LIVE Updates: ಲೋಕ ಸಮರ-19: ಪ.ಬಂಗಾಲದಲ್ಲಿ 66% ; ದೇಶದಲ್ಲಿ ಒಟ್ಟಾರೆ 49.53% ಮತದಾನ
ಪ.ಬಂಗಾಲ, ಜಾರ್ಖಂಡ್, ರಾಜಸ್ಥಾನ, ಮ.ಪ್ರದೇಶಗಳಲ್ಲಿ ಉತ್ತಮ ಮತದಾನ ; 8 ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗೆ ವೋಟಿಂಗ್ ; 943 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Team Udayavani, Apr 29, 2019, 9:34 AM IST
ನವದೆಹಲಿ: ಲೋಕಸಭಾ ಮಹಾಸಮರದ ನಾಲ್ಕನೇ ಹಂತದ ಮತದಾನ ಸೋಮವಾರದಂದು ದೇಶದ ವಿವಿಧ ರಾಜ್ಯಗಳಲ್ಲಿ ಬಿರುಸಿನಿಂದ ನಡೆಯುತ್ತಿದೆ.
ಜಮ್ಮು ಕಾಶ್ಮೀರದ ಅನಂತನಾಗ್ ಕ್ಷೇತ್ರವೂ ಸೇರಿದಂತೆ ದೇಶದೆಲ್ಲೆಡೆ ಒಟ್ಟು ಎಂಟು ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗಾಗಿ ಈ ಹಂತದಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 943 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು ಆ ಭಾಗಗಳ ಮತದಾರರು ಇಂದು ನಿರ್ಧರಿಸಲಿದ್ದಾರೆ.
ನಾಲ್ಕನೇ ಹಂತದ ಮತದಾನದ ಹೈಲೈಟ್ಸ್ ಇಲ್ಲಿದೆ…
ಮಧ್ಯಾಹ್ನ 3.00 ಗಂಟೆಗಳವರೆಗಿನ ವರದಿಗಳ ಪ್ರಕಾರ ದೇಶದೆಲ್ಲೆಡೆ ನಾಲ್ಕನೇ ಹಂತದಲ್ಲಿ 49.53% ಮತದಾನವಾಗಿರುವ ಕುರಿತು ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಉತ್ಸಾಹ ಜೋರಾಗಿದ್ದು ಅಲ್ಲಿ ಇದುವರೆಗೆ 66.01% ಮತದಾನ ದಾಖಲುಗೊಂಡಿದೆ.
ಬಿಹಾರದಲ್ಲಿ 44.23%, ಮಧ್ಯಪ್ರದೇಶದಲ್ಲಿ 55.22%, ಮಹಾರಾಷ್ಟ್ರದಲ್ಲಿ 41.16%, ಜಮ್ಮು ಮತ್ತು ಕಾಶ್ಮೀರದಲ್ಲಿ 8.42%, ಜಾರ್ಖಂಡ್ ನಲ್ಲಿ 56.37%, ರಾಜಸ್ಥಾನದಲ್ಲಿ 54.16%, ಉತ್ತರಪ್ರದೇಶದಲ್ಲಿ 44.16%, ಪಶ್ಚಿಮ ಬಂಗಾಲದಲ್ಲಿ 66.01% ಹಾಗೂ ಒಡಿಸ್ಸಾದಲ್ಲಿ 51.54% ಮತದಾನವಾಗಿದೆ.
– ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ ಮೂರು ಮತದಾನ ಕೇಂದ್ರಗಳಿಗೆ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಕುರಿತಾಗಿ ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಸಹಾಯಕ್ಕಾಗಿ ಯಾಚಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ದುಷ್ಕರ್ಮಿಗಳು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು ಮತ್ತು ಕರ್ತವ್ಯದಲ್ಲಿದ್ದ ಕೆಲವು ಪೊಲೀಸರೂ ಸಹ ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಸ್ಥಳಿಯರಿಂದ ಕೇಳಿಬಂದಿದೆ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
– ನಾಲ್ಕನೇ ಹಂತದ ಲೋಕ ಸಮರದಲ್ಲಿ ಮಧ್ಯಾಹ್ನದವರೆಗೆ ಒಟ್ಟಾರೆ 38.63% ಮತದಾನ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
– ಬಿಹಾರದಲ್ಲಿ 37.71%, ಮಧ್ಯಪ್ರದೇಶದಲ್ಲಿ 43.44%, ಮಹಾರಾಷ್ಟ್ರದಲ್ಲಿ 29.93%, ಜಮ್ಮು ಮತ್ತು ಕಾಶ್ಮೀರದಲ್ಲಿ 06.66%, ಜಾರ್ಖಂಡ್ ನಲ್ಲಿ 44.90%, ರಾಜಸ್ಥಾನದಲ್ಲಿ 44.62%, ಉತ್ತರಪ್ರದೇಶದಲ್ಲಿ 34.42%, ಪಶ್ಚಿಮ ಬಂಗಾಲದಲ್ಲಿ 52.37% ಹಾಗೂ ಒಡಿಸ್ಸಾದಲ್ಲಿ 35.79% ಮತದಾನವಾಗಿದೆ.
– ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಸಹಿತ ಜುಹೂವಿನಲ್ಲಿರುವ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.
Mumbai: Actors Amitabh Bachchan, Jaya Bachchan, Abhishek Bachchan & Aishwarya Rai Bachchan cast their vote at a polling booth in Juhu. #LokSabhaElections2019 pic.twitter.com/BRAxZr1Jkk
— ANI (@ANI) April 29, 2019
– ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಪತ್ನಿ ರಶ್ಮಿ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಅವರೊಂದಿಗೆ ಮುಂಬಯಿ ಗಾಂಧಿನಗರ ಕ್ಷೇತ್ರದಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂನಮ್ ಮಹಾಜನ್ ಅವರು ಜೊತೆಯಲ್ಲಿದ್ದರು.
Maharashtra: Shiv Sena Chief Uddhav Thackeray, his wife Rashmi Thackeray and son Aditya Thackeray after casting their vote at a polling booth in Gandhi Nagar, Mumbai. Poonam Mahajan BJP’s candidate from Mumbai North Central LS seat also present. #LokSabhaElections2019 pic.twitter.com/vgsQjca0a1
— ANI (@ANI) April 29, 2019
– ಪಶ್ಚಿಮ ಬಂಗಾಲ ಮತದಾನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿದೆ. ಈ ನಿಯೋಗದಲ್ಲಿ ಮುಕ್ತಾರ್ ಅಬ್ಟಾಸ್ ನಖ್ವೀ, ವಿಜಯ್ ಗೋಯಲ್, ಮತ್ತು ಅನಿಲ್ ಬಲುನಿ ಇರಲಿದ್ದಾರೆ.
– ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜೋಧ್ ಪುರದಲ್ಲಿ ಮತ ಚಲಾಯಿಸಿದರು.
– ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯಾ ವಿರುದ್ಧ ತೃಣಮೂಲ ಕಾಂಗ್ರೆಸ್ ಲಿಖೀತ ದೂರೊಂದನ್ನು ಸಲ್ಲಿಸಿದೆ ಮತ್ತು ಜೆಮುವ್ವಾದಲ್ಲಿರುವ ಮತದಾನ ಕೇಂದ್ರದ ಟಿಎಂಸಿ ಬೂತ್ ಏಜೆಂಟ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.
– ನಾಲ್ಕನೇ ಹಂತದ ಲೋಕ ಸಮರದಲ್ಲಿ 11 ಗಂಟೆಯವರೆಗೆ ಒಟ್ಟಾರೆ 14.59% ಮತದಾನ ಆಗಿದೆ ಎಂದು ತಿಳಿದುಬಂದಿದೆ.
