ತವರಲ್ಲಿ ಗೆದ್ದ ಹೈದರಾಬಾದ್
Team Udayavani, Apr 30, 2019, 10:02 AM IST
ಹೈದರಾಬಾದ್: ಪಂಜಾಬ್ ಎದುರಿನ ಸೋಮವಾರದ ಐಪಿಎಲ್ ಮೇಲಾಟದಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್ 45 ರನ್ನುಗಳಿಂದ ಪಂಜಾಬ್‌ಗ ಸೋಲುಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 6 ವಿಕೆಟಿಗೆ 212 ರನ್ ಪೇರಿಸಿದರೆ, ಪಂಜಾಬ್ ತಂಡವು ಹೈದರಾಬಾದ್‌ನ ಬಿಗು ದಾಳಿಗೆ ತತ್ತರಿಸಿ 8 ವಿಕೆಟಿಗೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಕೆಎಲ್ ರಾಹುಲ್ ಬಿರುಸಿನ ಆಟವಾಡಿ 79 ರನ್ ಹೊಡೆದರು. 56 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದರು. ಉಳಿದ ಯಾವುದೇ ಆಟಗಾರರಿಂದ ಉತ್ತಮ ಆಟ ಬಂದಿಲ್ಲ.
ಆರಂಭದಿಂದಲೂ ಅಮೋಘ ಬ್ಯಾಟಿಂಗ್ ಫಾರ್ಮ್ ಪ್ರದರ್ಶಿಸುತ್ತ ಬಂದ ವಾರ್ನರ್ 81 ರನ್ ಬಾರಿಸಿ ಮೆರೆದಾಡಿದರು. ಇದರೊಂದಿಗೆ ಐಪಿಎಲ್ ಋತುವೊಂದರಲ್ಲಿ 9 ಸಲ “50 ಪ್ಲಸ್’ ರನ್ ದಾಖಲಿಸಿ ದ್ವಿತೀಯ ಸ್ಥಾನ ಅಲಂಕರಿಸಿದರು. ವಿರಾಟ್ ಕೊಹ್ಲಿ 2016ರಲ್ಲಿ 11 ಸಲ ಐವತ್ತರ ಗಡಿ ದಾಟಿದ್ದು ಐಪಿಎಲ್ ದಾಖಲೆಯಾಗಿದೆ. ಪ್ರಸಕ್ತ ಋತುವಿನ ಕೊನೆಯ ಪಂದ್ಯವಾಡಿದ ವಾರ್ನರ್ ತಮ್ಮ ರನ್ ಗಳಿಕೆಯನ್ನು 692ಕ್ಕೆ ವಿಸ್ತರಿಸಿದರು.
ವಾರ್ನರ್ ಅವರ 56 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು. ಅವರಿಗೆ ಆರಂಭಿಕ ಜೋಡಿ ಯಾಗಿ ಬಂದ ವೃದ್ಧಿಮಾನ್ ಸಾಹಾ 13 ಎಸೆತ ಎದುರಿಸಿ 28 ರನ್ ಬಾರಿಸಿದರು (3 ಬೌಂಡರಿ, 1 ಸಿಕ್ಸರ್). ಇವರಿಬ್ಬರು ಮೊದಲ ವಿಕೆಟಿಗೆ 6.2 ಓವರ್‌ಗಳಿಂದ 78 ರನ್ ಒಟ್ಟುಗೂಡಿಸಿದರು.
ವನ್‌ಡೌನ್‌ನಲ್ಲಿ ಬಂದ ಮನೀಷ್ ಪಾಂಡೆ ಕೂಡ ಸೊಗಸಾದ ಆಟವಾಡಿದರು. ಪಾಂಡೆ ಗಳಿಕೆ 36 ರನ್ (3 ಬೌಂಡರಿ, 1 ಸಿಕ್ಸರ್). ಮೊಹಮ್ಮದ್ ನಬಿ 10 ಎಸೆತ ಎದುರಿಸಿ 20 ರನ್ ಮಾಡಿದರು. ನಾಯಕ ವಿಲಿಯಮ್ಸನ್ ಯಶಸ್ಸು ಕಾಣಲಿಲ್ಲ (14).
