ಪಿಯುಸಿ ಉತ್ತೀರ್ಣರಾದವರಿಗೆ ನಾಳೆ ಕೆರಿಯರ್ ಮಾರ್ಗದರ್ಶನ
ಉದಯವಾಣಿ ಶಿಕ್ಷಣ ಕಾರ್ಯಕ್ರಮ
Team Udayavani, Apr 30, 2019, 6:30 AM IST
ಉಡುಪಿ: ಉದಯವಾಣಿಯು ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಸಾಧ್ಯತೆ ಹಾಗೂ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವನ್ನು ಮೇ 1ರಂದು ಹಮ್ಮಿಕೊಂಡಿದೆ.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 8.30ರಿಂದ ಅಪರಾಹ್ನ 1ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಷಯದಲ್ಲಿರುವ ಅವಕಾಶಗಳ ಬಗ್ಗೆ ಆಯಾ ಕ್ಷೇತ್ರಗಳ ಪರಿಣಿತರು ಸೂಕ್ತ ಮಾರ್ಗದರ್ಶನ ನೀಡುವರು.
ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣರಾದವರೆಲ್ಲರೂ ಭಾಗವಹಿಸಬಹುದಾಗಿದೆ.
ಈಗಾಗಲೇ ಪತ್ರಿಕೆಯ ವಾಟ್ಸಪ್ ನಂಬರ್ ಮೂಲಕ ಶಿಬಿರದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿರುವವರಿಗೆ ಮಾಹಿತಿ ರವಾನಿಸಲಾಗಿದೆ. ಅಲ್ಲದೇ ಇದುವರೆಗೆ ಹೆಸರು ನೋಂದಾಯಿಸದವರೂ ನೇರವಾಗಿ ಸ್ಥಳದಲ್ಲಿಯೇ ಹೆಸರು ನೋಂದಣಿ ಮಾಡಲು ಅವಕಾಶವಿದೆ.
ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಪತ್ರಿಕೆಯು ಕರಾವಳಿಯ ಯುವಜನರ ಭವಿಷ್ಯವನ್ನು ಗಟ್ಟಿಗೊಳಿಸುವಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸರಣಿಯ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೂ ಭಾಗವಹಿಸಬಹುದು.
ಪಿಯುಸಿ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ
ಅದೇ ದಿನ ಅಪರಾಹ್ನ 2ರಿಂದ 3.30ರ ವರೆಗೆ ಮತ್ತೂಂದು ವಿಶೇಷ ಕಾರ್ಯಕ್ರಮವಿದೆ. ಇದರಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ಸಿದ್ಧರಾಗಿರುವವರಿಗೆ ಪರಿಣಿತರು ವಿವಿಧ ಕೋರ್ಸ್‌ಗಳ ಸ್ಥೂಲ ವಿವರ ನೀಡುವರು.
ಮುಕ್ತ ಅವಕಾಶ
ಈ ಉಪನ್ಯಾಸದಲ್ಲಿಯೂ ವಿಜ್ಞಾನ, ವಾಣಿಜ್ಯ, ಕಲಾ ವಿಷಯವನ್ನು ಒಳಗೊಂಡಿರುತ್ತದೆ. ಭಾಗವಹಿಸಲು ಯಾವುದೇ ಶುಲ್ಕವಿರು ವುದಿಲ್ಲ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಲ್ಲದೇ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲಡ್ಡಿಯಿಲ್ಲ.
ಶನಿವಾರ ಮಂಗಳೂರಿನಲ್ಲಿ
ಇದೇ ಕಾರ್ಯಕ್ರಮ ಮಂಗಳೂರಿನಲ್ಲಿ ಮೇ 4ರಂದು ನಡೆಯಲಿದೆ. ಸ್ಥಳ ಮತ್ತಿತರ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಮೂಡುಬಿದಿರೆ, ಬೆಳ್ತಂಗಡಿ ಮತ್ತಿತರ ತಾಲೂಕುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಮಾಹಿತಿ: 8095192817
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.