ಬೆವರ ಹನಿಯ ಡ್ಯುಯೆಟ್ಟು : ಏನು ನಿನ್ನ ಬೆವರ ಹನಿಗಳ ಲೀಲೆ…


Team Udayavani, Apr 30, 2019, 6:20 AM IST

Josh-Bevaru

ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರು ಹನಿಗಳು ರಾಜ ರಾಣಿ, ರೋರರ್‌, ರಾಕೆಟ್‌ನಂತೆ ನಾ ಮುಂದು ತಾ ಮುಂದು ಎಂದು ಹರಿಯುತ್ತಿವೆೆ. ಬೇಸಿಗೆಯ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು…

ಮಾಗಿಯ ಚಳಿ ಮುಗಿದು, ಬೇಸಿಗೆಯ ಸೂರ್ಯ ಪ್ರತಾಪ ಬೀರುವ ಹೊತ್ತಿನಲ್ಲಿ ನಾನು ತರಗತಿಯಲ್ಲಿದ್ದೆ. ಬೆಳಗ್ಗೆ 11 ಗಂಟೆ ಇದ್ದಿರಬಹುದೇನೋ. ಲೆಕ್ಚರರ್‌ ಎಂದಿನಂತೆ ಸಹಜವಾಗಿ ತರಗತಿಯನ್ನು ಆರಂಭಿಸಿದರು. ಅವರ ಪಾಠದೊಳಗೆ ಇಡೀ ತರಗತಿ ಮುಳುಗಿತ್ತು. ಎದೆಯೊಳಗೆ ಏನೋ ಜರಿಹುಳು ಹರಿದ ಅನುಭವ. ಮೆಲ್ಲಗೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಸುಮ್ಮನಾದೆ.

ನಂತರ ಮರುದಿನವೂ ಮೈಯೊಳಗೆ ಇದೇ ಪುಳಕ. ಒಂಥರಾ ಕಚಗುಳಿ ಇಟ್ಟಂತೆ ಸರಸರ ನೀರು ಹರಿಯುವ ಅನುಭವ. ಅರೆ! ನನಗೇನಾಯ್ತಪ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರ ಹನಿಗಳು ರಾಜ ರಾಣಿ, ರೋರರ್‌, ರಾಕೆಟ್‌ನಂತೆ ನಾ ಮುಂದು ತಾ ಮುಂದೆ ಎಂದು ಹರಿಯುತ್ತಿವೆ. ಏಪ್ರಿಲ್‌ ತಿಂಗಳ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ನನಗೆ ದಕ್ಷಿಣ ಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು.

ಇಲ್ಲಿನ ವಾತಾವರಣ ನಿಜಕ್ಕೂ ಹಾರಿಬಲ್ ಯಾಕೆಂದರೆ, ಬೇಸಗೆಯಲ್ಲಿ ಸಹಿಸಲಸಾಧ್ಯ
ಧಗೆ. ಮಳೆಗಾಲದಲ್ಲಿ ಹುಚ್ಚು ಮಳೆ. ನಮ್ಮೂರಲ್ಲಿ ಹೀಗಲ್ಲ. ಮಳೆ, ಬಿಸಿಲು, ಚಳಿ ಎಲ್ಲವೂ ಸಮಾನವಾಗಿ ಇರುವ ಪರಿಸರ. ನಮ್ಮೂರಲ್ಲೂ ಬೇಸಗೆಯಲ್ಲಿ ಹೀಗೆಯೇ ಬಿಸಿಲಿರುತ್ತದೆ. ಆದರೆ, ಚರ್ಮ ಸುಟ್ಟು ಹೋಗುವಂಥ ಉರಿ ಬಿಸಿಲು, ಸಹಿಸಲಸಾಧ್ಯ ಧಗೆ ಇಲ್ಲ. ಇಲ್ಲಿ ಸುತ್ತಲೂ ದಟ್ಟ ಕಾಡು ಇರುವುದರಿಂದ ಸದಾ ತಂಪಿರುತ್ತದೆ ಎಂದು ಭಾವಿಸಿದ್ದೆ.

ಆದರೆ, ನನ್ನ ಯೋಚನೆಯೆಲ್ಲ ಬುಡಮೇಲಾಗಿದೆ. ಇಷ್ಟು ಧಗೆಗೆ ಕಾರಣ ಏನಿರಬಹುದು ಎಂದು ವಿಚಾರಿಸಿದ ನನಗೆ ತಿಳಿದುಬಂದಿದ್ದು ಒಂದು: ಇದು ಸಮುದ್ರಕ್ಕೆ ಸಮೀಪವಿರುವುದರಿಂದ ಮತ್ತು ಇಲ್ಲಿನ ಮಣ್ಣಿನ ವಿಶಿಷ್ಟ ಲಕ್ಷಣ ಎನ್ನುವುದು. ಇಲ್ಲಿ ಭೂಮಿ ಸೂರ್ಯನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಬಿಸಿಲ ಧಗೆ ಹೆಚ್ಚು. ಅದು ಎಷ್ಟರಮಟ್ಟಿಗೆ ಎಂದರೆ ಬೇಸಿಗೆಯಲ್ಲಿ ಬೆಳಗ್ಗೆ 8 ಗಂಟೆಗಾಗಲೇ ಬೆವರ ಹನಿಗಳು ಮೈಯಿಂದ ಕಿತ್ತು ಬರುತ್ತಿರುತ್ತದೆ.

