ಸಿ.ಎ. ಸಾಹೇಬರು : ಲೆಕ್ಕವೇ ಹೇಳಿದ ಮಾತಿದು
Team Udayavani, Apr 30, 2019, 6:00 AM IST
ಸಿ.ಎ. ಒಮ್ಮೆಗೇ ಆಗಿಬಿಡುವಂತಹುದ್ದಲ್ಲ ಮತ್ತು ಅದಕ್ಕೆ ಬೇಕಾದ ಮೂಲ ವಿದ್ಯಾರ್ಹತೆ ಕೂಡ ಬದಲಾಗಿದೆ. ದಶಕಗಳ ಹಿಂದೆ ಸಿ.ಎ. ಪರೀಕ್ಷೆ ಬರೆಯಬೇಕಾದರೆ ಪದವಿ ಕಡ್ಡಾಯವಾಗಿತ್ತು ಮತ್ತು ಅಭ್ಯರ್ಥಿಯು ಕನಿಷ್ಠ ಐದು ವರ್ಷಗಳ ಆರ್ಟಿಕಲ್ ಟ್ರೇನಿಂಗ್ ಮಾಡುವುದು ಕಡ್ಡಾಯವಿತ್ತು. 1991-92ರಲ್ಲಿ, ICAI ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾದವರಿಗೆ ಪ್ರಾಥಮಿಕ ಹಂತದ ಪರೀಕ್ಷೆ ಅಂದರೆ ಫೌಂಡೇಷನ್ ಕೋರ್ಸ್ ಪರೀಕ್ಷೆ ಬರೆಯಲು ಅನುಮತಿ ನೀಡಿತು.
ಅಕ್ಟೋಬರ್ 2001ರಲ್ಲಿ ICAI ಫೌಂಡೇಷನ್ ಕೋರ್ಸ್ ಮತ್ತು ಇಂಟರ್ ಮೀಡಿಯಟ್ ಪರೀಕ್ಷೆಗಳ ಬದಲಾಗಿ PE I ಮತ್ತು PE II ಮಾದರಿಯ ಪರೀಕ್ಷೆಗಳನ್ನು ಆರಂಭಿಸಿತು. ಕೊನೆಗೆ 2006ರಲ್ಲಿ ಮತ್ತೂಮ್ಮೆ ಪರೀಕ್ಷಾ ಮಾದರಿ ಬದಲಿಸಿ CPT, CPCC ಮತ್ತು CA Final ಪರೀಕ್ಷೆಗಳನ್ನು ಜಾರಿಗೆ ತಂದಿತು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿ.ಎ. ಪರೀಕ್ಷೆಗೆ ತಯಾರಿಯನ್ನು ಆದಷ್ಟು ಬೇಗನೆ ಆರಂಭಿಸಿದಷ್ಟೂ ಒಳ್ಳೆಯದು. ಹತ್ತನೆಯ ತರಗತಿಯ ನಂತರ ಪಿಯುಸಿ ಹಂತದಲ್ಲೇ ಅಂದರೆ ಪ್ರಾಥಮಿಕ ಪರೀಕ್ಷೆಗೆ ಹೆಸರು ನೊಂದಾಯಿಸಬಹುದು. ಈ ಹಂತದಲ್ಲಿ ಗಣಿತವನ್ನು ಆಯ್ದುಕೊಳ್ಳುವುದು ಒಳ್ಳೆಯದು. ಕಾಮರ್ಸ್ ವಿದ್ಯಾರ್ಥಿಗಳಿಗೆ ಸಿ.ಎ. ಸುಲಭವೆನ್ನುತ್ತಾರಾದರೂ ಇತ್ತೀಚಿನ ಪರೀಕ್ಷಾ ಮಾದರಿ ಯಾವುದೇ ಹಿನ್ನೆಲೆಯ ಪ್ರತಿಭಾವಂತರಿಗೆ ಅವಕಾಶ ಒದಗಿಸುವಂತಿದೆ.
ಯಾರಿಗೆ ಸೂಕ್ತ?
ಹೆಚ್ಚಾಗಿ ಕಾಮರ್ಸ್ ವಿದ್ಯಾರ್ಥಿಗಳೇ ಸಿ.ಎ ಪರೀಕ್ಷೆ ಬರೆಯಲು ಉತ್ಸುಕರಾಗಿರುತ್ತಾರೆ. ಆದರೆ ಇದೊಂದು ಪ್ರಾಯೋಗಿಕ ಕೋರ್ಸ್. ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳೂ ಪ್ರಯತ್ನಿಸಿ ಯಶಸ್ವಿಯಾದ ಉದಾಹರಣೆಗಳಿವೆ. ಆದರೆ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಅಕೌಂಟಿಂಗ್‌ನ ಮೂಲ ತಣ್ತೀಗಳನ್ನು, ತಂತ್ರಗಳನ್ನು ಅರಿತುಬಿಟ್ಟರೆ ಅವರಿಗೂ ಇದು ಸುಲಭದ ತುತ್ತು.
