![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 30, 2019, 6:00 AM IST
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷ ವಜಾಗೊಂಡ ಯೋಧ ತೇಜ್ ಬಹಾದೂರ್ ಯಾದವ್‌ರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವುದಿಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತಿದ್ದಂತೆ, ಸಮಾಜವಾದಿ ಪಕ್ಷವು ಇಲ್ಲಿ ಸ್ಪರ್ಧಿಸಿದ್ದ ಶಾಲಿನಿ ಯಾದವ್ ಅವರನ್ನು ಬದಲಿಸಿ ತೇಜ್ ಬಹಾದೂರ್‌ಗೆ ಮಣೆ ಹಾಕಿದೆ. ಈ ಮೂಲಕ ವಾರಾಣಸಿಯ ಸಮರಕ್ಕೆ “ಯೋಧ ವರ್ಸಸ್ ಚೌಕಿದಾರ’ ಎಂಬ ತಿರುವು ಕೊಟ್ಟಿದೆ.
ತೇಜ್ ಬಹಾದೂರ್ ಬಿಎಸ್‌ಎಫ್ ಕಾನ್‌ಸ್ಟೆàಬಲ್ ಆಗಿ ಕಾರ್ಯನಿರ್ವಹಿ ಸುತ್ತಿ ದ್ದರು. 2017ರಲ್ಲಿ ಅವರು ಶಿಬಿರಗಳಲ್ಲಿ ಯೋಧ ರಿ ಗೆ ನೀಡಲಾಗುತ್ತಿದ್ದ ಕಳಪೆ ಆಹಾರದ ವಿಡಿಯೋ ಸೆರೆಹಿಡಿದು ಸಾಮಾ ಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಇದು ವೈರಲ್ ಆದ ಬಳಿಕ ಅವರನ್ನು ವಜಾ ಮಾಡಲಾಗಿತ್ತು.
ಸೋಮವಾರ, ನಾಮಪತ್ರ ಸಲ್ಲಿಸಿ, ಮಾತನಾಡಿದ ಅವರು, “2014 ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗ, ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡು ತ್ತಾರೆ ಎಂದು ಜನ ಭರವಸೆ ಇಟ್ಟುಕೊಂಡಿ ದ್ದರು. ಹೀಗಾಗಿ ನಾನು ಕೂಡ ಸೇನೆಯಲ್ಲಿನ ಭ್ರಷ್ಟಾಚಾರ ಮತ್ತು ಲೋಪಗಳ ಬಗ್ಗೆ ಹಲವು ಬಾರಿ ಪತ್ರ ಬರೆದಿದ್ದೆ. ಕೆಲಸದಿಂದಲೂ ನನ್ನನ್ನು ಕಿತ್ತುಹಾಕಲಾಯಿತು. ಪ್ರಧಾನಿ ಮೋದಿ ಭ್ರಷ್ಟರೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಯಿತು’ ಎಂದಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.