ಸುಳ್ಯದಲ್ಲೂ ಅಡಿಕೆ ಹಿಂಗಾರ ಒಣಗುವ ರೋಗ
ಏರಿದ ತಾಪಮಾನದಿಂದ ಹೋಮಿಯೋಸ್ಟಟಿಸ್ ಹಾವಳಿ: ಬೆಳವಣಿಗೆ ಸ್ಥಗಿತ
Team Udayavani, Apr 29, 2019, 9:44 AM IST
ರೋಗ ತಗಲಿದ ಅಡಕೆ ಗಿಡಗಳು.
ಸುಳ್ಯ ಎ. 28: ವಿದೇಶಗಳಲ್ಲಿ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡಿದ್ದ ಹೋಮಿಯೋಸ್ಟಟಿಸ್ ರೋಗ ಈಗ ಸುಳ್ಯ ತಾಲೂಕಿನ ಹಲವು ತೋಟಗಳಿಗೂ ವಕ್ಕರಿಸಿದೆ. ಧಾರಣೆ ಏರಿಳಿಕೆ, ನೀರಿನ ಕೊರತೆ, ಹಳದಿ ರೋಗದಿಂದ ತತ್ತರಿಸಿದ ಬೆಳೆಗಾರರಿಗೆ ಈ ಹೊಸ ರೋಗ ಮತ್ತಷ್ಟು ಆತಂಕ ಮೂಡಿಸಿದೆ.
ತಾಪಮಾನದಲ್ಲಿ ಏರಿಕೆ ಉಂಟಾದಾಗ ಗಿಡಗಳು ತಮ್ಮ ಸ್ವಾಭಾವಿಕ ಕ್ರಿಯೆಯನ್ನು ಸ್ಥಗಿತಗೊಳಿಸುತ್ತವೆ. ಆರೋಗ್ಯವಂತ ಅಡಿಕೆ ಮರ ಎಪ್ರಿಲ್ – ಮೇ ತಿಂಗಳ ವೇಳೆ ಹಿಂಗಾರ ಒಡೆದು ಎಳೆಯ ಅಡಿಕೆ ಬೆಳೆಯಲು ಆರಂಭಿಸುತ್ತದೆ. ಆದರೆ, ಹೋಮಿಯೋಸ್ಟಟಿಸ್ ಬಾಧಿತ ಅಡಿಕೆ ಮರದಲ್ಲಿ ನಿಗದಿತ ಸಮಯಕ್ಕೂ ಮೊದಲೇ ಹಿಂಗಾರ ಒಡೆದು ಹಾಳೆ ಸೀಳಿ ಹೊರಬರುತ್ತದೆ. ಅನಂತರ ಈ ಹಿಂಗಾರ ಬಿಸಿಲ ತಾಪಮಾನ ಸಹಿಸದೆ ಒಣಗಿ ಹೋಗುವುದು ರೋಗ ಲಕ್ಷಣ. 1980ರಲ್ಲಿ ಮಲೇಷ್ಯ, ಸಿಂಗಾಪುರಗಳಲ್ಲಿ ಈ ರೋಗ ವ್ಯಾಪಕವಾಗಿತ್ತು. ರೋಗ ನಿಯಂತ್ರಣಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ.
ಏರಿದ ತಾಪಮಾನ:
ಅಡಿಕೆ ಮರ 14ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಅದಕ್ಕಿಂತ ಜಾಸ್ತಿಯಾದರೆ ಸಮಸ್ಯೆ. ಕರಾವಳಿಯಲ್ಲಿ ಪ್ರಸ್ತುತ 30ರಿಂದ 36 ಡಿಗ್ರಿ ಸೆ. ತಾಪಮಾನವಿದೆ. ನೀರಿನ ಕೊರತೆಯೂ ಸಾಕಷ್ಟಿದೆ. ಉರಿ ಬಿಸಿಲಿನ ವಾತಾವರಣ ಅಡಿಕೆ ಗಿಡಗಳ ಸ್ವಾಭಾವಿಕ ಕ್ರಿಯೆಗಳಿಗೆ ತೊಡಕಾಗಿದೆ. ಹೀಗಾಗಿ, ಹೋಮಿಯೋಸ್ಟಟಿಸ್ ರೋಗ ತಗಲಿದೆ. ಇದು ಅಡಕೆ ಗಿಡಗಳಿಗೆ ಮಾತ್ರವಲ್ಲ, ಹಸಿರೆಲೆ ಹೊಂದಿರುವ ಎಲ್ಲ ಸಸ್ಯವರ್ಗಕ್ಕೂ ಬಾಧಿಸಬಹುದು ಎನ್ನುತ್ತಾರೆ ಪರಿಸರ ವಿಜ್ಞಾನ ಸಂಶೋಧಕಿ ನಿಖೀತಾ.
