ಪ್ರತಿವರ್ಷವೂ ಇಲ್ಲಿ ಟ್ಯಾಂಕರ್ ನೀರೇ ಗತಿ!
ಶಿರೂರು -ಕಳಿಹಿತ್ಲು ಹಡವಿನಕೋಣೆಯಲ್ಲಿ ಬಿಗಡಾಯಿಸಿದ ಸ್ಥಿತಿ
Team Udayavani, Apr 29, 2019, 6:30 AM IST
ಬೈಂದೂರು: ಇಲ್ಲಿನ ಜನರಿಗೆ ಬೇಸಗೆ ಬಂದರೆ ಸಾಕು ಊರು ಬಿಟ್ಟು ಹೋಗಬೇಕೆನ್ನುವ ಪರಿಸ್ಥಿತಿ ಇದೆ. ಉಪ್ಪು ನೀರಿನ ಪ್ರದೇಶವಾದ್ದರಿಂದ ಮಳೆಗಾದಲ್ಲೂ ಇಲ್ಲಿ ಸಂಕಷ್ಟ ತಪ್ಪಿಲ್ಲ. ಜಿಲ್ಲೆಯ ಅತೀ ದೊಡ್ಡ ಗ್ರಾ.ಪಂ ವ್ಯಾಪ್ತಿಯಾಗಿರುವ ಶಿರೂರಿನ ಕಳಿಹಿತ್ಲು,ಕರಾವಳಿ,ದೊಂಬೆ, ಬುಕಾರಿ ಕಾಲನಿ, ಹಡವಿನಕೋಣೆ, ಕೆಸರಕೋಡಿ, ಕರಿಕಟ್ಟೆ, ಆರ್ಮಿ, ಮುಂತಾದ ಭಾಗಗಳು ಪ್ರತಿವರ್ಷವೂ ನೀರಿಲ್ಲದೆ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ.
ಈಡೇರದ ಶಾಶ್ವತ ಯೋಜನೆಗಳು
ಶಿರೂರಿನ ಈ ಭಾಗದಲ್ಲಿ ಪ್ರತಿ ಬೇಸಗೆಯಲ್ಲಿ ನೀರಿಗೆ ಕಾಯಬೇಕು. ಶಾಶ್ವತ ಯೋಜನೆಗೆ ಸಂಬಂಧಪಟ್ಟ ಯಾರೂ ಗಮನಕೊಡದ್ದರಿಂದ ಜನರು ಸಂಕಟಪಡುವಂತಾಗದೆ. ಇಲ್ಲಿ 25,000ರಿಂದ 30,000 ಜನಸಂಖ್ಯೆಯಿದೆ. 34 ಬೋರ್‌ವೆಲ್ 28 ತೆರೆದ ಬಾವಿಗಳಿದ್ದರೂ ನೀರಿನ ಸಮಸ್ಯೆ ಕಾಡುತ್ತಲೇ ಇದೆ. ಆದರೆ ಇಲ್ಲಿಗೆ ಹೊರಗಡೆಯಿಂದ ನೀರು ಸರಬರಾಜೂ ಆಗುತ್ತಿಲ್ಲ. ಊರನ್ನು ರೈಲ್ವೇ ಮಾರ್ಗ ಬೇರ್ಪಡಿಸಿದಂತೆ ಇರುವುದರಿಂದ ಪೈಪ್‌ಲೈನ್ ಹಾಕಲು ಆಗುತ್ತಿಲ್ಲ. 2015ರಲ್ಲಿ ಶಿರೂರಿಗೆ ಆಗಮಿಸಿದ ಅಂದಿನ ಹಾಗೂ ಪಂಚಾಯತ್‌ರಾಜ್ ಸಚಿವರು ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಸಿಹಿ ನೀರನ್ನಾಗಿ ಮಾರ್ಪಡಿಸುವ ಯೋಜನೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಶಿರೂರು, ಪಡುವರಿ, ಯಡ್ತರೆ, ಬೈಂದೂರು ಸೇರಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಹತ್ತು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ.
ಬತ್ತಿದ ನದಿ, ಕೆರೆಗಳು
ಶಿರೂರಿನಲ್ಲಿ ಮೂರು ಕೆರೆಗಳು, ನಾಲ್ಕು ಹೊಳೆ, ತೊರೆಗಳು ಈ ವರ್ಷ ಬಹಳ ಬೇಗ ಬತ್ತಿಹೋಗಿವೆ. ಅಂತರ್ಜಲ ವೃದ್ಧಿಗೆ ಚೆಕ್‌ಡ್ಯಾಂ, ಕೆರೆಗಳ ಹೂಳೆತ್ತುವುದು ಹಾಗೂ ಬಾವಿ ನಿರ್ಮಾಣದ ಬಗ್ಗೆ ಒತ್ತು ಕೊಡಬೇಕಾಗಿದೆ. ಪ್ರತಿವರ್ಷ ಗ್ರಾ.ಪಂ. ಮಾತ್ರವಲ್ಲದೆ ಸ್ಥಳೀಯ ದಾನಿಗಳೂ ಉಚಿತ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡುತ್ತಾರೆ.