– ಬಿಹಾರದಲ್ಲಿ 13.95%, ಮಧ್ಯಪ್ರದೇಶದಲ್ಲಿ 18.66%, ಮಹಾರಾಷ್ಟ್ರದಲ್ಲಿ 8.15%, ಜಮ್ಮು ಮತ್ತು ಕಾಶ್ಮೀರದಲ್ಲಿ 3.69%, ಜಾರ್ಖಂಡ್ ನಲ್ಲಿ 20.87%, ರಾಜಸ್ಥಾನದಲ್ಲಿ 15.08%, ಉತ್ತರಪ್ರದೇಶದಲ್ಲಿ 17.69%, ಪಶ್ಚಿಮ ಬಂಗಾಲದಲ್ಲಿ 21.69% ಹಾಗೂ ಒಡಿಸ್ಸಾದಲ್ಲಿ 10% ಮತದಾನವಾಗಿದೆ.
– ಮುಂಬಯಿಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಕುಟುಂಬ ಸದಸ್ಯರು ಮತದಾನ ಕೇಂದ್ರಕ್ಕೆ ಮತಗಟ್ಟೆ ಸಿಬ್ಬಂದಿ ನೆರವಿನಿಂದ ಮತದಾನ ಮಾಡಲು ಕರೆದೊಯ್ಯುತ್ತಿರುವುದು.
– ನಟಿ ಪ್ರಿಯಾಂಕ ಛೋಪ್ರಾ ಜೊನಾಸ್ ಅವರು ಮುಂಬಯಿಯಲ್ಲಿ ಇಂದು ತಮ್ಮ ಮತವನ್ನು ಚಲಾಯಿಸಿದರು.
– ಬೆಳಿಗ್ಗೆ 10ಗಂಟೆಯವರೆಗೆ ಒಟ್ಟಾರೆ 10.42% ಮತದಾನ ಆಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
– ಬಿಹಾರದಲ್ಲಿ 10.76%, ಮಧ್ಯಪ್ರದೇಶದಲ್ಲಿ 11.45%, ಮಹಾರಾಷ್ಟ್ರದಲ್ಲಿ 6.66%, ಜಮ್ಮು ಮತ್ತು ಕಾಶ್ಮೀರದಲ್ಲಿ 0.68%, ಜಾರ್ಖಂಡ್ ನಲ್ಲಿ 12%, ರಾಜಸ್ಥಾನದಲ್ಲಿ 12.22%, ಉತ್ತರಪ್ರದೇಶದಲ್ಲಿ 9.87%, ಪಶ್ಚಿಮ ಬಂಗಾಲದಲ್ಲಿ 16.89% ಹಾಗೂ ಒಡಿಸ್ಸಾದಲ್ಲಿ 8.34% ಮತದಾನವಾಗಿದೆ.
– ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮತದಾನ ಮಾಡಿದರು. ಮತ್ತು ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಅವಶ್ವವಾಗಿ ಚಲಾಯಿಸುವಂತೆ ನಟಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.
– ಪಶ್ವಿಮ ಬಂಗಾಲದ ಅಸಾನ್ಸೋಲ್ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅಸಾನ್ಸೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರ ಕಾರನ್ನು ಸಹ ಟಿಎಂಸಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ.
#WATCH Clash between TMC workers and security personnel at polling booth number 199 in Asansol. A TMC polling agent said, ‘no BJP polling agent was present at the booth.’ BJP MP candidate from Asansol, Babul Supriyo’s car was also vandalised outside the polling station. pic.twitter.com/goOmFRG96L
— ANI (@ANI) April 29, 2019
– ಪಶ್ಚಿಮ ಬಂಗಾಲದ ಜೆಮುವ್ವ ಎಂಬಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ. ಆ ಭಾಗದ ಮತದಾರರು ಮತಬಹಿಷ್ಕಾರ ಮಾಡಿರುವ ವಿಷಯಕ್ಕೆ ಈ ಘರ್ಷಣೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣಾ ದಳ ದೌಡಾಯಿಸಿದೆ.
