ಸಂಕಷ್ಟ ಬಂದಾಗ ನಕ್ಕು ಬಿಡಿ


Team Udayavani, Apr 29, 2019, 11:54 AM IST

29-April-10

ಕಷ್ಟಗಳು ಬಂದಾಗ ನಗುವುದು ನಮಗೆ ನಾವೇ ನೀಡುವ ಉಡುಗೊರೆ. ಸಮಸ್ಯೆಗಳು ಹೇಗೆ ಇರಲಿ, ಯಾವ ಸಂದರ್ಭದಲ್ಲೇ ಬರಲಿ ಅವನ್ನು ನಿಭಾಯಿಸುವ ಮೊದಲು ಮನದಾಳದಿಂದ ನಗು ಹೊರಹೊಮ್ಮಿದರೆ ಸಮಸ್ಯೆ ಅರ್ಧ ಪರಿಹಾರವಾದಂತೆಯೇ ಸರಿ.

ಒತ್ತಡದ ಜೀವನದಲ್ಲಿ ನಮಗೆ ನಗುವೆಂಬುದು ಏನು ಎಂಬುದೇ ಮರೆತು ಹೋಗಿರುತ್ತದೆ. ದೈನಂದಿನ ದಿನಚರಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ನಿನ್ನೆ ಮತ್ತು ಇಂದಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಮಾಡುವ ಎಲ್ಲ ಕೆಲಸ ನಮಗೊಬ್ಬರಿಗೆ ಇದೇ ಬೇರೆಯವರು ಸುಖೀಗಳು, ನಮಗೆ ಮಾತ್ರ ಇಂತಹ ಕಷ್ಟ ಎಂದು ಗೊಣಗುತ್ತೇವೆ. ಆದರೆ ಜೀವನದಲ್ಲಿ ಪ್ರತಿಯೊಬ್ಬನಿಗೂ ಅವನದ್ದೇ ಆದ ಕಷ್ಟಗಳಿರುತ್ತವೆ. ಕೆಲವರು ಅದನ್ನು ಸರಾಗವಾಗಿ ಎದುರಿಸಲು ಕಲಿತಿರುತ್ತಾರೆ. ಇನ್ನು ಕೆಲವರು ಅದನ್ನು ಜಟಿಲ ಮಾಡಿಕೊಂಡು ಬಿಡಿಸಲಾರದೇ ಕಷ್ಟ ಪಡುತ್ತಿರುತ್ತಾರೆ.

ಹುಟ್ಟಿದ ಮೇಲೆ ಕಷ್ಟ- ಸುಖವೆನ್ನುವುದು ಸಮಾನವಾಗಿರುತ್ತದೆ. ಆದರೆ ಸುಖ- ಕಷ್ಟದ ನಡುವಿನ ಅಂತರ ಅರಿತರೆ ಬದುಕು ಸುಂದರ. ಕೆಲವೊಮ್ಮೆ ಕೆಲಸದ ಒತ್ತಡದಿಂದಾಗಿ ಕಷ್ಟಗಳನ್ನು ನಿಭಾಯಿಸುವುದು ಹೇಗೆ ಎಂಬುದು ತಿಳಿಯದೆ ಬೇರೆ ಕೆಲಸವನ್ನೂ ಮಾಡಲಾಗದೆ ಕುಳಿತು ಬಿಡುತ್ತೇವೆ.

ಹೀಗೆ ಮಾಡಿದರೇ ಉತ್ತಮ
ಆದಷ್ಟು ಕೆಲಸಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಕಲಿಯಿರಿ. ನಾನು ಮಾಡಬಲ್ಲೇ ಎಂಬ ವಿಶ್ವಾಸ ಬೆಳೆಸಿಕೊಳ್ಳಿ ಅಥವಾ ಹತ್ತಿರದವರೊಂದಿಗೆ ಹಂಚಿಕೊಂಡು ಏನು ಮಾಡಬಹುದು, ಹೇಗೆ ಮಾಡಿದರೇ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಆಗ ನಿಮ್ಮ ಎದುರಿಗಿದ್ದ ಬಂಡೆಯಂತಹ ಸಮಸ್ಯೆ ಚಿಕ್ಕ ಕಲ್ಲಿನಂತಾಗಿ ಕರಗಿಹೋಗಿ ಬಿಡುತ್ತದೆ.

ಕಾಲಕ್ಕೆ ಬಿಟ್ಟು ಬಿಡಿ
ಒಮ್ಮೆ ಮಗಳು ಅಪ್ಪನ ಬಳಿಯಲ್ಲಿ ಕಷ್ಟಗಳನ್ನು ನಿಭಾಯಿಸುವುದು ಹೇಗೆ ಎಂದು ಕೇಳಿದಾಗ ಅಪ್ಪ ನೋಡು ಮಗಳೇ ಕಷ್ಟಗಳನ್ನು ಎದುರಿಸಲು ಮೂರು ದಾರಿಗಳಿವೆೆ. ಅವುಗಳನ್ನು ನೀನು ಆರಿಸಿಕೊಳ್ಳಬೇಕು ಎಂದಾಗ ಮಗಳು ಕುತೂಹಲದಿಂದ ಅದು ಹೇಗೆ ಎಂದಳು. ಆಗ ಅಪ್ಪ ಕಷ್ಟಗಳು ಬಂದಾಗ ಮೊದಲು ನೀನು ಬಗೆಹರಿಸಲು ಯತ್ನಿಸಬೇಕು. ನಿನ್ನಿಂದ ಸಾಧ್ಯವಾಗದೇ ಇದ್ದರೆ ಅನುಭವವಿರುವವರಲ್ಲಿ ಕೇಳಬೇಕು ಆಗಲೂ ಸಾಧ್ಯವಾಗದಿದ್ದರೆ ಕಾಲಕ್ಕೆ ಅದನ್ನು ಬಿಟ್ಟು ಬಿಡಬೇಕು. ಆಗ ಪರಿಹಾರದ ದಾರಿ ತನ್ನಿಂದ ತಾನಾಗಿಯೇ ತೆರೆದುಕೊಳ್ಳುತ್ತದೆ.

ಪ್ರತಿಯೊಂದು ಸಂದರ್ಭವೂ ನಿಮಗೆ ಒಂದು ಪಾಠ ಕಲಿಸುತ್ತದೆ. ನೀವು ಅದನ್ನು ಕಲಿತು ಮುಂದೆ ಬರುವ ಕಷ್ಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಷ್ಟೇ. ನಮಗೆ ಬಂದ ಕಷ್ಟವನ್ನು ನಾವು ಹೇಗೆ ನಿಭಾಯಿಸಬಲ್ಲೆವು ಎಂಬುದರ ಮೇಲೆ ನಮ್ಮ ಬದುಕು ನಿರ್ಧಾರವಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಎಷ್ಟೇ ಕಷ್ಟಗಳು ಬರಲಿ. ಬದುಕಿನುದ್ದಕ್ಕೂ ನಗುತ್ತಲೇ ಅದನ್ನು ಸ್ವೀಕರಿಸಿ.

ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.