ಗೋ ಸೇವೆಯಿಂದ ಗೋಪಾಲಕೃಷ್ಣನ ಸೇವೆ: ಪೇಜಾವರ ಕಿರಿಯ ಶ್ರೀ
Team Udayavani, Apr 30, 2019, 6:30 AM IST
ಶಿರ್ವ: ನೀಲಾವರ ಗೋಶಾಲೆಗೆ ಕುಂಜಾರು ಗಿರಿ ಬಳಗದ ಸಹಕಾರ ಸ್ತುತ್ಯರ್ಹವಾಗಿದೆ. ಬಳಗದ ಸದಸ್ಯರು ಜೋಳದ ಮೇವನ್ನು ಬೆಳೆದು ಗೋಶಾಲೆಗೆ ನಿರಂತರವಾಗಿ ಅರ್ಪಿಸುತ್ತಾ ಬಂದಿದ್ದಾರೆ. ಹಾಗೆಯೇ ಜಿಲ್ಲೆಯಾದ್ಯಂತ ಹಲವಾರು ಸಂಘಟನೆಗಳೂ ಈ ಕಾರ್ಯವನ್ನು ಮಾಡುತ್ತಿವೆ. ಗೋವುಗಳ ಸೇವೆಯೇ ಗೋಪಾಲಕೃಷ್ಣನ ಸೇವೆಯಾಗಿದೆ ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದರು.
ಅವರು ರವಿವಾರ ಪಾಜಕದಲ್ಲಿ ಕುಂಜಾರುಗಿರಿಯ ಗಿರಿ ಬಳಗ ವತಿಯಿಂದ ನಡೆದ 14ನೇ ವರ್ಷದ ಗೋಗ್ರಾಸ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಗಿರಿ ಬಳಗದಿಂದ ಪಾಜಕದ ಗದ್ದೆಗಳಲ್ಲಿ ನೀಲಾವರ ಗೋಶಾಲೆಗಾಗಿಯೇ ಬೆಳೆಸಲಾದ ಜೋಳದ ಮೇವನ್ನು ಪೇಜಾವರ ಕಿರಿಯ ಶ್ರೀಗಳ ಮೂಲಕ ಸಮರ್ಪಣೆ ಮಾಡಲಾಯಿತು.
ಗಿರಿಬಳಗದ ಸದಸ್ಯ ಪರಶುರಾಮ್ ಭಟ್ ಮಾತನಾಡಿ, ಗಿರಿ ಬಳಗದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 25 ಲೋಡು ಗೋಗ್ರಾಸವನ್ನು ಸಮರ್ಪಿಸಲಾಗಿತ್ತು. ಕಳೆದ 14 ವರ್ಷಗಳಿಂದ ಬಳಗವು ನಿರಂತರವಾಗಿ ಗೋಗ್ರಾಸವನ್ನು ಸಮರ್ಪಿಸುತ್ತ ಬಂದಿದೆ. ಪೇಜಾವರ ಉಭಯ ಶ್ರೀಗಳೂ ನಮ್ಮ ಕಾರ್ಯವನ್ನು ಆಶೀರ್ವದಿಸಿದ್ದಾರೆ.
ಮೇ ತಿಂಗಳಲ್ಲಿ ಬೀಜ ಬಿತ್ತುವ ಮತ್ತು ಕಟಾವು ಕಾರ್ಯಕ್ಕೆ ಪ್ರತೀ ವರ್ಷ ಪೇಜಾವರ ಕಿರಿಯ ಶ್ರೀಗಳು ಬಂದು ಹರಸುತ್ತಿದ್ದಾರೆ ಎಂದರು.
ಜೋಳ ಕಟಾವು ಮಾಡಿದ ಶ್ರೀಗಳು
ಪಾದರಸದಂತ ವ್ಯಕ್ತಿತ್ವ ಹೊಂದಿರುವ ಪೇಜಾವರ ಕಿರಿಯ ಶ್ರೀಗಳು, ಹುಬ್ಬಳ್ಳಿಯಿಂದ ಪ್ರಯಾಣಿಸಿದ ಆಯಾಸದ ನಡುವೆಯೂ ಅತ್ಯುತ್ಸಾಹದಿಂದ ಗದ್ದೆಗೆ ಬಂದು ಸ್ವತಃಜೋಳ ಕಟಾವು ಮಾಡಿದರು. ಗಿರಿಬಳಗದ ಎಲ್ಲ ಸದಸ್ಯರು ಸಾಮೂಹಿಕವಾಗಿ ಬೀಜ ಬಿತ್ತಲು ಮತ್ತು ಕಟಾವು ಮಾಡಲು ಬಂದಿರುವುದನ್ನು ಶ್ರೀಗಳು ಶ್ಲಾಘಿಸಿದರು. ಮೇವಿನ ಪೋಷಣೆಗೈದ ಶ್ರೀಶ ಭಟ್ ಅವರನ್ನು ಅಭಿನಂದಿಸಲಾಯಿತು.
ಗಿರಿ ಬಳಗದ ಸ್ಥಾಪಕಾಧ್ಯಕ್ಷ ಗೋವಿಂದ ಭಟ್, ಅಧ್ಯಕ್ಷ ವಿನಯ ಪ್ರಸಾದ್ ಭಟ್, ಉಪಾಧ್ಯಕ್ಷ ಪುಂಡರೀಕಾಕ್ಷ ಭಟ್, ಕಾರ್ಯದರ್ಶಿ ಶ್ರೀನಿವಾಸ್ ಭಟ್, ಹಿರಿಯರಾದ ಗೋಪಾಲಕೃಷ್ಣ ಭಟ್, ಶ್ರೀನಿವಾಸ್ ಭಟ್, ಗಿರಿಧರ ಕುಂಜಾರ್, ರಾಘವೇಂದ್ರ ಭಟ್, ಲಕೀÒ$¾ನಾರಾಯಣ ಉಪಾಧ್ಯ, ಅರ್ಚಕ ಗೋಪಾಲಕೃಷ್ಣ ಭಟ್, ವಾಮನ ಭಟ್, ಗಿರಿ ಭಗಿನಿ ಅಧ್ಯಕ್ಷೆ ಮೀರಾ ಭಟ್ ಮತ್ತು ಸದಸ್ಯೆಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.