ಇನ್ನು ಮಧ್ಯಾಹ್ನದ ಪಾಡು ಆ ದೇವರಿಗೇ ಪ್ರೀತಿ. ಸಂಜೆ ಹೊತ್ತಿಗಾಗಲೇ ನನ್ನ ಪರಿಸ್ಥಿತಿ ಕುಕ್ಕರ್‌ನಲ್ಲಿ ಒಂದೆರಡು ವಿಸಿಲ್‌ಗೆ ಬೇಯುವ ತೊಗರಿ ಬೇಳೆಯಂತಾಗುತ್ತದೆ. ಇನ್ನು ರಾತ್ರಿ ಫ್ಯಾನ್‌ ತಿರುಗದಿದ್ದರೆ, ಸೆಖೆಯಿಂದ ನಿದ್ದೆ ಬರದೇ, ಬೋರಲು ಬಿದ್ದು - ಅಂಗಾತ ಬಿದ್ದು ನಾವೇ ತಿರುಗುತ್ತಿರುತ್ತೇವೆ.

ಊರಲ್ಲಿ ಹದವಾಗಿ ತಿಂದು ಬೆಳೆಸಿದ್ದ ಬೊಜ್ಜು ಮೂರೇ ತಿಂಗಳಿಗೆ ಕರಗಿ ನೀರಾಗಿ ಅಲ್ಲಲ್ಲ , ಬೆವರಾಗಿ ಹರಿದು ಹೋಯಿತು. ಇಲ್ಲಿನ ವಾತಾವರಣ, ಅಷ್ಟೊಂದು ಸ್ಟ್ರಾಂಗ್‌. ಅಂದಹಾಗೆ, ಇಲ್ಲಿನ ಜನರ ಆಹಾರ ಕ್ರಮ, ಜೀವನ ಶೈಲಿಯೂ ಇದಕ್ಕೆ ಪೂರಕವಾಗಿಯೇ ಇದೆ. ಇಲ್ಲಿ ಸಿಗುವ ದೊಡ್ಡ ಗಾತ್ರದ ಎಳನೀರು, ವಿವಿಧ ರೀತಿಯ ತಂಪು ಪಾನೀಯಗಳು ಜನರ ಜೀವನದ ಜೊತೆ ಹಾಸುಹೊಕ್ಕಾಗಿವೆ. ಬಹುತೇಕವಾಗಿ ಇಲ್ಲಿನ ಜನರು ಬಿಸಿಲ ಧಗೆಗೆ ಬೆಂದ ಮೈಮನಸ್ಸು ಹಗುರಾಗಲು ತಪ್ಪದೇ ರಾತ್ರಿ ಸ್ನಾನ ಮಾಡಿ ನೆಮ್ಮದಿಯ ನಿದ್ರೆಗೆ ಜಾರುತ್ತಾರೆ.

ಅದೇನೇ ಇರಲಿ, ನಮ್ಮೂರಲ್ಲಿ ಬೆಳಗ್ಗೆ ಜಾಗಿಂಗ್‌ ಮಾಡಿದಾಗ ಅಥವಾ ಜಿಮ್‌ನಲ್ಲಿ ವರ್ಕೌಟ್‌ ಮಾಡಿದಾಗ ಮಾತ್ರ ಬರುತ್ತಿದ್ದ ನನ್ನ ಬೆವರಿಗೆ ಒಂದು ರೀತಿಯ ಪ್ರತಿಷ್ಠೆಯ ಸ್ಥಾನವಿತ್ತು. ಆದರೆ, ಇಲ್ಲಿನ ಜನತೆಗೆ ಅದು ಉಸಿರಾಟದಷ್ಟೇ ಸಹಜವಾಗಿದೆ. ನಾನು ತುಳುನಾಡಿಗೆ ಬಂದು ಒಂದು ವರುಷ ಕಳೆದಿದೆ. ನನ್ನ ದೇಹದ ಬೆವರಷ್ಟೇ ಅಲ್ಲ, ಅಜ್ಞಾನವೆಂಬ ಬೆವರೂ ಯಾವ ಮುಲಾಜಿಲ್ಲದೇ ಹರಿದು, ಇಳಿದು ಹೋಗಿದೆ. ಹೊಸ ವಾತಾವರಣಕ್ಕೆ ದೇಹ, ಮನಸ್ಸು ಒಗ್ಗಿಕೊಂಡಿದೆ. ಕಷ್ಟಪಟ್ಟು ಬೆವರು ಹರಿಸಿ, ಶಿಕ್ಷಕನಾಗುತ್ತಿದ್ದೇನೆಂಬ ಸಾರ್ಥಕದ ಭಾವವಿದೆ.

– ಮಹೇಶ್‌ ಎಂ.ಸಿ., ಉಜಿರೆ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.