ಉದ್ಯೋಗಾವಕಾಶ
ತರಬೇತಿ ಮುಗಿದ ಬಳಿಕ ಐಇಅಐನ ಸದಸ್ಯತ್ವವನ್ನು ಪಡೆದ ಬಳಿಕ CA ವೃತ್ತಿಯನ್ನು ಆರಂಭಿಸಬಹುದು. ಭಾರತ ಅಥವಾ ವಿದೇಶದಲ್ಲಿ ಸೇವೆಯನ್ನು ಆರಂಭಿಸುವ ಮುನ್ನ “ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್’ ಪಡೆದುಕೊಳ್ಳಬೇಕು. ಇದರ ವಾರ್ಷಿಕ ಶುಲ್ಕ 400 ರೂ. ಸರ್ಟಿಫಿಕೆಟ್ ಪಡೆದ ಬಳಿಕ ಇಅ ನಿಯಮಗಳಲ್ಲಿ ಸೂಚಿಸಿರುವಂತೆ ಸೇವೆ ಅಥವಾ ಉದ್ಯಮದಲ್ಲಿ ತೊಡಗಿಕೊಳ್ಳಬಹುದು.
ಮಾರುಕಟ್ಟೆಯ ಕಣ್ಣು
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯದ ಏಳುಬೀಳುಗಳನ್ನು ಚೆನ್ನಾಗಿ ಅರಿತಿರುವ ಇಅಗಳಿಗೆ ಬಹಳ ಬೇಡಿಕೆ ಮತ್ತು ಗೌರವವಿದೆ. ವಾಣಿಜ್ಯ ವ್ಯವಹಾರಗಳ ಥಿಯರಿ ಮತ್ತು ಪ್ರಾಕ್ಟಿಕಲ್‌ಗಳಲ್ಲಿ ನುರಿತಿರುವ ಇವರು, ಹಣದ ವಹಿವಾಟು, ಒಳ ಹರಿವು, ಹೊರ ಹರಿವುಗಳನ್ನು ಬಲ್ಲವರು.
ಮಾರುಕಟ್ಟೆಯ (ಶೇರು ಮಾರುಕಟ್ಟೆಯ) ಏರಿಳಿತಗಳನ್ನೂ ಇವರು ನಿಖರವಾಗಿ ಊಹಿಸಬಲ್ಲರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳು ಬದಲಾಗುತ್ತಿದ್ದರೂ ಇಅಗಳಿಗೆ ಬೇಡಿಕೆ ಮಾತ್ರ ತಗ್ಗಿಲ್ಲ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನೂ ಅವಲಂಬಿಸಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಇಅಗಳ ನೇಮಕಾತಿ ಕಡ್ಡಾಯವೆನಿಸುವ ವಿಧಿಗಳನ್ನು ರೂಪಿಸಿರುವಾಗ ಅದಕ್ಕೆ ತಕ್ಕಂತೆ ಇಅ ಸಂಘವು ಒತ್ತಾಸೆ ನೀಡುವಲ್ಲಿ ಮುಂದಾಗಬೇಕು.
ಅವಕಾಶಗಳು ಎಲ್ಲೆಲ್ಲಿ?
– ಬ್ಯಾಂಕುಗಳು (ಖಾಸಗಿ ಮತ್ತು ಸಾರ್ವಜನಿಕ/ ಸರ್ಕಾರಿ ವಲಯ)
– ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಆಡಿಟಿಂಗ್ ಸಂಸ್ಥೆಗಳು (KPMG, ಪ್ರೈಸ್ ವಾಟರ್‌ಹೌಸ್ ಇತ್ಯಾದಿ…)
– ಫೈನಾನ್ಸ್ ಕಂಪೆನಿಗಳು, ಮ್ಯೂಚುವಲ್ ಫಂಡ್‌ಗಳು, ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್ ಕಂಪೆನಿಗಳು,
– ಇನ್ವೆಸ್ಟ್‌ಮೆಂಟ್ ಕಂಪೆನಿಗಳು, ಸ್ಟಾಕ್ ಬ್ರೋಕಿಂಗ್ ಕಂಪೆನಿಗಳು
– ಕಾನೂನು ಸಂಸ್ಥೆಗಳು, ಪೇಟೆಂಟ್ ಸಂಸ್ಥೆಗಳು, ಅಟಾರ್ನಿಗಳು, ಟ್ರೇಡ್‌ಮಾರ್ಕ್ ಮತ್ತು ಕಾಪಿರೈಟ್ ರಿಜಿಸ್ಟರ್‌ಗಳು.
— ರಘು ವಿ., ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.