ಪಂಜಾಬ್ ಬೌಲಿಂಗ್ ತೀರಾ ಕಳಪೆಯಾಗಿತ್ತು. 212ರಲ್ಲಿ 20 ರನ್ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು. ಇದರಲ್ಲಿ 14 ವೈಡ್‌ಗಳಿದ್ದವು. ವೈಡ್ ಒಂದರಿಂದಲೇ ಪಂಜಾಬ್ ಹೆಚ್ಚುವರಿಯಾಗಿ 2.2 ಓವರ್ ಎಸೆದಂತಾಯಿತು. ಹಾಗೆಯೇ ಮುಜೀಬ್ ಉರ್ ರೆಹಮಾನ್ 66 ರನ್ ಬಿಟ್ಟುಕೊಟ್ಟು ಐಪಿಎಲ್‌ನ ದುಬಾರಿ ಸ್ಪಿನ್ನರ್ ಎಂಬ ಅವಮಾನಕ್ಕೆ ಸಿಲುಕಿದರು.
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಮುಜೀಬ್ ಬಿ ಅಶ್ವಿನ್ 81
ವೃದ್ಧಿಮಾನ್ ಸಾಹಾ ಸಿ ಸಿಮ್ರಾನ್ ಬಿ ಎಂ.ಅಶ್ವಿನ್ 28
ಮನೀಷ್ ಪಾಂಡೆ ಸಿ ಶಮಿ ಬಿ ಅಶ್ವಿನ್ 36
ಮೊಹಮ್ಮದ್ ನಬಿ ಬಿ ಶಮಿ 20
ಕೇನ್ ವಿಲಿಯಮ್ಸನ್ ಸಿ ಎಂ.ಅಶ್ವಿನ್ ಬಿ ಶಮಿ 14
ರಶೀದ್ ಖಾನ್ ಬಿ ಅರ್ಶದೀಪ್ 1
ವಿಜಯ್ ಶಂಕರ್ ಔಟಾಗದೆ 7
ಅಭಿಷೇಕ್ ಶರ್ಮ ಔಟಾಗದೆ 5
ಇತರ 20
ಒಟ್ಟು (6 ವಿಕೆಟಿಗೆ) 212
ವಿಕೆಟ್ ಪತನ: 1-78, 2-160, 3-163, 4-197, 5-198, 6-202.
ಬೌಲಿಂಗ್: ಅರ್ಶದೀಪ್ ಸಿಂಗ್ 4-0-42-1
ಮುಜೀಬ್ ಉರ್ ರೆಹಮಾನ್ 4-0-66-0
ಮೊಹಮ್ಮದ್ ಶಮಿ 4-0-36-2
ಆರ್. ಅಶ್ವಿನ್ 4-0-30-2
ಮುರುಗನ್ ಅಶ್ವಿನ್ 4-0-32-1
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ವಿಲಿಯಮ್ಸನ್ ಬಿ ಅಹ್ಮದ್ 79
ಕ್ರಿಸ್ ಗೇಲ್ ಸಿ ಪಾಂಡೆ ಬಿ ಖಲೀಲ್ 4
ಮಾಯಾಂಕ್ ಅಗರ್ವಾಲ್ ಸಿ ಶಂಕರ್ ಬಿ ರಶೀದ್ 27
ನಿಕೋಲಸ್ ಪೂರಣ್ ಸಿ ಭುವನೇಶ್ವರ್ ಬಿ ಖಲೀಲ್ 21
ಡೇವಿಡ್ ಮಿಲ್ಲರ್ ಸಿ ಶಂಕರ್ ಬಿ ರಶೀದ್ 11
ಆರ್. ಅಶ್ವಿನ್ ಸಿ ಪಾಂಡೆ ಬಿ ರಶೀದ್ 0
ಸಿಮ್ರಾನ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಸಂದೀಪ್ 16
ಮುರುಗನ್ ಅಶ್ವಿನ್ ಔಟಾಗದೆ 1
ಮುಜೀಬ್ ಉರ್ ರೆಹಮಾನ್ ಬಿ ಸಂದೀಪ್ ಶರ್ಮ 0
ಮೊಹಮ್ಮದ್ ಶಮಿ ಔಟಾಗದೆ 1
ಇತರ 7
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 167
ವಿಕೆಟ್ ಪತನ: 1-11, 2-71, 3-95, 4-107, 5-107, 6-160, 7-165, 8-165
ಬೌಲಿಂಗ್: ಖಲೀಲ್ ಅಹ್ಮದ್ 4-0-40-3
ಭುವನೇಶ್ವರ್ ಕುಮಾರ್ 4-0-34-0
ಸಂದೀಪ್ ಶರ್ಮ 4-0-33-2
ರಶೀದ್ ಖಾನ್ 4-0-21-3
ಅಭಿಷೇಕ್ ಶರ್ಮ 1-0-11-0
ಮೊಹಮ್ಮದ್ ನಬಿ 3-0-28-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.