ದೇಹವನ್ನು ತಂಪಾಗಿರಿಸುವ ಪ್ರಾಣಾಯಾಮಗಳು
Team Udayavani, Apr 30, 2019, 6:00 AM IST
ಬಿರು ಬಿಸಿಲು, ನೀರು ಕುಡಿದಷ್ಟೂ ದಾಹ, ದೇಹದಲ್ಲಿ ಉರಿ, ವಿಪರೀತ ಸೆಕೆ… ನಮ್ಮ ದೇಹವನ್ನು ಬಾಧಿಸುವ ಇದಕ್ಕೆ ಪರಿಹಾರ ದೇಹದಲ್ಲಿಯೇ ಅಡಗಿದೆ. ಶೀತ ಹಾಗೂ ಉಷ್ಣ ವಾತಾವರಣಕ್ಕೆ ತಕ್ಕಂತೆ ನಮ್ಮ ದೇಹವನ್ನು ಸಮತೂಕದಲ್ಲಿರಿಸಲು ಪ್ರಾಣಾಯಾಮಗಳು ಸಹಕಾರಿ. ಮುಖ್ಯವಾಗಿ ಉಷ್ಣತೆಯ ನಿಯಂತ್ರಣಕ್ಕೆ ಹಿರಿಯರು ಕಂಡುಕೊಂಡ ಸುಲಭೋಪಾಯವೇ ತಂಪಿನ ಪ್ರಾಣಾಯಾಮಗಳು.
ಇದರಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. 1.ಶೀತಲೀ ಪ್ರಾಣಾಯಾಮ, 2. ಸೀತ್ಕಾರಿ ಪ್ರಾಣಾಯಾಮ, 3. ಸದಂತ ಪ್ರಾಣಾಯಾಮ
- ಶೀತಲೀ ಪ್ರಾಣಾಯಾಮ
ಧ್ಯಾನದ ಭಂಗಿಯಲ್ಲಿ ಕುಳಿತು ನಾಲಗೆಯನ್ನು ಹೊರಹಾಕಬೇಕು. ಮಧ್ಯದಲ್ಲಿ ಚಿಕ್ಕ ಓಣಿಯ ಆಕಾರ ಮೂಡುವಂತೆ ನಾಲಗೆಯ ಎರಡೂ ಬದಿ ಮಡಚಬೇಕು. ಓಣಿಯ ಮೂಲಕ ಹೊರಗಿನ ಗಾಳಿಯನ್ನು ದೇಹದ ಒಳಕ್ಕೆ ಎಳೆದುಕೊಳ್ಳಬೇಕು. ಇದನ್ನು ಮೂಗಿನ ಮೂಲಕ ಹೊರಗೆ ಹಾಕಬೇಕು.
– ಸೀತ್ಕಾರಿ ಪ್ರಾಣಾಯಾಮ
ಧ್ಯಾನದ ಭಂಗಿಯಲ್ಲಿ ಕುಳಿತು ಹಿಮ್ಮುಖವಾಗಿ ನಾಲಗೆಯನ್ನು ಮಡಚಬೇಕು. ನಾಲಗೆಯ ಎರಡೂ ಬದಿಗಳಿಂದ ಹೊರಗಿನ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಮೂಗಿನ ಮೂಲಕ ಹೊರಹಾಕಬೇಕು.
- ಸದಂತ
ಹಲ್ಲುಗಳ ಎರಡೂ ಸಾಲುಗಳನ್ನು ಒಂದರ ಮೇಲೊಂದರಂತೆ ಒತ್ತಿ ಇಟ್ಟುಕೊಳ್ಳಬೇಕು. ಹಲ್ಲುಗಳ ಸಂಧಿಗಳ ಮೂಲಕ ಹೊರಗಿನ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಹೀಗೆ ಎಳೆದುಕೊಂಡ ಗಾಳಿಯನ್ನು ಮೂಗಿನ ಮೂಲಕ ಹೊರಹಾಕಬೇಕು.
ಇವು ದೇಹ, ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತವೆ. ಬಾಯಾರಿಕೆ ನಿಯಂತ್ರಿಸುತ್ತವೆೆ. ರಕ್ತ ಶುದ್ಧಿಗೆ, ನಿದ್ರಾಹೀನತೆಗೆ ಫಲಕಾರಿ. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ನಿವಾರಿಸುತ್ತವೆ. ಕಡಿಮೆ ರಕ್ತದೊತ್ತಡ,ಗಂಟಲು ಬೇನೆ ಇರುವವರು ಇವುಗಳನ್ನು ಮಾಡುವುದು ಸೂಕ್ತವಲ್ಲ. ಚಳಿಗಾಲದಲ್ಲಿ ಈ ಪ್ರಾಣಾಯಾಮಗಳ ಅಗತ್ಯವಿಲ್ಲ.
- ಡಾ|ಶ್ರೀಕಾಂತ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.