ಜಿಲ್ಲಾ ಚುನಾವಣಾಧಿಕಾರಿ ವರ್ಗಾವಣೆಗೆ ರೇವಣ್ಣ ಪಟ್ಟು

ಹಿಂದಿನ ಡೀಸಿ ರೋಹಿಣಿ ಸಿಂಧೂರಿ ಕುಮ್ಮಕ್ಕಿನಿಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಬಿಜೆಪಿ ಏಜೆಂಟರಂತೆ ವರ್ತನೆ: ಆರೋಪ

Team Udayavani, Apr 30, 2019, 4:34 PM IST

hasana-1-tdy..

ಹಾಸನ: ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಚುನಾವಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಈ ವರೆಗೆ ಅವರ ಎಲ್ಲಾ ನಿರ್ಧಾರಗಳು ಹಾಗೂ ನಡವಳಿಕೆಗಳ ಬಗ್ಗೆ ಸಮಗ್ರ ತನಿಖೆಯಾಗ ಬೇಕೆಂದು ಆಗ್ರಹಿಸಿದರು.

ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಹಾಸನ ಲೋಕ ಸಭಾ ಚುನಾವಣೆಯ ಮತ ಎಣಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸುವರೆಂಬ ನಂಬಿಕೆ ನಮಗಿಲ್ಲ. ಹಾಗಾಗಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡ ಬೇಕೆಂದು ಚುನಾವಣಾ ಆಯೋಗಕ್ಕೆ ದೂರವಾಣಿ ಮೂಲಕ ಮನವಿ ಮಾಡಿದ್ದು, ಲಿಖೀತ ದೂರನ್ನೂ ಸಲ್ಲಿಸುವೆ ಎಂದು ಹೇಳಿದರು.

ರೋಹಿಣಿ ಕುಮ್ಮಕ್ಕು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕುಮ್ಮಕ್ಕಿನಿಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಬಿಜೆಪಿ ಪರವಾದ ಹಾಗೂ ಜೆಡಿಎಸ್‌ ವಿರುದ್ಧವಾದ ನಿಲುವುಗಳನ್ನು ತಳೆದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿಯವರು ಹಣ ಸಾಗಣೆ ಮಾಡುತ್ತಿರುವ, ಮತದಾರರಿಗೆ ಹಣ ಹಂಚುತ್ತಿರುವ ಬಗ್ಗೆ ಜೆಡಿಎಸ್‌ ದೂರು ನೀಡಿದರೂ ದಾಳಿ ನಡೆಸಲಿಲ್ಲ. ಆದರೆ ಜೆಡಿಎಸ್‌ ಮುಖಂಡರ ವಾಹನಗಳ ಹಿಂಬಾಲಿಸಿ, ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ. ಆದರೆ ಚುನಾವಣೆ ಇನ್ನು ಎರಡು ದಿನಗಳಿರುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಳೆನರಸೀಪುರದಲ್ಲಿ ನನ್ನ ಆಪ್ತ ಸಹಾಯಕನಿಂದ ವಶಪಡಿಸಿಕೊಂಡಿದ್ದ ಹಣವನ್ನು ನನ್ನ ಬೆಂಗಾವಲು ಸಿಬ್ಬಂದಿಯ ವಾಹನದಲ್ಲಿ ಉದ್ದೇಶ ಪೂರ್ವಕವಾಗಿ ಹಣ ಇರಿಸಿ ಫ್ಲೈಯಿಂಗ್‌ ಸ್ವ್ಯಾಡ್‌ನಿಂದ ದಾಳಿ ಮಾಡಿಸಿ ದೂರು ದಾಖಲು ಮಾಡಿಸಿದರು ಎಂದು ದೂರಿದರು.

