ಕೇರಳಾದ್ಯಂತ ಹೆಚ್ಚುತ್ತಿರುವ ಬಾವಿ ದುರಂತಗಳು

ಮುಂಜಾಗ್ರತೆೆ ಕ್ರಮಕ್ಕೆ ಮುಂದಾದ ಪೊಲೀಸರು

Team Udayavani, Apr 29, 2019, 6:30 AM IST

bavi-samasye

ಕಾಸರಗೋಡು ಎ. 28: ಬಾವಿಗೆ ಬಿದ್ದು ಅಥವಾ ಬಾವಿಗೆ ಇಳಿದು ಮೇಲೆ ರಲು ಸಾಧ್ಯವಾಗದೆ ಮತ್ತು ಆಮ್ಲಜನಕ ಲಭಿಸದೆ ಉಸಿರುಗಟ್ಟಿ ಸಾವನ್ನಪ್ಪುವ ದುರಂತಗಳು ಕೇರಳದಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ ಬಾವಿಯಲ್ಲಿ ಸಂಭವಿಸುವ ದುರಂತಗಳ ಕುರಿತಾಗಿ ಜಾಗೃತಿ ಮೂಡಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಯಾವುದೇ ರೀತಿಯ ಮುಂಜಾಗ್ರತೆಗಳನ್ನು ಪಾಲಿಸದೆ ಬಾವಿಗಿಳಿಯುವುದೇ ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಪೊಲೀಸ್‌ ಮತ್ತು ಅಗ್ನಿಶಾಮಕ ದಳ ಹೇಳುತ್ತಿದೆ. ಈ ಹಿಂದೆ ರಾಟೆ ಮತ್ತು ಹಗ್ಗ ಬಳಸಿ ಬಾವಿಯಿಂದ ನೀರು ಸೇದಲಾಗುತ್ತಿತ್ತು.

ಕೊಡಪಾನ ಅಥವಾ ಬಾಲ್ದಿಯಿಂದಲೂ ನೀರು ತೆಗಯುತ್ತಿದ್ದಾಗ ನೀರಿನಲ್ಲಿ ಸಂಚಲನೆ ಉಂಟಾಗಿ ವಾಯು ಖಾಯಂ ಆಗಿ ಉಳಿದುಕೊಳ್ಳುವಂತೆ ಮಾಡುತ್ತಿತ್ತು.

ಮಾತ್ರವಲ್ಲದೆ ಮಾನವನ ಉಸಿರಿಗೆ ಅಗತ್ಯದ ಪ್ರಾಣವಾಯುವಾದ ಆಮ್ಲಜನಕ ಬಾವಿಯೊಳಗೆ ಹೆಚ್ಚುವಂತೆ ಮಾಡುತ್ತಿತ್ತು.

ಬಾವಿಯ ಅಡಿ ಭಾಗದಿಂದ ಉತ್ಪತ್ತಿಯಾಗುವ ವಿಷ ವಾಯು ಬಾವಿಯಿಂದ ಹೊರ ತಳ್ಳಲೂ ಇದು ಸಹಾಯವಾಗುತ್ತದೆ. ಅದರಿಂದಾಗಿ ಈ ಹಿಂದೆ ಬಾವಿಗಿಳಿಯುವ ವ್ಯಕ್ತಿಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುವುದು ಅತ್ಯಂತ ವಿರಳವಾಗಿತ್ತು.

ಈಗ ಹೆಚ್ಚಿನ ಬಾವಿಗಳಲ್ಲಿ ಮೋಟಾರು ಪಂಪು ಇರಿಸಿ ತೆಗೆಯುವುದರಿಂದಾಗಿ ಬಾವಿ ನೀರಿನಲ್ಲಿ ಸಂಚಲನ ಉಂಟಾಗದೆ ಅಡಿ ಭಾಗದಿಂದ ಬರುವ ವಿಷ ವಾಯು ಹೊರ ಹೋಗದೆ ಬಾವಿಯೊಳಗೆ ಉಳಿದುಕೊಳ್ಳುತ್ತದೆ.

