ಅಡ್ಯನಡ್ಕ: ರಾತ್ರಿ ವಾಹನ ಚಾಲಕರಿಗೆ ಉಚಿತ ಟೀ-ಕಾಫಿ
Team Udayavani, Apr 30, 2019, 6:30 AM IST
ಅಡ್ಯನಡ್ಕ: ಕರ್ನಾಟಕ-ಕೇರಳ ರಾಜ್ಯ ಹೆದ್ದಾರಿಯ ಕಾಸರಗೋಡಿನಿಂದ ಕಣ್ಣೂರಿಗೆ ಚಟ್ಟೆಂಚಾಲ್ ಮೂಲಕ ಸಾಗುವ ರಸ್ತೆಯಲ್ಲಿ ಮೈಲಾಟಿ ಸಮೀಪ ವಾಹನ ಚಾಲಕರಿಗೆ ಉಪಯೋಗವಾಗಲೆಂದು ಉಚಿತ ಟೀ, ಕಾಫಿ ವ್ಯವಸ್ಥೆಯಿದೆ.
ಇದನ್ನು ವ್ಯವಸ್ಥೆ ಮಾಡಿದವರು ಶೈನ್ ಐಸ್ಕ್ರೀಂನವರು. ಪ್ರತಿ ದಿನ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಉಚಿತ ಸೇವೆಯಿದೆ. 150 ಕಪ್ ಕಾಫಿ, ಟೀಯನ್ನು ಅಟೋಮ್ಯಾಟಿಕ್ ಯಂತ್ರದಲ್ಲಿ ತುಂಬಿಸಿಡಲಾಗಿದ್ದು, ಎರಡು ಟ್ಯಾಪ್ಗ್ಳಿವೆ.
ಜತೆಗೆ ಶುದ್ಧ ಕುಡಿಯುವ ನೀರಿನ ಘಟಕವೂ ಇದೆ. ಪುಟ್ಟ ಆಕರ್ಷಕ ನಿರ್ಮಾಣದಲ್ಲಿ ಇದನ್ನು ವ್ಯವಸ್ಥೆ ಮಾಡಲಾಗಿದ್ದು, ಸೌಲಭ್ಯದ ಬಗ್ಗೆ ರಸ್ತೆ ಬದಿ ಕನ್ನಡ, ಮಲಯಾಳ, ಹಿಂದಿ ಭಾಷೆಯಲ್ಲಿ ಬೋರ್ಡ್ ಹಾಕಲಾಗಿದೆ.
ರಾತ್ರಿ ನಿದ್ದೆ ತೂಗಿ ವಾಹನ ಚಾಲಕರು ಅಪಘಾತ ಮಾಡಿಕೊಳ್ಳಬಾರದೆಂಬ ಸದುದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದೇವೆ. ಆರಂಭಗೊಂಡು 2 ತಿಂಗಳಾಗಿದ್ದು, ವಾಹನ ಚಾಲಕರಿಂದ ಉತ್ತಮ ಪ್ರತಿಕ್ರಿಯ ಇದೆ. ಯಾರೂ ಇದನ್ನು ದುರು ಪಯೋಗಪಡಿಸಿಕೊಂಡಿಲ್ಲ ಎನ್ನುತ್ತಾರೆ ಸೇವಾಕರ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.