ಕೆಥೋಲಿಕ್ ಸಭಾದಿಂದ ಸಂತಾಪ; ಖಂಡನ ಸಭೆ
ಶ್ರೀಲಂಕಾದಲ್ಲಿ ಉಗ್ರರ ದಾಳಿ
Team Udayavani, Apr 30, 2019, 6:04 AM IST
ಪಜೀರು: ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಉಗ್ರದಾಳಿಯನ್ನು ಖಂಡಿಸಿ ರವಿವಾರ ಪಜೀರ್ ಮೆರ್ಸಿ ಯಮ್ಮನವರ ಚರ್ಚ್, ಕೆಥೋಲಿಕ್ ಸಭಾ ಪಜೀರು ಘಟಕ, ಭಾರತೀಯ ಕೆಥೋಲಿಕ್ ಯುವಸಂಚಲನ ಪಜೀರು ಘಟಕ ಹಾಗೂ ಪಜೀರ್ ಚರ್ಚ್ ವ್ಯಾಪ್ತಿಯ ಕ್ರೈಸ್ತರಿಂದ ವಿಶೇಷ ಪ್ರಾರ್ಥನೆ, ಸಂತಾಪ ಸೂಚಕ ಹಾಗೂ ಖಂಡನಾ ಸಭೆ ಮತ್ತು ಪಜೀರ್ ಹೊಸಚರ್ಚ್‌ನಿಂದ ಗ್ರಾಮಚಾವಡಿ ಜಂಕ್ಷನ್‌ವರೆಗೆ ಕ್ಯಾಂಡಲ್ ಮಾರ್ಚ್ ಜರಗಿತು.
ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ ಚರ್ಚ್‌ನ ಧರ್ಮಗುರು ವಂ| ಸುನಿಲ್ ವೇಗಸ್ ಮಾತನಾಡಿ, ಉಗ್ರದಾಳಿಯಲ್ಲಿ ಮೃತರಾದವರ ಕುಟುಂಬದ ದುಃಖದಲ್ಲಿ ನಾವಿದ್ದೇವೆ. ಇಂದಿನ ಸಂಕಷ್ಟ ಸಂದರ್ಭ ನಮ್ಮ ಪ್ರಾರ್ಥನೆ ಅಗತ್ಯವಿದ್ದು,ಅದರ ಫಲವಾಗಿ ಮೃತರ ಕುಟುಂಬಕ್ಕೆ ಶಾಂತಿ,ನೆಮ್ಮದಿ ಸಿಗಲಿ ಎಂದರು.
ಶಾಂತಿ ನೆಲೆಸಲಿ
ಮನುಷ್ಯರಾಗಿರುವ ನಾವೆಲ್ಲರೂ ಪರಸ್ಪರ ಸಹೋದರತೆಯಿಂದ ಜೀವಿಸಲು ಮುಂದಾದಾಗ ಜಗತ್ತಿನಲ್ಲಿ ಶಾಂತಿ,ಸೌಹಾರ್ದತೆ ಸಾಧ್ಯ.ನಮ್ಮ ದೇಶ,ಜಗತ್ತಿನಲ್ಲಿ ಶಾಂತಿ ಸಿಗುವಂತಾಗಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಈನೆಟ್ ಡಿ’ಸೋಜಾ, ಸಿಸ್ಟರ್ ಲೀನೆಟ್ ದಾಂತಿ, ಚರ್ಚ್ ಪಾಲನಾ ಮಂಡಳಿ,ಕೆಥೋಲಿಕ್ ಸಭಾ ಪಜೀರ್ ಘಟಕದ ಪದಾಧಿಕಾರಿಗಳು,ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.