– 09 ಗಂಟೆಯವರೆಗೆ ಒಟ್ಟಾರೆ 10.25% ಮತದಾನ ಆಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
– ಬಿಹಾರದಲ್ಲಿ 10.76%, ಮಧ್ಯಪ್ರದೇಶದಲ್ಲಿ 11.11%, ಮಹಾರಾಷ್ಟ್ರದಲ್ಲಿ 5.87%, ಜಮ್ಮು ಮತ್ತು ಕಾಶ್ಮೀರದಲ್ಲಿ 0.61%, ಜಾರ್ಖಂಡ್ ನಲ್ಲಿ 12%, ರಾಜಸ್ಥಾನದಲ್ಲಿ 11.20%, ಉತ್ತರಪ್ರದೇಶದಲ್ಲಿ 9.01%, ಪಶ್ಚಿಮ ಬಂಗಾಲದಲ್ಲಿ 16.89% ಹಾಗೂ ಒಡಿಸ್ಸಾದಲ್ಲಿ 8.34% ಮತದಾನವಾಗಿದೆ.
– ನಾಲ್ಕನೇ ಹಂತದಲ್ಲಿ ಇದುವರೆಗೆ ಮತಚಲಾಯಿಸಿದ ಪ್ರಮುಖರು: ಗಿರಿರಾಜ್ ಸಿಂಗ್, ಉದ್ಯಮಿ ಅನಿಲ್ ಅಂಬಾನಿ, ರಾಜಸ್ಥಾನದ ಮಾಜೀ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಉತ್ತರ ಮುಂಬಯಿ ಬಿಜೆಪಿ ಅಭ್ಯರ್ಥಿ ಪೂನಮ್ ಮಹಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್, ಬಾಲಿವುಡ್ ನಟಿ ರೇಖಾ, ಗೋರಖ್ ಪುರದ ಬಿಜೆಪಿ ಅಭ್ಯರ್ಥಿ ಭೋಜ್ ಪುರಿ ನಟ ರವಿಕಿಶನ್, ನಟ ಪರೇಶ್ ರಾವಲ್ ದಂಪತಿ, ಬೆಗುಸರಾಯ್ ನಿಂದ ಸ್ಪರ್ಧಿಸುತ್ತಿರುವ ಕನ್ಹಯ್ಯಾ ಕುಮಾರ್, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಹಿರಿಯ ನಟಿ ಶುಭಾ ಕೋಟೆ, ಉತ್ತರ ಮುಂಬಯಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಟಿ ಊರ್ಮಿಳಾ ಮಾತೊಂಡ್ಕರ್, ಬಿಜೆಪಿಯ ಗೋಪಾಲ್ ಶೆಟ್ಟಿ ಸೇರಿದಂತೆ ಹಲವರು ಇದುವರೆಗೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಾರೆ.
– ವಾಣಿಜ್ಯ ನಗರಿ ಮುಂಬಯಿಯ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳಿಗೆ ಇಂದೇ ಮತದಾನ ನಡೆಯುತ್ತಿದೆ. ಸದಾ ಜಂಜಾಟದಲ್ಲೇ ಇರುವ ಮಹಾನಗರಿ ಮುಂಬಯಿಯ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
– ಆದಿ ಗೋದ್ರೇಜ್, ಕುಮಾರ ಮಂಗಲಂ ಬಿರ್ಲಾ, ಅನಿಲ್ ಅಂಬಾನಿ, ಮುಖೇಶ್ ಅಂಬಾನಿ, ಪ್ರಿಯಾ ದತ್, ಉದ್ಭವ್ ಠಾಕ್ರೆ, ರಾಮದಾಸ ಅಠಾವಳೆ, ಮಿಲಿಂದ್ ದೇವೋರಾ ಸೇರಿದಂತೆ ಹಲವು ಪ್ರಮುಖರು ಮುಂಬಯಿಯಲ್ಲಿಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
– ರಾಜಸ್ಥಾನದ 13 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಉತ್ತರ ಮುಂಬಯಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಊರ್ಮಿಳಾ ಮಾತೊಂಡ್ಕರ್ ಮತ್ತು ಬಿಜೆಪಿಯ ಗೋಪಾಲ ಶೆಟ್ಟಿ ನಡುವಿನ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ, ಕಾನ್ಪುರದಲ್ಲಿ ಕಾಂಗ್ರೆಸ್ ನ ಶ್ರೀಪ್ರಕಾಶ್ ಜೈಸ್ವಾಲ್, ಬಿಜೆಪಿಯ ಸತ್ಯದೇವ್ ಪಚೌರಿ ಮತ್ತು ಸಮಾಜವಾದಿ ಪಕ್ಷದ ರಾಮ್ ಕುಮಾರ್ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.
