ಮಹಿಳಾ ಬಾಂಬರ್‌ಗಳಿಂದ ಚೈತ್ಯಾಲಯಗಳ ಮೇಲೆ ದಾಳಿ ಸಂಭವ : ಲಂಕಾ ಗುಪ್ತಚರ ವರದಿ
Team Udayavani, Apr 29, 2019, 5:34 PM IST
ಕೊಲಂಬೋ : ಶ್ವೇತ ವಸ್ತ್ರ ಧಾರಿ ಮಹಿಳಾ ಬಾಂಬರ್‌ಗಳು ಲಂಕೆಯ ಬೌದ್ಧ ಚೈತ್ಯಾಲಯಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಶ್ರೀಲಂಕಾ ಗುಪ್ತಚರ ದಳಕ್ಕೆ ಸಿಕ್ಕಿದೆ.
253 ಮಂದಿಯನ್ನು ಬಲಿ ಪಡೆದ ಈಸ್ಟರ್ ಭಾನುವಾರದ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಒಂಬತ್ತು ಮಂದಿ ಬಾಂಬರ್ ಗಳ ಪೈಕಿ ಓರ್ವ ಮಹಿಳೆಯೂ ಇದ್ದಳು ಎಂಬುದನ್ನು ಲಂಕಾ ಗುಪ್ತಚರ ದಳ ನೆನಪಿಸಿಕೊಟ್ಟಿದೆ.
ಈಸ್ಟರ್ ಭಾನುವಾರದ ಬಾಂಬ್ ದಾಳಿಯ ಶಂಕಿತರು ಅಡಗಿಕೊಂಡಿದ್ದ ಮನೆಯ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳಿಗೆ ಅಲ್ಲಿ ಬೌದ್ಧ ಮಹಿಳಾ ಅನುಯಾಯಿಗಳು ತೊಡುವ ರೀತಿಯ ಶ್ವೇತ ವಸ್ತ್ರ (ಸ್ಕರ್ಟ್ ಮತ್ತು ಬ್ಲೌಸ್) ಗಳ ಐದು ಸೆಟ್ ಉಡುಪು ದೊರಕಿದ್ದವು.
ಕಳೆದ ಮಾರ್ಚ್ 29ರದು ಮುಸ್ಲಿಂ ಮಹಿಳೆಯೊಬ್ಬಳು 29,000 ಶ್ರೀಲಂಕಾ ರೂಪಾಯಿ ಖರ್ಚು ಮಾಡಿ ಗಿರಿಉಲ್ಲಾ ದಲ್ಲಿನ ಬಟ್ಟೆ ಅಂಗಡಿಯೊಂದರಿಂದ 9 ಸೆಟ್ ಶ್ವೇತವಸ್ತ್ರ ಖರೀದಿಸಿದ್ದಳು. ಸಿಸಿಟಿವಿ ಚಿತ್ರಿಕೆಯಲ್ಲಿ ಆಕೆ ಚಹರೆ, ಖರೀದಿ ಚಟುವಟಿಕೆಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಕೈವಶವಾಗದಿರುವ ಇನ್ನೂ ನಾಲ್ಕು ಶ್ವೇತ ವಸ್ತ್ರಗಳ ಸೆಟ್ ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಬಹುಷಃ ಇವುಗಳನ್ನೇ ಬಳಸಿಕೊಂಡು ಮಹಿಳಾ ಬಾಂಬರ್‌ಗಳು ಬೌದ್ಧ ಚೈತ್ಯಾಲಯಗಳ ಮೇಲೆ ಅನುಯಾಯಿಗಳ ರೂಪದಲ್ಲಿ ಬಂದು ಆತ್ಮಾಹುತಿ ದಾಳಿ ನಡೆಸಬಹುದೆಂಬ ಶಂಕೆಯನ್ನು ಲಂಕಾ ಗುಪ್ತಚರ ದಳ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.