ಅದರಿಂದಾಗಿ ಬಾವಿಯೊಳಗೆ ಪ್ರಾಣವಾಯುವಾದ ಆಮ್ಲಜನಕ ಉತ್ಪತ್ತಿಯಾಗದ ಸ್ಥಿತಿಯೂ ಉಂಟಾಗುತ್ತಿದೆ. ಅತೀ ಹೆಚ್ಚು ಆಳದ ಬಾವಿಗಳಲ್ಲಿ ಅತೀ ಹೆಚ್ಚು ವಿಷ ವಾಯು ಉತ್ಪತ್ತಿಯಾಗಿ ಅದು ಆಮ್ಲಜನಕದ ಕೊರತೆ ಸೃಷ್ಟಿಸುತ್ತಿದೆ. ಅದನ್ನು ಮನಗಾಣದೆ ಮತ್ತು ಅಗತ್ಯದ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಅಂತಹ ಬಾವಿಗೆ ಇಳಿಯುವವರನ್ನು ಒಂದೆಡೆ ಆಮ್ಲಜನಕದ ಕೊರತೆ ಮತ್ತು ಇನ್ನೊಂದೆಡೆ ವಿಷವಾಯು ಮಧ್ಯೆ ಸಿಲುಕಿ ಪ್ರಾಣಾಪಾಯಕ್ಕೂ ದಾರಿ ಮಾಡಿಕೊಡುತ್ತದೆ. ನೀರಿನ ಮೇಲೆ ಎತ್ತಿ ನಿಲ್ಲುವ ರೀತಿಯ ಮೋಟಾರುಗಳನ್ನು ಉಪಯೋಗಿಸುವುದರಿಂದ ಬಾವಿಗಳಲ್ಲಿ ವಿಷಕಾರಿಯಾದ ಕಾರ್ಬನ್‌ ಮೋನೋಕ್ಸೈಡ್‌ ಉತ್ಪತ್ತಿಯಾಗುತ್ತದೆ.

ಅಂತಹ ಬಾವಿಗೆ ಇಳಿದಲ್ಲಿ ಅದು ಪ್ರಾಣಾಪಾಯಕ್ಕೂ ದಾರಿ ಮಾಡಿಕೊಡುತ್ತದೆ. ಅದರಿಂದಾಗಿ ಬಾವಿಗೆ ಇಳಿಯುವ ಮೊದಲು ಅದರೊಳಗೆ ಆಮ್ಲಜನಕ ಸಾನಿಧ್ಯ ಇದೆಯೇ ಮತ್ತು ವಿಷಕಾರಿಯಾದ ಕಾರ್ಬನ್‌ ಮೋನೋಕ್ಸೈಡ್‌ ಹರಡಿದೆಯೇ ಎಂಬುವುದನ್ನು ಮೊದಲು ಖಾತರಿಪಡಿಸಿದ ಬಳಿಕವಷ್ಟೇ ಬಾವಿಗಿಳಿಯಬೇಕು.ಎಂದು ಪೊಲೀಸ್‌ ಇಲಾ ಖೆಯ ಫೇಸ್‌ಬುಕ್‌ ಪೇಜ್‌ ನಲ್ಲಿ ೆ ವಿವರಿಸಿದೆ.