– ಇನ್ನು ದಕ್ಷಿಣ ಮುಂಬಯಿಯಲ್ಲಿ ಕಾಂಗ್ರೆಸ್ ನ ಮಿಲಿಂದ್ ದೇವೊರಾ ಹಾಗೂ ಶಿವಸೇನೆಯ ಅರವಿಂದ್ ಸಾವಂತ್ ನಡುವೆ ನೇರ ಪೈಪೋಟಿ ಇದೆ.
– ಇನ್ನು ಬಿಹಾರದ ಬೆಗುಸರಾಯ್ ಕ್ಷೇತ್ರದಲ್ಲಿ ಕನ್ಹಯ್ಯಾ ಕುಮಾರ್ ಅವರು ಸಿಪಿಐ (ಎಂ)ನಿಂದ ಕಣಕ್ಕಿಳಿದಿದ್ದು ಅವರು ಎದುರಾಳಿಯಾಗಿ ಬಿಜೆಪಿಯ ಗಿರಿರಾಜ್ ಸಿಂಗ್ ಇದ್ದಾರೆ ಹಾಗೂ ಇವರಿಗೆ ಆರ್.ಜೆ.ಡಿ.ಯ ತನ್ವೀರ್ ಹಸನ್ ಸ್ಪರ್ಧೆ ನೀಡುತ್ತಿದ್ದಾರೆ.
– ಇನ್ನು ಪಶ್ಚಿಮ ಬಂಗಾಲದ ಬಿರ್ಭುಮ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ನ ಸತಾಬ್ದಿ ರಾಯ್ ಮತ್ತು ಬಿಜೆಪಿಯ ದೂಧ್ ಕುಮಾರ್ ಮಂಡಲ್ ನಡುವೆ ಹಣಾಹಣಿ ಇದೆ.
#Bihar: CPI candidate from Begusarai, Kanhaiya Kumar after casting his vote at a polling centre in Begusarai. #LokSabhaElections2019 pic.twitter.com/zL57N8dUDB
— ANI (@ANI) April 29, 2019
– ಉತ್ತರಪ್ರದೇಶದ ಉನ್ನಾವ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.
#LokSabhaElections2019 : BJP MP candidate from Unnao, Sakshi Maharaj casts his vote at a polling station in Unnao. pic.twitter.com/qggGGXlgbS
— ANI UP (@ANINewsUP) April 29, 2019
– ಉತ್ತರಪ್ರದೇಶದ ಫರೂಕಾಬಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲ್ಮಾನ್ ಖುರ್ಷಿದ್ ಅವರು ತಮ್ಮ ಹಕ್ಕನ್ನು ಚಲಾಯಿಸುತ್ತಿರುವುದು.
#LokSabhaElections2019: Congress MP candidate from Farrukhabad, Salman Khurshid casts his vote at a polling booth in the city. pic.twitter.com/8k2WYiXgTa
— ANI UP (@ANINewsUP) April 29, 2019
– ಉದ್ಯಮಿ ಅನಿಲ್ ಅಂಬಾನಿ ತಮ್ಮ ಮತಚಲಾಯಿಸಿದ ಬಳಿಕ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದು ಹೀಗೆ.
Mumbai: Anil Ambani casts his vote at voting centre number 216 at GD Somani School in Cuffe Parade. #LokSabhaElections2019 pic.twitter.com/II9VZJvjmV
— ANI (@ANI) April 29, 2019
– ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.
#Mumbai: Reserve Bank of India (RBI) Governor Shaktikanta Das casts his vote at polling booth number 40 & 41 at Peddar Road. #LokSabhaElections2019 pic.twitter.com/i2TFjtuJxP
— ANI (@ANI) April 29, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.