ್ತು ಬಂದರುಗಳಲ್ಲಿ ಶಂಕಿತರ ತಪಾಸಣೆ ನಡೆಸುತ್ತಿದ್ದಾರೆ.
ಕರಾವಳಿ ಕಾವಲು ಪಡೆಯ ಪೊಲೀಸರ ಕಾರ್ಯ ವ್ಯಾಪ್ತಿ ಸಮುದ್ರ ದಲ್ಲಿ 12 ನಾಟಿಕಲ್ ಮೈಲು ತನಕ ಇದ್ದು, ಈ ವ್ಯಾಪ್ತಿಯಲ್ಲಿ ಸಂಚರಿಸುವ ಶಂಕಿತ ಮೀನುಗಾರಿಕಾ ಬೋಟುಗಳ ತಪಾಸಣೆಯನ್ನೂ ಕೈಗೊಂಡಿದ್ದಾರೆ.
ಜತೆಗೆ ಕರಾವಳಿ ತಟ ರಕ್ಷಣಾ ಪಡೆ, ನೌಕಾ ಪಡೆ, ವಾಯುಪಡೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಜತೆ ಮಾಹಿತಿಗಳನ್ನು ವಿನಿಮಯ ಮಾಡಿ ಕೊಂಡು ಕರಾವಳಿ ಕಾವಲು ಪೊಲೀಸ್ ಪಡೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೆಟ್ನ ಪೊಲೀಸರು ಮಂಗಳೂರು ನಗರ ಮತ್ತು ಹೊರ ವಲಯಗಳಲ್ಲಿ ಇರುವ ಬೃಹತ್ ಉದ್ಯಮಗಳು, ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್ಗಳು, ಜನ ಸಂದಣಿ ಇರುವ ತಾಣಗಳಲ್ಲಿ ನಿಗಾ ಇರಿಸಿದ್ದು, ವಿಶೇಷ ತಪಾಸಣೆ ನಡೆಸುತ್ತಿದ್ದಾರೆ.
ಕೆಎಸ್ಸಾರ್ಟಿಸಿಯಲ್ಲಿ ಮುನ್ನೆಚ್ಚರಿಕೆ
ಭಯೋತ್ಪಾದಕ ದಾಳಿ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್ಸಾರ್ಟಿಸಿಯ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮತ್ತು ಮುನ್ನೆಚ್ಚರಿಕೆ ವಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.