ಇಲಿ, ಹೆಗ್ಗಣ ಕಾಟಕ್ಕೆ ಮದ್ದು
Team Udayavani, Apr 29, 2019, 6:30 AM IST
ಇಲಿ ಮತ್ತು ಹೆಗ್ಗಣಗಳು ಮೂಲತಃ ಅನುಮಾನದ ಪ್ರಾಣಿಗಳು. ಉಗ್ರ ವಾಸನೆಯ ವಿಷಗಳನ್ನು ಬೇಗ ಪತ್ತೆಹಚ್ಚಿ ದೂರ ಉಳಿಯುತ್ತವೆ. ಆದ್ದರಿಂದಲೇ ಇಲಿಗಳನ್ನು ಕೊಲ್ಲಲು ಬಳಸುವ ರಾಸಾಯನಿಕ ವಿಷಗಳು ಅಷ್ಟೊಂದು ಯಶಸ್ವಿಯಾಗುವುದಿಲ್ಲ. ಇದರ ಬದಲಿಗೆ, ಗೊಬ್ಬರಗಿಡ ಬಳಸಿ, ಇಲಿ-ಹೆಗ್ಗಣಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು. ಕೃಷಿಕರೆಲ್ಲರಿಗೂ ಗ್ಲಿರಿಸೀಡಿಯಾ ಸೊಪ್ಪು ಪರಿಚಿತ. ಇದನ್ನು ಗೊಬ್ಬರದ ಗಿಡ ಎಂದು ಕರೆಯುತ್ತಾರೆ.
ವಾಸ್ತವವಾಗಿ ಈ ಸಸ್ಯವನ್ನು ಗ್ರೀಕ್‌ನ ಜನರು ಇಲಿ- ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಗ್ಲಿರಿ ಎಂದರೆ ಇಲಿ ಎಂದರ್ಥ. ನಿರ್ದಿಷ್ಟ ಪ್ರಮಾಣದ ಅನ್ನ ಮತ್ತು ಗ್ಲಿರಿಸೀಡಿಯಾ ಎಲೆಗಳನ್ನು ಮಿಶ್ರಣ ಮಾಡಿ, ನಾಲ್ಕುದಿನಗಳ ಕಾಲ ಪಾತ್ರೆಯಲ್ಲಿ ಭದ್ರವಾಗಿ ಮುಚ್ಚಿಡಬೇಕು. ಸೊಪ್ಪನ್ನು ಚೆನ್ನಾಗಿ ಅರೆದು ಕೂಡ ಅನ್ನದಲ್ಲಿ ಬೆರೆಸಬಹುದು. ಒಂದೆರಡು ದಿನಗಳಲ್ಲಿಯೇ ಇದರಿಂದ ತೀವ್ರ ಹಳಸಲು ವಾಸನೆ ಬರಲು ಪ್ರಾರಂಭವಾಗುತ್ತದೆ. ನಾಲ್ಕುದಿನಗಳ ಬಳಿಕ ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿ ಇಲಿ ಹೆಗ್ಗಣಗಳ ಬಿಲಗಳ ಬಳಿ ಅಥವಾ ಅವುಗಳು ಓಡಾಡುವ ದಾರಿಯಲ್ಲಿ ಇಡಬೇಕು.
ಹಳಸಲು ಅನ್ನದ ವಾಸನೆಗೆ ಆಕರ್ಷಿತವಾಗುವ ಇಲಿ ಹೆಗ್ಗಣಗಳು ಖಂಡಿತವಾಗಿಯೂ ಉಂಡೆಗಳನ್ನು ತಿನ್ನುತ್ತವೆ. ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪುತ್ತವೆ. ಗ್ಲಿರಿಸೀಡಿಯಾ ಸೊಪ್ಪು ಮಿಶ್ರಿತ ಅನ್ನದ ಉಂಡೆಯನ್ನು ಇಲಿ ಹೆಗ್ಗಣ ತಿಂದ ಲಕ್ಷಣಗಳಿದ್ದು, ಸತ್ತ ಇಲಿಗಳು ಕಾಣಿಸದಿದ್ದರೆ ತುಸು ದೂರ ಸಾಗಿಸುತ್ತಿರುತ್ತವೆ. ಹಲವು ಬಾರಿ ಪಾಷಾಣ ಬೆರೆಸಿದ ಆಹಾರ ತಿಂದ ಇಲಿ – ಹೆಗ್ಗಣಗಳು ಬದುಕಿ ಉಳಿಯುವುದುಂಟು. ಹೇಗೆಂದರೆ, ಚೆನ್ನಾಗಿ ನೀರು ಕುಡಿಯುತ್ತವೆ. ಇದರಿಂದ ಅವುಗಳ ಜೀರ್ಣಾಂಗದ ಮೇಲೆ ವಿಷ ಪರಿಣಾಮಕಾರಿಯಾಗುವುದಿಲ್ಲ.
ಆದರೆ ಗ್ಲಿರಿಸೀಡಿಯಾ ಸೇವಿಸಿದ ಇಲಿ, ಹೆಗ್ಗಣಗಳು ನೀರು ಕುಡಿದರೆ ಮತ್ತಷ್ಟು ಬೇಗ ಸಾಯುತ್ತವೆ. ಏಕೆಂದರೆ, ಗ್ಲಿಸೀಡಿಯಾ ಅಷ್ಟು ಪರಿಣಾಮಕಾರಿ. ನಾಯಿ, ಕಾಗೆ ಮತ್ತಿತರ ಇನ್ನಿತರ ಪ್ರಾಣಿ-ಪಕ್ಷಿಗಳು ಆಕಸ್ಮಿಕವಾಗಿ ಈ ಉಂಡೆಗಳನ್ನು ತಿಂದರೂ ಸಾಯುವುದಿಲ್ಲ. ಇದೊಂದು ಬಹು ಅಚ್ಚರಿಯ ವಿಷಯ. ಗ್ಲಿರಿಸೀಡಿಯಾ ಮಿಶ್ರಿತ ಆಹಾರ ಸೇವಿಸುವುದರಿಂದ ಸಾಯುವ ಜೀವಿಗಳೆಂದರೆ ಇಲಿ-ಹೆಗ್ಗಣ, ಅಳಿಲುಗಳು ಮಾತ್ರ. ಇದು ಪ್ರಕೃತಿಯ ಅನೇಕ ವಿಸ್ಮಯಗಳಲ್ಲಿ ಒಂದು. ಗ್ರೀಕ್ ದೇಶದ ಜನ ಇದನ್ನು ಅರಿತು ಬಳಸುತ್ತಾ ಬಂದಿದ್ದಾರೆ.
ನೆನಪಿಡಿ: ಗ್ಲಿರಿಸೀಡಿಯಾ ಸೊಪ್ಪು ಮತ್ತು ಅನ್ನ ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಇದರ ಅಳತೆಯಲ್ಲಿ ವ್ಯತ್ಯಾಸವಾದರೂ ಪರಿಣಾಮವಾಗುವುದಿಲ್ಲ ಎಂದು ಹಿರಿಯ ಕೃಷಿವಿಜ್ಞಾನಿ ವಿ.ಪಿ. ಹೆಗ್ಡೆ ಹೇಳುತ್ತಾರೆ.
— ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.