ನೀರಿನ ಕೊರತೆ:
ಫಸಲು ನೀಡುವ ಅಡಿಕೆ ಮರಕ್ಕೆ ದಿನಕ್ಕೆ 18ರಿಂದ 20 ಲೀ. ನೀರು ಬೇಕು. ಅವೆಲ್ಲವೂ ಕೆರೆ, ಬಾವಿ, ಹೊಳೆ ಅಥವಾ ಕೊಳವೆಬಾವಿ ಮೂಲಕ ಭರಿಸುವುದು ವಾಡಿಕೆ. ಆ ನೀರಿನ ಮೂಲಗಳೇ ಬತ್ತುತ್ತಿರುವುದರಿಂದ ನೀರಿನ ಕೊರತೆ ಉಂಟಾಗಿ ರೋಗ ಹೆಚ್ಚಲು ಕಾರಣ. ಜತೆಗೆ ಲಭ್ಯ ಇರುವ ನೀರುಣಿಸಲು ವಿದ್ಯುತ್ ಸಮಸ್ಯೆ ಕಾಡಿದೆ.
ತಾಲೂಕಿನ ಒಟ್ಟು ಅಡಿಕೆ ಬೆಳೆಯುವ ಪ್ರದೇಶ 28,096 ಎಕ್ರೆ. ತೋಟಗಾರಿಕಾ ಇಲಾಖೆಯ ಪ್ರಕಾರ ಹೆಕ್ಟೇರಿಗೆ 20 ಕ್ವಿಂಟಲ್ ಅಡಿಕೆ ಸಿಕ್ಕಿದರೆ, ಒಟ್ಟು ಹೆಕ್ಟೇರಿಗೆ 5,61,920 ಕ್ವಿಂಟಲ್ ದೊರೆಯಬೇಕು. ಆದರೆ ರೋಗಬಾಧೆ, ನೀರಿನ ಕೊರತೆ ಇತ್ಯಾದಿಗಳಿಂದ ನಿರೀಕ್ಷಿತ ಫಸಲು ಬೆಳೆಗಾರರಿಗೆ ಸಿಗುತ್ತಿಲ್ಲ.ಸುಳ್ಯದಲ್ಲೂ ಅಡಿಕೆ ಹಿಂಗಾರ ಒಣಗುವ ರೋಗ ಏರಿದ ತಾಪಮಾನದಿಂದ ಹೋಮಿಯೋಸ್ಟಟಿಸ್ ಹಾವಳಿ ಬೆಳವಣಿಗೆ ಸ್ಥಗಿತ.
ಬಿಸಿಲು ಸಹಿಸಲಾಗದು ಈ ಬಾರಿ ಅಡಿಕೆ ತೋಟಕ್ಕೆ ನೀರಿನ ಅಭಾವದ ಜತೆಗೆ ತಾಪಮಾನದ ಬಿಸಿಯೂ ತಟ್ಟಿದೆ. ಹೀಗಾಗಿ ಹಲವೆಡೆ ಹಿಂಗಾರ ಕರಟಿ ಹೋಗಿದೆ. ಇದರಿಂದ ಈ ಬಾರಿ ನಿರೀಕ್ಷಿತ ಫಸಲು ಸಿಗಲಾರದು.- ದೇರಣ್ಣ ಸುಳ್ಯ ,ಅಡಿಕೆ ಬೆಳೆಗಾರ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.