ಸನ್ಯಾಸಿಗಳಿಗೆ ರಾಜಕೀಯ ಸಲ್ಲ: ವಿಧುಶೇಖರ ಸ್ವಾಮೀಜಿ
Team Udayavani, Apr 28, 2019, 5:09 PM IST
ಸಾಗರ: ಶೃಂಗೇರಿ ಶಂಕರ ಮಠದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಕುಂಭಾಭಿಷೇಕ ಸಮಿತಿ ವತಿಯಿಂದ ಶೃಂಗೇರಿಯ ವಿಧುಶೇಖರ ಸ್ವಾಮೀಜಿಗಳಿಗೆ ಅಭಿವಂದನಾ ಪತ್ರ ನೀಡಿ ಗೌರವಿಸಲಾಯಿತು.
ಸಾಗರ: ರಾಜಕೀಯವಾಗಿ ನಾವು ಮಾತನಾಡುವುದಿಲ್ಲ. ರಾಜಕೀಯ ಮಾತನಾಡುವವರೇ ಬೇರೆ ಇರುತ್ತಾರೆ. ಸನ್ಯಾಸಿಗಳು ರಾಜಕೀಯ ಮಾಡುವುದು, ಮಾತನಾಡುವುದು ಮಾಡಿದರೆ ಅವರು ಸನ್ಯಾಸಿಗಳಾಗಿರುವುದಿಲ್ಲ. ಇಂತಹ ಪರಂಪರೆ ನಮ್ಮ ಶೃಂಗೇರಿ ಮಠದಲ್ಲಿ ಇಲ್ಲ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ವಿಧುಶೇಖರ ಭಾರತಿ ಸ್ವಾಮಿಗಳು ಹೇಳಿದರು.
ನಗರದ ಶೃಂಗೇರಿ ಶಂಕರ ಮಠದಲ್ಲಿ ಶುಕ್ರವಾರ ನೂತನ ಗೋಪುರ ಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಮನುಷ್ಯನನ್ನು ಸನ್ಮಾರ್ಗದ ಕಡೆಗೆ ಹೋಗುವಂತೆ ಮಾಡುವುದೇ ನಮ್ಮ ಧರ್ಮ. ಶೃಂಗೇರಿ ಶಂಕರ ಮಠದ ಶಾಖೆ ಇರುವಲ್ಲಿ ಶೃಂಗೇರಿ ಮುಖ್ಯ ಮಠದ ಪ್ರಭಾವ, ಅಂಶ ಇದೆ. ಒಂದು ಊರಿನಲ್ಲಿ ಶೃಂಗೇರಿ ಮಠದ ಶಾಖೆ ಇದೆ ಎಂದರೆ ಮೂಲ ಮಠದ ಒಂದಂಶ ಅಲ್ಲಿರುತ್ತದೆ. ಶೃಂಗೇರಿಗೆ ಬರಲು ಸಾಧ್ಯವಿಲ್ಲದ ಭಕ್ತರು ಶಾಖಾ ಮಠಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಶಾರದಾಂಬೆಗೆ, ಶ್ರೀಗಳಿಗೆ ತಲುಪುತ್ತದೆ ಎಂದರು.
1,236 ವರ್ಷಗಳ ಹಿಂದೆ ಶಂಕರಾಚಾರ್ಯರು ಅವತಾರವೆತ್ತಿ ಸನಾತನ ಧರ್ಮವನ್ನು ಪುನರುತ್ಥಾನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ರಚಿಸಿದ ಆಕರ ಗ್ರಂಥಗಳು, ಶಂಕರ ಸ್ತ್ರೋತ್ರಗಳು ಭಕ್ತರ ಉದ್ಧಾರಕ್ಕೆ ರಚನೆಯಾದದ್ದು. ಭಕ್ತರು ಇದರ ನಿರಂತರ ಪಠಣದಿಂದ ತಮ್ಮ ಕಷ್ಟಕಾರ್ಪಣ್ಯದಿಂದ ದೂರವಾಗಲು ಸಾಧ್ಯ. ಅದ್ವೈತ ಉಪದೇಶವನ್ನು ಬೇರೆಬೇರೆ ವಿದ್ವಾಂಸರು, ಶಂಕರಾಚಾರ್ಯರು ವ್ಯಾಖ್ಯಾನ ಮಾಡಿದ್ದಾರೆ. ಇವೆಲ್ಲವೂ ಬೌದ್ಧಿಕ ವ್ಯವಹಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುತ್ತದೆ. ಜಗದ್ಗುರು ಎಂದರೆ ಜಗತ್ತನ್ನು ಸುತ್ತುವರೆಯುವವರು ಎನ್ನುವ ಮನೋಭಾವ ಸರಿಯಲ್ಲ. ಭಕ್ತರಿಗೆ ಸನ್ಮಾರ್ಗಯುತ ಮಾರ್ಗದರ್ಶನ ಮಾಡುವವರು ನಿಜವಾದ ಜಗದ್ಗುರುಗಳಾಗಿರುತ್ತಾರೆ. ಅವರು ಸಚ್ಚಿದಾನಂದನ ಮನಸ್ಸು ಉಳ್ಳವರಾಗುವ ಜೊತೆಗೆ ಭಕ್ತರಲ್ಲೂ ಅಂತಹ ಮನಸ್ಸು ರೂಪಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದರು. ವಿದ್ವಾನ್ ಕಮಲಾಕರ ಭಟ್ ಮತ್ತು ಹೈಕೋರ್ಟ್‌ನ ನ್ಯಾಯವಾದಿ ಸುಬ್ರಹ್ಮಣ್ಯ ಜೋಯ್ಸ ಮಾತನಾಡಿದರು. ಬೆಂಗಳೂರಿನ ಉದ್ಯಮಿ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಕುಂಭಾಭಿಷೇಕ ಸಮಿತಿ ವತಿಯಿಂದ ಶ್ರೀಗಳಿಗೆ ಅಭಿವಂದನಾ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಜೋಷಿ ಫೌಂಡೇಶನ್‌ನ ಅಬಸೆ ದಿನೇಶಕುಮಾರ್ ಎನ್. ಜೋಷಿ, ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸಿ.ಎಂ.ಎನ್. ಶಾಸ್ತ್ರಿ, ನ್ಯಾಯವಾದಿ ಅಶೋಕ ಭಟ್, ವಿಜಯ ಹೆಗಡೆ ಇನ್ನಿತರರಿದ್ದರು. ಮಹಾಬಲೇಶ್ವರ ಭಟ್ ಮತ್ತು ಸಂಗಡಿಗರು ವೇದಘೋಷ ಮಾಡಿದರು. ಪ್ರಜ್ಞಾಶ್ರೀ ಪ್ರಾರ್ಥಿಸಿದರು. ನ್ಯಾಯವಾದಿ ಕೆ. ದಿವಾಕರ್ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಅಶ್ವಿನಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಕೆ.ಆರ್. ಕೃಷ್ಣಯ್ಯ ಅಭಿನಂದನಾ ಪತ್ರ ವಾಚಿಸಿದರು. ಎನ್.ಜಿ. ವಿನಾಯಕ ಜೋಯ್ಸ ವಂದಿಸಿದರು. ಮ.ಸ.ನಂಜುಂಡಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.