ಈ ವರ್ಷ ಪಂಚಾಯತ್ ಸಹಕಾರವಿಲ್ಲದೆ ದಾನಿಗಳಿಂದ 2 ಬೋರ್‌ವೆàಲ್ ದುರಸ್ತಿ, ಐದಕ್ಕೂ ಅಧಿಕ ಬಾವಿ ದುರಸ್ತಿ ಮಾಡಲಾಗಿದೆ. ಬತ್ತಿಹೋದ ಸರಕಾರಿ ಬಾವಿಗಳ ಹೂಳು ತೆಗೆದು ರಿಂಗ್ ಅಳ ವಡಿಸುವ ಕಾರ್ಯ ಎಂ.ಎಂ. ಹೌಸ್ ವತಿಯಿಂದ ನಡೆಯುತ್ತಿದೆ.
ವಿಶೇಷ ಮುತುವರ್ಜಿ
ಶಿರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. 20 ಟ್ರಿಪ್‌ನಂತೆ ಪ್ರತಿದಿನ 80 ಸಾವಿರ ಲೀಟರ್ ನೀರು ಪೂರೈಕೆಯಾಗುತ್ತಿದೆ. ಪಂಚಾಯತ್ ನೀರಿನ ಸಮಸ್ಯೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಶ್ವತ ಯೋಜನೆಗಳ ಬಗ್ಗೆ ಮುಂದಿನ ದಿನದಲ್ಲಿ ಪ್ರಯತ್ನಿಸಲಾಗುವುದು
-ದಿಲ್‌ಶಾದ್ ಬೇಗಂ, ಅಧ್ಯಕ್ಷರು ಗ್ರಾ.ಪಂ. ಶಿರೂರು
ಶಾಶ್ವತ ಯೋಜನೆ ಅಗತ್ಯ
ಕುಡಿಯುವ ನೀರು ಪ್ರತಿ ವರ್ಷದ ಸಮಸ್ಯೆ. ಪಂಚಾಯತ್ ಸಮರ್ಪಕ ಹಾಗೂ ಶಾಶ್ವತ ಪರಿಹಾರದ ಬಗ್ಗೆ ಚಿಂತಿಸಬೇಕು. ಕಳಿಹಿತ್ಲು, ಮುದ್ರಮಕ್ಕಿ, ಹಡವಿನಕೋಣೆ ಮುಂತಾದ ಕಡೆಗಳಲ್ಲಿ ಉಪ್ಪು ನೀರಿನಿಂದಾವೃತವಾದ ಪ್ರದೇಶಗಳಿಗೆ ಪ್ರಾಧಾನ್ಯ ನೀಡಬೇಕು. ನೀರು ಪೋಲಾಗುವ ಬಗ್ಗೆ ಗಮನಹರಿಸಬೇಕು. ಶಾಶ್ವತ ಯೋಜನೆ ಬಗ್ಗೆ ಕ್ರಿಯಾತ್ಮಕ ಚಿಂತನೆ ಬೇಕು.
-ರಾಘು, ಮುದ್ರಮಕ್ಕಿ
ಜನರ ಬೇಡಿಕೆಗಳು
– ಪ್ರತಿವರ್ಷ ಸಮಸ್ಯೆ ಕಾಡದಂತೆ ಶಾಶ್ವತ ಪರಿಹಾರ ಬೇಕು.
– ಪೈಪ್‌ಲೈನ್ ದುರಸ್ತಿ ಮೂಲಕ ಮನೆ ಮನೆಗೆ ನಳ್ಳಿ ಕಲ್ಪಿಸಬೇಕು.
– ಟ್ಯಾಂಕರ್ ವ್ಯವಸ್ಥೆ ಸರಿಪಡಿಸಬೇಕು
– ಊರಿನ ತೋಡು, ಕೆರೆ, ಹಳ್ಳಗಳ ಹೂಳೆತ್ತಬೇಕು.
– ಪ್ರತಿ ಮನೆಯಲ್ಲಿ ಇಂಗುಗುಂಡಿ ನಿರ್ಮಿಸಬೇಕು.
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.