ಸೇನೆಗೆ ಸೇರಲು ಯುವ ಜನತೆಗೆ ನಿವೃತ್ತ ಸೇನಾಧಿಕಾರಿಗಳ ಕರೆ
Team Udayavani, Apr 30, 2019, 6:25 AM IST
ಮಡಿಕೇರಿ : ಕೊಡಗಿನ ಸೇನಾನಿಗಳು ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಮತ್ತು ಗೌರವ ಮೂಡಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕಾದರೆ ಇಂದಿನ ಯುವ ಸಮೂಹ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆ ಗೊಳ್ಳಬೇಕೆಂದು ಜಿಲ್ಲೆಯ ನಿವೃತ್ತ ಸೇನಾಧಿಕಾರಿಗಳು ಕರೆ ನೀಡಿದ್ದಾರೆ.
ಕೊಡವ ಮಕ್ಕಡ ಕೂಟದ 25ನೇ ಪ್ರಕಟಣೆಯಾಗಿ ಆಂಗ್ಲ ಭಾಷೆಯಲ್ಲಿ ಹೊರ ತಂದಿರುವ “ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್ ‘ಕೃತಿಯನ್ನು ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರಸ್‌ಕ್ಲಬ್ ಸಹಯೋಗದಲ್ಲಿ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ನಿವೃತ್ತ ಏರ್‌ಮಾರ್ಷಲ್ ಕೊಡಂದೇರ ಸಿ.ಕಾರ್ಯಪ್ಪ ಪಿವಿಎಸ್‌ಎಂ, ವಿಎಂ ಅವರು, ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರ ಪ್ರಾಮಾಣಿಕ ಸೇವೆ ಮತ್ತು ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಜನರಿಗೆ ಆದರ್ಶಪ್ರಾಯರಾಗಿರುವ ಇವರ ಸೇನಾ ಸಾಧನೆಯ ಪುಸ್ತಕವನ್ನು ಹೊರತಂದಿರುವುದು ಸ್ವಾಗತಾರ್ಹ. ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಅವರು ಗಣಪತಿ ಅವರ ಜೀವನ ಮತ್ತು ವ್ಯಕ್ತಿತ್ವಕ್ಕೆ ತಮ್ಮ ಪುಸ್ತಕದಲ್ಲಿ ನ್ಯಾಯ ಒದಗಿಸಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಸ್ತಕ ಲೋಕಾರ್ಪಣೆ ಮಾಡುವ ಅವಕಾಶ ದೊರಕಿದ್ದು ನನಗೆ ಸಂದ ಗೌರವ ಎಂದು ಅಭಿಮಾನದಿಂದ ನುಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಾ.ಬಿಎನ್‌ಬಿಎಂ ಪ್ರಸಾದ್ ಎಸ್‌ಎಂ, ವಿಎಸ್‌ಎಂ, ಸೇನೆಯಲ್ಲಿ ಕೊಡಗಿನ ಸೇನಾಧಿಕಾರಿಗಳಿಗೆ ವಿಶೇಷ ಗೌರವವಿದ್ದು, ಕೊಡವರ ಸೇನಾಸೇವೆಯ ಕೊಡುಗೆ ಮತ್ತಷ್ಟು ಹೆಚ್ಚಾಗಬೇಕು. ಇದಕ್ಕೆ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹ ಸೇನೆಗೆ ಸೇರ್ಪಡೆಗೊಳ್ಳಬೇಕೆಂದು ಕರೆ ನೀಡಿದರು.
ಕೊಡಗು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಅವರು ಮಾತನಾಡಿದರು.
ಎಸ್‌ಎಂ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ ,ಕೊಡಗು ಪ್ರಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕ ಸಮಿತಿ ಸಂಚಾಲಕ ಬಿ.ಸಿ.ದಿನೇಶ್ ಉಪಸ್ಥಿತರಿದ್ದರು. ಬಾಳೆಯಡ ದಿವ್ಯಾ ಮಾದಪ್ಪ ನಿರೂಪಿಸಿ, ಪತ್ರಕರ್ತ ಕಿಶೋರ್ ರೈ ವಂದಿಸಿದರು. ಚೊಟ್ಟಂಡ ನಿಶಿತಾ ದೇಚಮ್ಮ ಪ್ರಾರ್ಥಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.