ಕೋರ್ಟ್ ನಿಂದನೆ ಕೇಸು : ಸುಪ್ರೀಂ ಕೋರ್ಟ್ ನೊಟೀಸಿಗೆ ರಾಹುಲ್ ಉತ್ತರ
Team Udayavani, Apr 29, 2019, 12:13 PM IST
ಹೊಸದಿಲ್ಲಿ : ರಫೇಲ್ ಕುರಿತ ತೀರ್ಪಿನ ಬಗ್ಗೆ ನೀಡಿದ್ದ ಹೇಳಿಕೆಗಾಗಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ದಾಖಲಿಸಿದ್ದ ಕೋರ್ಟ್ ನಿಂದನೆ ಕೇಸಿಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಸೋಮವಾರ, ಸುಪ್ರೀಂ ಕೋರ್ಟ್ ತನಗೆ ಜಾರಿ ಮಾಡಿದ್ದ ನೊಟೀಸಿಗೆ, ಉತ್ತರ ಸಲ್ಲಿಸಿದರು.
ರಾಹುಲ್ ಗಾಂಧಿ ವಿರುದ್ಧದ ಕೋರ್ಟ್ ನಿಂದನೆ ಕೇಸು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠದ ಮುಂದಿದ್ದು ಸರ್ವೋಚ್ಚ ನ್ಯಾಯಾಲಯವು ಜಾರಿ ಮಾಡಿರುವ ನೊಟೀಸಿಗೆ ಉತ್ತರ ನೀಡುವುದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ತಾವು ಬಿನ್ನವಿಸಿಕೊಂಡಿರುವುದಾಗಿ ರಾಹುಲ್ ಅವರ ವಕೀಲ ಹೇಳಿದರು.
ಕೋರ್ಟ್ ನಿಂದನೆ ಕೇಸನ್ನು ವಿಚಾರಿಸುವ ಸುಪ್ರೀಂ ಪೀಠದಲ್ಲಿ ಜಸ್ಟಿಸ್ಗಳಾದ ದೀಪಕ್ ಗುಪ್ತಾ ಮತು ಸಂಜೀವ್ ಖನ್ನಾ ಅವರು ಇದ್ದಾರೆ. ರಾಹುಲ್ ಅವರ ವಕೀಲ ಸುನೀಲ್ ಫೆರ್ನಾಂಡಿಸ್ ಅವರಿಗೆ ಕೋರ್ಟ್ ನಿಂದನೆ ನೋಟಿಸಿಗೆ ಉತ್ತರ ಸಲ್ಲಿಸುವುದಕ್ಕೆ ಪೀಠ ಅನುಮತಿ ನೀಡಿತು.
ರಾಹಲ್ ಗಾಂಧಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚೌಕೀದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟ್ ಕೂಡ ರಫೇಲ್ ತೀರ್ಪಿನಲ್ಲಿ ಹೇಳಿದೆ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಅವರು ಕಳೆದ ಎ.23ರಂದು ಸುಪ್ರೀಂ ಕೋರ್ಟ್ ನಲ್ಲಿ ರಾಹುಲ್ ವಿರುದ್ಧ ಕೋರ್ಟ್ ನಿಂದನೆ ಕೇಸು ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.