ಗಮನಿಸಬೇಕಾದ ಅಂಶಗಳು
ಬಾವಿಗೆ ಇಳಿಯುವ ಮೊದಲು ಕಾಗದ ಅಥವಾ ಮೇಣದ ಬತ್ತಿ ಉರಿಸಿ ಹಗ್ಗದ ಸಹಾಯದಿಂದ ಅದನ್ನು ಬಾವಿಗಿಳಿಸಬೇಕು. ಬೆಂಕಿ ನಂದದೆ ಬಾವಿಯ ನೀರಿನ ಮಟ್ಟದ ತನಕ ತಲುಪಿದಲ್ಲಿ ಆ ಬಾವಿಯಲ್ಲಿ ಆಮ್ಲಜನಕವಿದೆ ಎಂಬುದನ್ನು ಖಾತರಿಪಡಿಸುತ್ತದೆ. ಉರಿಯುತ್ತಿರುವ ಮೇಣದ ಬತ್ತಿಯನ್ನು ಬಾವಿಗೆ ಇಳಿಸುತ್ತಿರುವಂತೆಯೇ ನಂದಿ ಹೋದಲ್ಲಿ ಆ ಭಾಗದಿಂದ ಕೆಳಭಾಗದಲ್ಲಿ ಆಮ್ಲಜನಕ ವಿಲ್ಲ ಎಂಬುದನ್ನು ಖಾತರಿಪಡಿಸಬಹುದು. ಬಾವಿಗೆ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದಲ್ಲಿಮೇಲ್ಗಡೆಯಿಂದ ಅವರ ಮೇಲೆ ನಿರಂತರವಾಗಿ ನೀರು ಸಿಂಪಡಿಸಬೇಕೆಂದು ಪೊಲೀಸ್‌ ಇಲಾಖೆ ಸಲಹೆ ನೀಡಿದೆ. ಬಾವಿಯೊಳಗೆ ಕಾರ್ಬನ್‌ ಮೋನೋಕ್ಸೈಡ್‌ ಅಂಶವಿದ್ದು ಅದು ಉಸಿರಾಟದ ವೇಳೆ ಶ್ವಾಸಕೋಶದೊಳಗೆ ಪ್ರವೇಶಿಸಿದ್ದಲ್ಲಿ ಪ್ರಜ್ಞೆ ಕಳೆದು ಕುಸಿದು ಬೀಳುವ ಸಾಧ್ಯತೆ ಉಂಟಾಗುತ್ತದೆ.

ಬಾವಿಯೊಳಗೆ ಆಮ್ಲಜನಕ
ಬಾವಿಯೊಳಗೆ ಆಮ್ಲಜನಕ ಲಭಿಸಬೇಕಾಗಿದ್ದಲ್ಲಿ ನೀರನ್ನು ಹಗ್ಗದ ಸಹಾಯದಿಂದ ಸೇದುವ ಮೂಲಕ ತೆಗೆಯಬೇಕು. ಹೀಗೆ ನೀರು ಸೇದುವ ವೇಳೆ ನೀರು ತುಂಬಿದ ಕೊಡವನ್ನು ಹಲವು ಬಾರಿ ನೀರಿನ ಮೇಲೆ ಕೆಳಗೆ ಮಾಡಿ ನೀರಿನಲ್ಲಿ ಸಂಚಲನ ಸೃಷ್ಟಿಸಬೇಕು. ಅಥವಾ ಸೇದಿದ ನೀರನ್ನು ಹಲವು ಬಾರಿ ಬಾವಿಗೆ ಒಯ್ಯಬೇಕು. ಅಥವಾ ಮರದ ಕೊಂಬೆ ಬಳಸಿ ಅದನ್ನು ಹಲವು ಬಾರಿ ನೀರಿನೊಳಗೆ ಇಳಿಸಿ ಮೇಲೆ ಕೆಳಗೆ ನೀರಿನ ಸಂಚಲನ ಸೃಷ್ಟಿಸಬೇಕು. ಅದರಿಂದ ಬಾವಿಯೊಳಗೆ ಆಮ್ಲಜನಕ ಸಾನಿಧ್ಯ ಹೆಚ್ಚಾಗುತ್ತದೆ. ಸೀಮೆ ಎಣ್ಣೆ ಚಾಲಿತ ಮೋಟಾರುಗಳನ್ನು ನೀರಿಗಾಗಿ ಮತ್ತು ಬಾವಿಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಬಳಸಬಾರದು.ಕುಸಿದು ಬಿದ್ದ ವ್ಯಕ್ತಿಯನ್ನು ತತ್‌ಕ್ಷಣ‌ ಮೇಲಕ್ಕೆತ್ತಿ ಅವರಿಗೆ ಚಿಕಿತ್ಸೆ ನೀಡದಿದ್ದಲ್ಲಿ ಪ್ರಾಣ ಹೋಗಬಹುದು ಎಂದು ಪೊಲೀಸ್‌ ಇಲಾ ಖೆಯ ಫೇಸ್‌ಬುಕ್‌ ಪೇಜ್‌ ಮುನ್ನೆಚ್ಚರಿಕೆ ನೀಡಿದೆ.

ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

mob

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.