ಅಧಿಕಾರಿಗಳ ಮೇಲೆ ಡೀಸಿ ಒತ್ತಡ: ಸಹಾಯಕ ಚುನಾವಣಾಧಿಕಾರಿಗಳು, ಚುನಾವಣೆ ಕೆಲಸದಲ್ಲಿ ನಿರತರಾಗಿದ್ದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜೆಡಿಎಸ್‌ ವಿರುದ್ಧ ನಿರ್ದಿಷ್ಟ ರೀತಿಯಲ್ಲಿಯೇ ದೂರು ದಾಖಲಿಸಬೇಕು ಎಂದು ಪ್ರಿಯಾಂಕ ಮೇರಿ ಒತ್ತಡ ಹೇರುತ್ತಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕುಮ್ಕಕ್ಕಿನಂತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರಿಯಾಂಕ ಮೇರಿ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಡೀಸಿ ನಿವಾಸದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಭೇಟಿಯಾಗುವ ಔಚಿತ್ಯ ವೇನಿತ್ತು? ಚುನಾವಣಾ ಆಯೋಗದ ಗಮನಕ್ಕೂ ತರದೇ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿ ನಿವಾಸದಲ್ಲಿ 2 ದಿನ ಇರಿಸಿಕೊಳ್ಳುವ ಅಗತ್ಯವೇನಿತ್ತು? ಈ ಎಲ್ಲಾ ಅಂಶಗಳನ್ನೂ ರಾಜ್ಯ ಮುಖ್ಯ ಚುನಾವಣಾ ಧಿಕಾರಿಯವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಲಿಖೀತ ದೂರು ನೀಡುವುದಾಗಿ ರೇವಣ್ಣ ಅವರು ಹೇಳಿದರು.

ದಾಖಲೆ ನಾಶ ಸಾಧ್ಯತೆ: ಮತಗಳ ಎಣಿಕೆಯವರೆಗೂ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರೇ ಇದ್ದರೆ ನ್ಯಾಯಸಮ್ಮತವಾಗಿ ಮತಗಳ ಎಣಿಕೆ ನಡೆಯುವ ನಂಬಿಕೆ ನಮಗಿಲ್ಲ. ಅವರು ದಾಖಲೆಗಳನ್ನು ನಾಶ ಪಡಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದೂ ರೇವಣ್ಣ ಅವರು ಒತ್ತಾಯಿಸಿದರು.

ಚುನಾವಣಾ ಸಿಬ್ಬಂದಿಗೆ ಡೀಸಿ ತೊಂದರೆ: ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಜಿಲ್ಲಾ ಚುನಾವಣಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕೆಲವು ಚುನಾವಣೆಯ ಸಿಬ್ಬಂದಿಗೆ ತೊಂದರೆ ಕೊಟ್ಟಿ ದ್ದಾರೆ. ಆದರೆ ಚುನಾವಣೆ ಕೆಲಸಕ್ಕೆ ನಿಯೋಜನೆ ಯಾಗಿದ್ದ ಒಬ್ಬ ಆರ್‌ಟಿಒ ಕಚೇರಿ ಅಧಿಕಾರಿಯನ್ನು ತಮ್ಮ ಕಚೇರಿಗೆ ಕರೆಸಿ ವಿನಾ ಕಾರಣ ತರಾಟೆಗೆ ತೆಗೆದು ಕೊಂಡಿದ್ದರಿಂದ ಗಾಬರಿಗೊಂಡ ಅಧಿಕಾರಿ ಹೃದಯಾ ಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಹಾಸನದಲ್ಲಿ ಚಿಕಿತ್ಸೆ ಪಡೆದು ಆನಂತರ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದರು. ಜಿಲ್ಲಾ ಜೆಡಿಎಸ್‌ ಮುಖಂಡ ಪಟೇಲ್ ಶಿವರಾಂ, ರಾಜೇ ಗೌಡ, ವಕೀಲರಾದ ಮಳಲಿ ಜಯರಾಂ, ಶ್ರೀಧರ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಕುತಂತ್ರ:
ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನ ಸ್ವಗ್ರಾಮ ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಕುತಂತ್ರ ನಡೆದಿದೆ ಎಂದು ಎಚ್.ಡಿ. ರೇವಣ್ಣ ಅವರು ಜಿಲ್ಲಾ ಚುನಾವಣಾಧಿಕಾರಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚುನಾವಣಾ ದಿನಾಂಕ ಘೋಷಣೆಯಾದ ನಂತರ ವರ್ಗಾವಣೆಯಾಗಿದ್ದರು. ಅವರ ಕುಮ್ಮಕ್ಕಿ ನಿಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ದುರುದ್ದೇಶದಿಂದ ಜೆಡಿಎಸ್‌ನಿಂದ ಜೆಡಿಎಸ್‌ಗೆ ಕಪ್ಪು ಚುಕ್ಕೆ ಇಡುವ ಕುತಂತ್ರ ನಡೆಸುತ್ತಿದ್ದಾರೆ. ಚುನಾವಣೆ ಏ.18 ರಂದು ನಡೆದ ನಂತರ ಜಿಲ್ಲೆ ಯಲ್ಲಿ ಶಾಂತಿಯುತ ಹಾಗೂ ಮುಕ್ತ ಚುನಾವಣೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯವರೇ ಧನ್ಯವಾದ ಹೇಳಿದ್ದಾರೆ.

