ಸಿಎಂಗೆ 40 ಜನರ ತಂಡದಿಂದ ಪಂಚಕರ್ಮ ಚಿಕಿತ್ಸೆ
Team Udayavani, Apr 30, 2019, 3:02 AM IST
ಕಾಪು: ಪ್ರಕೃತಿ ಮತ್ತು ಆಯುರ್ವೇದ ಚಿಕಿತ್ಸೆಗಾಗಿ ಭಾನುವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಗೆ ಆಗಮಿಸಿದ ಎಚ್.ಡಿ.ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರು ಕಾಪುವಿನ ಅಮೃತ್ ಗಾರ್ಡನ್‌ನಲ್ಲಿ ನಡೆದ ಮಾಜಿ ಶಾಸಕ ಗೋಪಾಲ ಪೂಜಾರಿ ಮತ್ತು ಬೆಂಗಳೂರಿನ ಉದ್ಯಮಿ ಪ್ರಭಾಕರ ಪೂಜಾರಿ ಕಾಪು ಇವರ ಮಕ್ಕಳ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು. ಬಳಿಕ, ಮೂಳೂರಿನ ಸಾಯಿರಾಧಾ ಹೆರಿಟೇಜ್‌ಗೆ ತೆರಳಿದರು.
ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ಡಾ| ತನ್ಮಯ್ ಗೋಸ್ವಾಮಿ ಅವರ ನೇತೃತ್ವದ ವೈದ್ಯಕೀಯ ತಂಡ, ದೇವೇಗೌಡ ಮತ್ತು ಕುಮಾರಸ್ವಾಮಿಗೆ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಪದ್ಧತಿಯ ಚಿಕಿತ್ಸೆ, ಮಸಾಜ್ ಸಹಿತ ಪಂಚಕರ್ಮ ಚಿಕಿತ್ಸೆ, ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿಯನ್ನು ನೀಡಲಿದೆ.
ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದಲ್ಲಿ 40 ಜನರ ತಂಡ ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿಯನ್ನು ನಡೆಸುತ್ತಿದೆ. 40 ಜನರ ತಂಡದಲ್ಲಿ 4 ಮಂದಿ ತಜ್ಞ ವೈದ್ಯರು, 20 ಮಂದಿ ಟೆಕ್ನೀಷಿಯನ್ಸ್ ಮತ್ತು 16 ಮಂದಿ ಸಿಬ್ಬಂದಿಗಳಿದ್ದಾರೆ.
ಆರೋಗ್ಯ ಗಟ್ಟಿಗೊಳಿಸಲು ಆಯುರ್ವೇದ ಔಷಧ, ಬಾಡಿ ಮಸಾಜ್ ಸಹಿತ ವಿವಿಧ ಮಾದರಿಯ ಚಿಕಿತ್ಸೆಗಳು ದೊರಕಲಿವೆ. ಸಿಎಂ ಮೇ 3ರ ವರೆಗೆ, ದೇವೇಗೌಡರು ಒಂದು ವಾರ ರೆಸಾರ್ಟ್‌ನಲ್ಲಿ ತಂಗಲಿದ್ದಾರೆ ಎಂದು ತಿಳಿದು ಬಂದಿದೆ. ರೆಸಾರ್ಟ್‌ಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ.
ಸಿ.ಎಂ.ಜತೆಗೆ ಆಗಮಿಸಿರುವ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್. ಎಲ್.ಭೋಜೆಗೌಡ ಕೂಡ ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರಿನಿಂದ ಕಾಪು ದೀಪಸ್ತಂಭದವರೆಗೆ ವಾಕಿಂಗ್ ಮಾಡಿದರೆ, ಭೋಜೇಗೌಡ ವೈದ್ಯರ ಸಲಹೆ ಪಡೆದು ಸಮುದ್ರ ದಡದಲ್ಲಿ ಸ್ಯಾಂಡ್ ಥೆರಪಿ ನಡೆಸಿದ್ದಾರೆ. ಬಳಿಕ, ಮೂಳೂರು ಬೀಚ್‌ನಲ್ಲಿ ಸಮುದ್ರ ಸ್ನಾನವನ್ನೂ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಮಧ್ಯೆ, ಸಿಎಂ ಮತ್ತು ಮಾಜಿ ಪ್ರಧಾನಿಗೆ ಭದ್ರತೆ ಒದಗಿಸುವ ಭರದಲ್ಲಿ ಪೊಲೀಸರು ಮಾಧ್ಯಮದವರನ್ನು ದೂರ ಇರಿಸುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಕಾಪು ವೃತ್ತ ನಿರೀಕ್ಷಕ ಶಾಂತರಾಮ್ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಇನ್ನು, ಸಿ.ಎಂ.ಜತೆಗೆ ಆಗಮಿಸಿರುವ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್. ಎಲ್.ಭೋಜೆಗೌಡ ಕೂಡ ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರಿನಿಂದ ಕಾಪು ದೀಪಸ್ತಂಭದವರೆಗೆ ವಾಕಿಂಗ್ ಮಾಡಿದರೆ, ಭೋಜೇಗೌಡ ವೈದ್ಯರ ಸಲಹೆ ಪಡೆದು ಸಮುದ್ರ ದಡದಲ್ಲಿ ಸ್ಯಾಂಡ್ ಥೆರಪಿ ನಡೆಸಿದ್ದಾರೆ. ಬಳಿಕ, ಮೂಳೂರು ಬೀಚ್‌ನಲ್ಲಿ ಸಮುದ್ರ ಸ್ನಾನವನ್ನೂ ಮಾಡಿರುವುದಾಗಿ ತಿಳಿದು ಬಂದಿದೆ.
ಸಿಎಂ ಮತ್ತು ಮಾಜಿ ಪಿಎಂಗೆ ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ವಿಶ್ರಾಂತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ವತಿಯಿಂದ ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿ ನಡೆಸಲಾಗುತ್ತದೆ. ಯೋಗ, ಲೇಪನ, ಮಸಾಜ್‌ನೊಂದಿಗೆ ಯೋಗಿಕ್ ಆಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರೋಗ್ಯ ವರ್ಧನೆ, ದೇಹದ ಪುಷ್ಠಿಕರಣಕ್ಕಾಗಿ ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ.
-ಡಾ| ತನ್ಮಯ್ ಗೋಸ್ವಾಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.