ಆದರೂ ಏ.24 ರಂದು ಪಡುವಲಹಿಪ್ಪೆಯ ಬಿಜೆಪಿ ಪೋಲಿಂಗ್‌ ಏಜೆಂಟನಿಂದ ದೂರು ಸ್ವೀಕರಿಸಿರುವ ಜಿಲ್ಲಾ ಚುನಾವಣಾಧಿಕಾರಿಯವರ ಮೇಲೆ ಯಾರ ಒತ್ತಡವಿತ್ತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದ್ದರೆ ಬಿಜೆಪಿ ಪೋಲಿಂಗ್‌ ಏಜೆಂಟ್ ಅಂದೇ ಏಕೆ ದೂರು ನೀಡಲಿಲ್ಲ? ಮತದಾನ ಮುಗಿದು ಚುನಾವಣೆ ಸಂಬಂಧದ 17(ಎ)ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಭದ್ರತಾ ಕೊಠಡಿಯೊಳಗಿರಿಸಲಾಗಿದೆ. ಚುನಾವಣೆ ನಡೆದ 6 ದಿನಗಳ ನಂತರ ಚುನಾವಣಾ ವೀಕ್ಷಕರ ಗಮನಕ್ಕೂ ತರದೆ, ಆ ಮತಗಟ್ಟೆಯ ಜೆಡಿಎಸ್‌ ಏಜೆಂಟರಿಂದ ಮಾಹಿತಿ ಪಡೆಯದೇ, ಏಕ ಪಕ್ಷೀ ಯವಾಗಿ ತನಿಖೆ ನಡೆಸಿ ಅಕ್ರಮ ಮತದಾನ ನಡೆದಿದೆ ಎಂದು ಅಧಿಕಾರಿಗಳನ್ನು ಸ್ಪಸೆಂಡ್‌ ಮಾಡುವುದು, ಸಹಾಯಕ ಚುನಾವಣಾ ಧಿಕಾರಿಗಳ ಮೇಲೆ ಒತ್ತಡ ಹೇರಿ ನಿರ್ದಿಷ್ಟ ಮಾದರಿಯಲ್ಲಿಯೇ ದೂರು ದಾಖಲು ಮಾಡುವಂತೆ ನಿರ್ದೇಶನ ನೀಡುವುದಾರೆ ಜಿಲ್ಲಾ ಚುನಾವಣಾಧಿ ಕಾರಿಯವರು ಯಾರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಪ್ರಶ್ನಿಸಿದರು.

ಪಡುವಲಹಿಪ್ಪೆ ಮತಗಟ್ಟೆಯ ಬಿಜೆಪಿ ಏಜೆಂಟ್ ಪಡುವಲಹಿಪ್ಪೆಯ ಮತಗಟ್ಟೆಯ ಮತದಾರನೇ ಅಲ್ಲ. ಆತ ಮಾರಗೋಡನಹಳ್ಳಿಯವರು. ಆತ ಹೊಳೆನರಸೀಪುರ ತಾಲೂಕು ಬಿಜೆಪಿ ಅಧ್ಯಕ್ಷ. ಜಿಲ್ಲಾ ಚುನಾವಣಾಧಿಕಾರಿಯವರಿಗೆ ದೂರು ನೀಡಿರುವ ಇನ್ನೊಬ್ಬ ಮಾಯಣ್ಣ ಎಂಬಾತ ಹೊಳೆನರಸೀಪುರ ಪಟ್ಟಣದ ನಿವಾಸಿ. ಅವ ರಿಬ್ಬರಿಗೂ ಪಡುವಲಹಿಪ್ಪೆ ಮತಗಟ್ಟೆಯ ಮತ ದಾರರ ಪರಿಚಯವೇ ಇಲ್ಲ. ಅವರು ಹೇಗೆ ಸ್ಥಳೀಯ ಮತದಾರರನ್ನು ಗುರ್ತಿಸುತ್ತಾರೆ? ಆ ಮತಗಟ್ಟೆಯಲ್ಲಿ ಇನ್ನೂ 200 ಜನರು ಮತ ಚಲಾವಣೆಯನ್ನೇ ಮಾಡಿಲ್ಲ. ಅಕ್ರಮವಾಗಿ ಮತ ಚಲಾವಣೆ ಮಾಡುವುದಿದ್ದರೆ 200 ಮತಗಳು ಏಕೆ ಉಳಿಯುತ್ತಿದ್ದವು ಎಂದು ರೇವಣ್ಣ ಅವರು ಪ್ರಶ್ನಿಸಿದರು.

 

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.